
ಪುತ್ತೂರಿನ ಬಿಜೆಪಿ ಬಂಡಾಯ ಪಕ್ಷೇತರ ಅಭ್ಯರ್ಥಿ ಅರುಣ್ ಕುಮಾರ್ ಪುತ್ತಿಲ ಬೆಂಬಲಿಗರಿಂದ ‘ನಮ್ಮ ನಡಿಗೆ ಶ್ರೀ ಮಹಾಲಿಂಗೇಶ್ವರನ ನಡೆದ ಎಂಬ ಬ್ರಹತ್ ಪಾದಯಾತ್ರೆ ಹಾಗೂ ‘ಸೇವಾ ಸಮರ್ಪಣಾ’ ಕಾರ್ಯಕ್ರಮ ಭಾನುವಾರ ಪುತ್ತೂರಿನ ಶ್ರೀ ಮಹಾಲಿಂಗೇಶ್ವರ ದೇವಾಲಯದ ದೇವರ ಗದ್ದೆಯಲ್ಲಿ ಭಾನುವಾರ ನಡೆಯಿತು. ಈ ಸಂದರ್ಭದಲ್ಲಿ ‘ಪುತ್ತಿಲ ಪರಿವಾರ’ ಲಾಂಚನ ಬಿಡುಡೆಗೊಳಿಸಲಾಯಿತು.
ಪುತ್ತೂರು (ಮೇ.22) : ಪುತ್ತೂರಿನ ಬಿಜೆಪಿ ಬಂಡಾಯ ಪಕ್ಷೇತರ ಅಭ್ಯರ್ಥಿ ಅರುಣ್ ಕುಮಾರ್ ಪುತ್ತಿಲ ಬೆಂಬಲಿಗರಿಂದ ‘ನಮ್ಮ ನಡಿಗೆ ಶ್ರೀ ಮಹಾಲಿಂಗೇಶ್ವರನ ನಡೆದ ಎಂಬ ಬ್ರಹತ್ ಪಾದಯಾತ್ರೆ ಹಾಗೂ ‘ಸೇವಾ ಸಮರ್ಪಣಾ’ ಕಾರ್ಯಕ್ರಮ ಭಾನುವಾರ ಪುತ್ತೂರಿನ ಶ್ರೀ ಮಹಾಲಿಂಗೇಶ್ವರ ದೇವಾಲಯದ ದೇವರ ಗದ್ದೆಯಲ್ಲಿ ಭಾನುವಾರ ನಡೆಯಿತು. ಈ ಸಂದರ್ಭದಲ್ಲಿ ‘ಪುತ್ತಿಲ ಪರಿವಾರ’ ಲಾಂಚನ ಬಿಡುಡೆಗೊಳಿಸಲಾಯಿತು.

ಸಭಾ ಕಾರ್ಯಕ್ರಮದಲ್ಲಿ ಮಾತನಾಡಿದ ವಾಗ್ಮಿ ಶ್ರೀಕೃಷ್ಣ ಉಪಾಧ್ಯಾಯ,ದೈವ ಬಲ ಇರುವ ಕಾರಣಕ್ಕೆ ಪುತ್ತಿಲ ಅವರಿಗೆ ಈ ರೀತಿಯಾದ ಜನರ ಪ್ರೀತಿ ಬೆಂಬಲ ಸಿಕ್ಕಿದೆ. ಅಭ್ಯರ್ಥಿಗಳು ಹಣ ಹಂಚುವ ದಿನದಲ್ಲಿ ಮತದಾರ ಹಣ ನೀಡಿ ಚುನಾವಣೆಯಲ್ಲಿ ಸ್ಪರ್ಧಿಸಿರುವ ಪುತ್ತಿಲ ಹಲವು ಇತಿಹಾಸ ಸೃಷ್ಟಿಸಿದ್ದಾರೆ ಎಂದರು.
ಹಿಂದೂ ಸಂಘಟನೆ ಒಡೆದು ಹೋಗಬಾರದು ಎಂಬ ನಿಟ್ಟಿನಲ್ಲಿ ‘ಪುತ್ತಿಲ ಪರಿವಾರ’ ಸಂಘಟನೆ ಕಾರ್ಯೋನ್ಮುಖವಾಗಲಿದೆ. ಗುರು ಗೋಳ್ವಾಳ್ಕರ್ ಯೋಚನೆಯಂತೆ ಯಾವುದೇ ಸಂಘಟನೆಗಳಿಗೆ ಅಪಮಾನವಾಗದಂತೆ ಆರ್‌ಎಸ್‌ಎಸ್‌ಗೆ 100 ವರ್ಷಗಳಾಗುವ ಈ ಸಂದರ್ಭದಲ್ಲಿ ಪುತ್ತಿಲ ಪರಿವಾರ ಗೋಳ್ವಾಳ್ಕರ್ ಆಶಯಕ್ಕೆ ಪೂರಕವಾಗಿ ಯಾರನ್ನೂ ದೂಷಿಸದೆ ಸಮಾಜ ಕಟ್ಟುವ ಕೆಲಸ ಮಾಡಲಿದೆ ಎಂದು ವಿವರಿಸಿದರು.

