
ಸ್ಯಾಂಡಲ್‌ವುಡ್ (Sandalwood) ನಟಿ ಸಂಜನಾ ಗಲ್ರಾನಿ (Sanjana Galrani) ಅಲಿಯಾಸ್ ಮಹಿರಾ (Mahira) ಅವರು ಪತಿ ಮತ್ತು ಮಗನೊಂದಿಗೆ ಮಕ್ಕಾ, ಮದೀನಾಗೆ ಭೇಟಿ ನೀಡಿದ್ದಾರೆ. ಈ ಕುರಿತ ಫೋಟೋಗಳನ್ನ ನಟಿ ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದಾರೆ.

ಸಂಜನಾ ಅವರು ಡಾ. ಅಜೀಜ್ ಪಾಷಾರನ್ನ ಪ್ರೀತಿಸಿ ಮದುವೆಯಾಗಿದ್ದಾರೆ. ಇದೀಗ ಅಲಾರಿಕ್ ಎಂಬ ಮುದ್ದಾದ ಗಂಡು ಮಗುವಿನ ತಾಯಿಯಾಗಿದ್ದಾರೆ. ಮಗನ ಆರೈಕೆಯ ಜೊತೆಗೆ ಮಲಯಾಳಂ ಚಿತ್ರದ ಮೂಲಕ ಸಂಜನಾ ಇದೀಗ ನಟನೆಗೆ ಕಂಬ್ಯಾಕ್ ಆಗಿದ್ದಾರೆ.

ಇದೀಗ ಇಸ್ಲಾಂ ಧರ್ಮದ ಪವಿತ್ರ ಸ್ಥಳವಾದ ಮಕ್ಕಾ, ಮದೀನಾಗೆ (Mecca Medina) ಕುಟುಂಬದ ಜೊತೆ ಸಂಜನಾ ಭೇಟಿ ನೀಡಿದ್ದಾರೆ. ನಟಿ, ಮಕ್ಕಾ ಮದೀನಾ ಭೇಟಿಯ ವಿಡಿಯೋವನ್ನು ಅವರ ಯೂಟ್ಯೂಬ್ ಚಾನೆಲ್ ಮೂಲಕವಾಗಿ ಹಂಚಿಕೊಂಡಿದ್ದಾರೆ. ಜೊತೆಗೆ ಅಲ್ಲಿನ ರೀತಿ ರಿವಾಜುಗಳನ್ನು ಕೂಡಾ ವಿವರಿಸಿದ್ದಾರೆ.

ಮೇ 19 ರಂದು ಮಗ ಅಲಾರಿಕ್ ಮೊದಲ ವರ್ಷದ ಹುಟ್ಟುಹಬ್ಬವನ್ನು ಸಂಜನಾ ಗಲ್ರಾನಿ ಪವಿತ್ರ ಯಾತ್ರಾಸ್ಥಳ ಮಕ್ಕಾದಲ್ಲಿ ಆಚರಿಸಿದ್ದಾರೆ. ಈ ಫೋಟೋಗಳು ಇದೀಗ ವೈರಲ್ ಆಗಿವೆ. ಅಭಿಮಾನಿಗಳು ವಿಭಿನ್ನವಾಗಿ ಕಾಮೆಂಟ್ ಮಾಡುತ್ತಿದ್ದಾರೆ. ಇನ್ನೂ 2018ರಲ್ಲಿ ಇಸ್ಲಾಂ ಧರ್ಮಕ್ಕೆ ಮತಾಂತರವಾಗಿ ತಮ್ಮ ಹೆಸರನ್ನು ಮಹಿರಾ ಎಂದು ಬದಲಿಸಿಕೊಂಡಿದ್ದಾರೆ.

