
- ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿ.ಕೆ. ಶಿವಕುಮಾರ್ ಪದಗ್ರಹಣ ಸಮಾರಂಭ ಮುಕ್ತಾಯ.
- ಐದು ಯೋಜನೆಗಳನ್ನ ಜಾರಿಗೆ ತರುವುದಾಗಿ ಘೋಷಿಸಿದ ರಾಹುಲ್ ಗಾಂಧಿ.
- ಸಂಪುಟ ಸಭೆಯಲ್ಲಿ 5 ಗ್ಯಾರಂಟಿಗಳನ್ನು ಅನುಷ್ಠಾನಕ್ಕೆ ತರುತ್ತೇವೆ ಎಂದು ಎಐಸಿಸಿ ನಾಯಕ.
ಬೆಂಗಳೂರು : ಕಳೆದ 5 ವರ್ಷಗಳಿಂದ ಆದ ಸಮಸ್ಯೆ ನೋಡಿದ್ದೀರ. ತಮ್ಮೆಲ್ಲರ ಬೆಂಬಲ ನೀಡಿ, ಬದಲಾವಣೆಗೆ ಕಾರಣರಾಗಿದ್ದೀರ. ಚುನಾವಣೆಯಲ್ಲಿ ಕೊಟ್ಟಂತಹ ಎಲ್ಲಾ ಭರವಸೆಗಳನ್ನು ಈಡೇರಿಸುತ್ತೇವೆ. ಕೆಲವೇ ನಿಮಿಷಗಳಲ್ಲಿ ಸಚಿವ ಸಂಪುಟ ಸಭೆ ನಡೆಯಲಿದ್ದು, ನಮ್ಮ ಘೋಷಣೆಗಳನ್ನು ಅನುಷ್ಠಾನಕ್ಕೆ ತರುತ್ತೇವೆ ಎಂದು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಸ್ಪಷ್ಟಪಡಿಸಿದರು.

ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿ.ಕೆ. ಶಿವಕುಮಾರ್ ಪದಗ್ರಹಣ ಸಮಾರಂಭದಲ್ಲಿ ಜನತೆಯನ್ನು ಉದ್ದೇಶಿಸಿ ಮಾತನಾಡಿದ ರಾಹುಲ್ ಗಾಂಧಿ , ರಾಜ್ಯದ ಜನರಿಗೆ ಧನ್ಯವಾದಗಳು, ನೀವೆಲ್ಲರೂ ಕಾಂಗ್ರೆಸ್ ಬೆಂಬಲಿಸಿದ್ದೀರ. ಕಳೆದ 5 ವರ್ಷಗಳಿಂದ ಆದ ಸಮಸ್ಯೆ ನೋಡಿದ್ದೀರ, ತಮ್ಮೆಲ್ಲರ ಬೆಂಬಲ ಚುನಾವಣೆಯಲ್ಲಿ ನೀಡಿ ಕರ್ನಾಟಕದಲ್ಲಿ ಪೂರ್ಣ ಬದಲಾವಣೆಗೆ ಕಾರಣರಾಗಿದ್ದೀರ ಎಂದು ಜನತೆಗೆ ಧನ್ಯವಾದ ಅರ್ಪಿಸಿದರು.

