
Salary of political leaders: ಕರ್ನಾಟಕದಲ್ಲಿ ನಾಳೆ ಹೊಸ ಸರ್ಕಾರ ಅಸ್ತಿತ್ವಕ್ಕೆ ಬರಲಿದೆ. ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಮತ್ತು ಉಪ ಮುಖ್ಯಮಂತ್ರಿಯಾಗಿ ಡಿ ಕೆ ಶಿವಕುಮಾರ್ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಇವರೊಂದಿಗೆ 30 ಮಂದಿ ಶಾಸಕರು ಕೂಡ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ
- 2015ರಿಂದ ಮುಖ್ಯಮಂತ್ರಿ, ಸಚಿವರು, ಸಭಾಪತಿ, ಉಪ ಸಭಾಪತಿ, ಸ್ಪೀಕರ್, ಉಪಸಭಾಪತಿಗಳ ವೇತನ ಮತ್ತು ಭತ್ಯೆಗಳನ್ನು ಪರಿಷ್ಕರಿಸಿರಲಿಲ್ಲ.
- 2022ರಲ್ಲಿ ಮುಖ್ಯಮಂತ್ರಿ, ಸಚಿವರು, ಸ್ಪೀಕರ್ ಮತ್ತು ಉಪ ಸ್ಪೀಕರ್ ಮತ್ತು ಶಾಸಕರ ವೇತನ ಶೇಕಡಾ 50ರಿಂದ 60ರಷ್ಟು ಹೆಚ್ಚಿಸಲಾಯಿತು.
ವಾಸ್ತವವಾಗಿ, 2015ರಿಂದ ಮುಖ್ಯಮಂತ್ರಿ, ಸಚಿವರು, ಸಭಾಪತಿ, ಉಪ ಸಭಾಪತಿ, ಸ್ಪೀಕರ್, ಉಪಸಭಾಪತಿಗಳ ವೇತನ ಮತ್ತು ಭತ್ಯೆ ಗಳನ್ನು ಪರಿಷ್ಕರಿಸಿರಲಿಲ್ಲ. 2022ರಲ್ಲಿ ಮುಖ್ಯಮಂತ್ರಿ, ಸಚಿವರು, ಸ್ಪೀಕರ್ ಮತ್ತು ಉಪ ಸ್ಪೀಕರ್ ಮತ್ತು ಶಾಸಕರ ವೇತನ ಶೇಕಡಾ 50ರಿಂದ 60ರಷ್ಟು ಹೆಚ್ಚಿಸಲಾಯಿತು.
ಮುಖ್ಯಮಂತ್ರಿ, ಸ್ಪೀಕರ್ ಮತ್ತು ಸಭಾಪತಿ
ವೇತನ: 75 ಸಾವಿರ ರೂ. (ಪ್ರತಿ ತಿಂಗಳಿಗೆ)
===========
ವಿರೋಧ ಪಕ್ಷದ ನಾಯಕರ ವೇತನ
ಪ್ರತಿ ತಿಂಗಳಿಗೆ 60 ಸಾವಿರ ರೂಪಾಯಿ
===========
ಗೃಹ ಭತ್ಯೆ:
ಮುಖ್ಯಮಂತ್ರಿ, ವಿರೋಧ ಪಕ್ಷದ ನಾಯಕರು,
ಉಪ ಸ್ಪೀಕರ್ ಮತ್ತು ಉಪ ಸಭಾಪತಿ:
1.2 ಲಕ್ಷ ರೂ. (ಪ್ರತಿ ತಿಂಗಳಿಗೆ)
———–
ಸ್ಪೀಕರ್ ಮತ್ತು ಸಭಾಪತಿಗೆ
1.6 ಲಕ್ಷ ರೂ. (ಪ್ರತಿ ತಿಂಗಳಿಗೆ)
===========
ಮನೆ ನಿರ್ವಹಣಾ ಭತ್ಯೆ
35 ಸಾವಿರ ರೂ. ಪ್ರತಿ ತಿಂಗಳಿಗೆ
===========
ಇಂಧನ ಭತ್ಯೆ
ಪ್ರತಿ ತಿಂಗಳಿಗೆ 2 ಸಾವಿರ ಲೀಟರ್ ಇಂಧನ
=========
ಪ್ರಯಾಣ ಭತ್ಯೆ:
ಪ್ರತಿ ಕಿಲೋ ಮೀಟರ್‌ಗೆ 40 ರೂ.
=========
ಅತಿಥಿ ಭತ್ಯೆ
4 ರಿಂದ 4.5 ಲಕ್ಷ ರೂ. (ಪ್ರತಿ ತಿಂಗಳಿಗೆ)
ಮಂತ್ರಿಗಳ ವೇತನ: ಪ್ರತಿ ತಿಂಗಳಿಗೆ 60 ಸಾವಿರ ರೂಪಾಯಿ. ಉಳಿದಂತೆ ಮುಖ್ಯಮಂತ್ರಿಗಳಿಗೆ ಸಿಗುವ ಭತ್ಯೆಗಳು ಸಚಿವರಿಗೆ ಸಿಗುತ್ತವೆ.
Karnataka CM, Ministers salary: ಕರ್ನಾಟಕದಲ್ಲಿ ನಾಳೆಯಿಂದ ಹೊಸ ಸರ್ಕಾರ ಅಸ್ತಿತ್ವಕ್ಕೆ ಬರಲಿದೆ. ಜೋಡೆತ್ತು ಸರ್ಕಾರ ರಚನೆಗೆ ಈಗಾಗಲೇ ಸಕಲ ಸಿದ್ಧತೆ ಭರದಿಂದ ಸಾಗಿದೆ. ನಾಳೆ ಕಂಠೀರವ ಸ್ಟೇಡಿಯಂನಲ್ಲಿ ನಡೆಯಲಿರುವ ಅದ್ಧೂರಿ ಸಮಾರಂಭದಲ್ಲಿ ಸಿಎಂ ಆಗಿ ಸಿದ್ದರಾಮಯ್ಯ ಮತ್ತು ಡಿಸಿಎಂ ಆಗಿ ಡಿಕೆ ಶಿವಕುಮಾರ್ ಪಡಗ್ರಹಣ ಮಾಡಲಿದ್ದಾರೆ. ಅವರೊಂದಿಗೆ 30 ಮಂದಿ ಶಾಸಕರು ಸಚಿವರಾಗಿ ಪ್ರಮಾಣವಚನ ಸ್ವೀಕರಿಸುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.