ಪರ್ಯಾಯ ಹಿಂದೂ ಸಂಘಟನೆ ಸ್ಥಾಪಿಸಿ ಸಂಘ ಪರಿವಾರಕ್ಕೆ ಠಕ್ಕರ್ ಕೊಟ್ರಾ ಪುತ್ತಿಲ?
ಸಂಘ ಪರಿವಾರಕ್ಕೆ ಪರ್ಯಾಯವಾಗಿ ‘ಪುತ್ತಿಲ ಪರಿವಾರ’ ಅಸ್ತಿತ್ವಕ್ಕೆ. ಆರ್.ಎಸ್.ಎಸ್ ವಿರುದ್ದವೇ ಅರುಣ್ ಪುತ್ತಿಲ ಅಚ್ಚರಿಯ ನಡೆ. ಪರಿವಾರ ಸಂಘಟನೆಗಳಿಗೆ ಪರ್ಯಾಯವಾಗಿ ಪುತ್ತಿಲ ಪರಿವಾರ್ ಸ್ಥಾಪಿಸಿದ ಪುತ್ತಿಲ. ಪುತ್ತೂರಿನಲ್ಲಿ ಅಧಿಕೃತವಾಗಿ ‘ಪುತ್ತಿಲ ಪರಿವಾರ್’ ಸಂಘಟನೆ ಘೋಷಣೆ
ಪುತ್ತೂರಿನಲ್ಲಿ ನಡೆದ ಸೇವಾ ಸಮರ್ಪಣಾ ಸಮಾವೇಶದಲ್ಲಿ ಪುತ್ತಿಲ ಪರಿವಾರ ಘೋಷಣೆಯಾಗಿರುವ ಹಿನ್ನೆಲೆ ಮತ್ತಷ್ಟು ಬಿಸಿಯೇರಿದ ಹಿಂದುತ್ವ ವರ್ಸಸ್ ಬಿಜೆಪಿ ಫೈಟ್. ಆರ್ ಎಸ್ ಎಸ್ ಸಿದ್ಧಾಂತವನ್ನ ಮುಂದಿಟ್ಟುಕೊಂಡು ಪುತ್ತಿಲ ಪರಿವಾರ ಆರಂಭಿಸಿದ್ರಾ ಪುತ್ತಿಲ?

ಸಾವಿರಾರು ಕಾರ್ಯಕರ್ತರ ಸಮ್ಮುಖ ‘ಪುತ್ತಿಲ ಪರಿವಾರ’ ಲೋಗೋ ರಿಲೀಸ್ ಮಾಡಿರುವ ಪುತ್ತಿಲ. ಲೋಕಸಭಾ ಚುನಾವಣೆ ಟಾರ್ಗೆಟ್ ಇಟ್ಟುಕೊಂಡು ಪುತ್ತಿಲ ಪರಿವಾರ ಅಸ್ತಿತ್ವಕ್ಕೆ. ವಿಭಜನೆಯ ಭೀತಿಯಲ್ಲಿರುವ ಕರಾವಳಿಯ ಪ್ರಬಲ ಸಂಘ ಪರಿವಾರ. ಸಂಘಟನೆಯ ಹಲವು ಕಾರ್ಯಕರ್ತರು ‘ಪುತ್ತಿಲ ಪರಿವಾರ’ ಪರ ಬ್ಯಾಟಿಂಗ್ ಮಾಡುತ್ತಿರುವುದು ಆರ್.ಎಸ್.ಎಸ್, ಬಿಜೆಪಿಗೆ ಮತ್ತಷ್ಟು ತಲೆ ನೋವಾಗಿ ಪರಿಣಮಿಸಿದೆ.
ಬಿಜೆಪಿಗೆ ಪರ್ಯಾಯ ಸ್ಪರ್ಧಿಸಿ ನಡುಕ ಹುಟ್ಟಿಸಿದ್ದ ಅರುಣ್ ಪುತ್ತಿಲ ಇದೀಗ ಭಾರೀ ಕಾರ್ಯಕರ್ತರ ಬೆಂಬಲದ ಮಧ್ಯೆ ಹೊಸ ಸಂಘಟನೆ ಘೋಷಣೆ ಮಾಡಿರುವುದು ಅದೂ ಹಿಂದುತ್ವದ ಹೆಸರಲ್ಲೇ ಸಂಘಟನೆ ಕಟ್ಟಿ ಬಿಜೆಪಿಗೆ ಮತ್ತೆ ಪುತ್ತಿಲ ಕೌಂಟರ್ ನೀಡಿದ್ದಾರೆ. ಹಿಂದುತ್ವದ ಶಕ್ತಿಕೇಂದ್ರದಲ್ಲೇ ಹಿಂದುತ್ವಕ್ಕೆ ಪರ್ಯಾಯ ಸಂಘಟನೆ ಉದಯವಾಗಿರುವುದು ಬಿಜೆಪಿ, ಸಂಘಪರಿವಾರಕ್ಕೆ ನುಂಗಲಾರದ ತುತ್ತಾಗಿದೆ