
ಬೆಂಗಳೂರು: ಹಿಂದೂಪರ ಕಾರ್ಯಕರ್ತರಿಗಾಗಿ ಸಹಾಯವಾಣಿ ಓಪನ್ ಮಾಡಿ ರಾಮಸೇನೆ ಸಂಸ್ಥಾಪಕ ಅಧ್ಯಕ್ಷ ಪ್ರಮೋದ್ ಮುತಾಲಿಕ್ (Pramod Muthalik) ಚಾಲನೆ ನೀಡಿದ್ದಾರೆ. ರಾಜ್ಯದಲ್ಲಿ ಹಿಂದೂಪರ ಕಾರ್ಯಕರ್ತರ ಮೇಲೆ ನಡೆಯುತ್ತಿರುವ ದೌರ್ಜನ್ಯವನ್ನ ಖಂಡಿಸಿ ಮತ್ತು ಅವರ ಸಮಸ್ಯೆಗಳ ಕುರಿತು ಮಾಹಿತಿ ಪಡೆಯಲು ರಾಜ್ಯ ಶ್ರೀರಾಮಸೇನೆ ಸಂಘಟನೆಯ ಪ್ರಮುಖರ ಸಂಪರ್ಕಕ್ಕಾಗಿ ಅಧಿಕೃತ ನಂಬರನ್ನು ಬಿಡುಗಡೆ ಮಾಡಲಾಗಿದೆ. ಹಿಂದೂಪರ ಕಾರ್ಯಕರ್ತರು ಈ ನಂಬರ್ ಗೆ ಕರೆ ಮಾಡಿ 9945288819 ಮಾಹಿತಿ ನೀಡಬಹುದು. ವರ್ಷದ 365 ದಿನವು, ದಿನದ 24 ಗಂಟೆ ಈ ನಂಬರ್ಗೆ ಕರೆ ಮಾಡಿ ಮಾಹಿತಿ ನೀಡಬಹುದು ಎಂದಿದ್ದಾರೆ.

ಇನ್ನು ಇತ್ತಿಚೆಗಷ್ಟೇ ಕಾರ್ಕಳ ಕ್ಷೇತ್ರದಿಂದ ಚುನಾವಣೆಯಲ್ಲಿ ಸ್ಪರ್ಧಿಸಿ ಸೋಲುಂಡಿದ್ದ ಪ್ರಮೋದ್ ಮುತಾಲಿಕ್
ಉಡುಪಿ: ಕಾರ್ಕಳ ಶಾಸಕ ಸುನೀಲ್ ಕುಮಾರ್ ಅವರ ವಿರುದ್ಧ ಶ್ರೀರಾಮ ಸೇನೆ ಸ್ಥಾಪಕ ಪ್ರಮೋದ್ ಮುತಾಲಿಕ್ ಕಣಕ್ಕೀಳಿದಿದ್ದರು. ಈ ವೇಳೆ ಗುರುವಿನ ವಿರುದ್ಧ ಸುನಿಲ್ ಕುಮಾರ್ ತುಟಿ ಪಿಟಿಕ್ ಎಂದಿರಲಿಲ್ಲ. ಕರ್ನಾಟಕ ವಿಧಾನಸಭೆಯ 224 ಕ್ಷೇತ್ರಗಳಿಗೆ ಮೇ 10ರಂದು ನಡೆದಿದ್ದ ಚುನಾವಣೆಯ ಫಲಿತಾಂಶದಲ್ಲಿ ಕಾರ್ಕಳ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿಗೆ ಬಹಳ ಪೈಪೋಟಿ ನಡೆದಿತ್ತು. ಈ ಕ್ಷೇತ್ರದಲ್ಲಿ ಬಿಜೆಪಿ ಪ್ರಬಲವಾಗಿದ್ದು, ಈ ಬಾರಿ ಸುನಿಲ್ ಕುಮಾರ್ಗೆ ಕಾಂಗ್ರೆಸ್ ಪೈಪೋಟಿ ನೀಡಿತ್ತು. ಅವರು ಬಿಜೆಪಿಯಿಂದ ಗೆಲುವು ಸಾಧಿಸಿದ್ದರು. ಇನ್ನೂ ಸುನಿಲ್ ಕುಮಾರ್ ಅವರಿಗೆ ಪ್ರತಿಸ್ಪರ್ಧಿಯಾಗಿದ್ದು ಪ್ರಮೋದ್ ಮುತಾಲಿಕ್. ಶಿಷ್ಯನ ವಿರುದ್ಧವೇ ಹಿಂದೂ ಫೈರ್ ಬ್ರಾಂಡ್ ಎನ್ನಿಸಿಕೊಂಡಿರುವ ಪ್ರಮೋದ್ ಮುತಾಲಿಕ್ ಚಿಲ್ಲರೆ ಮತ ಪಡೆದು ಮುಖಬಂಗಕ್ಕಿಡಾಗಿದ್ದರು

