
Mysore Assembly Constituency Result: ಈಗಾಗಲೇ ರಾಜ್ಯದಲ್ಲಿ ಚುನಾವಣೆ ಮುಗಿದು, ಫಲಿತಾಂಶವು ಹೊರ ಬಿದ್ದಿದೆ. ಅದರ ನಡುವೆ ಚುನಾವಣೆ ಪ್ರಚಾರದ ವೇಳೆ ಮೋದಿ ಸಾಗಿದ ಮಾರ್ಗವನ್ನು ಕೈ ಕಾರ್ಯಕರ್ತರು ಶುಚಿಗೊಳಿಸಿದ್ದಾರೆ
- ಮೋದಿ ರೋಡ್ ಶೋ ಮಾರ್ಗ ಅಪವಿತ್ರ ಆರೋಪ
- ನಮೋ ಸಾಗಿದ ದಾರಿ ಸಗಣಿ, ಗಂಜಲದಿಂದ ಕ್ಲೀನ್
- ದಸರಾ ಮೆರವಣಿಗೆ ರಾಜ ಮಾರ್ಗಕ್ಕೆ ಕಳಂಕ ತಂದಿದ್ದಾರೆಂದು ಆರೋಪ

ಮೈಸೂರು: ಈಗಾಗಲೇ ರಾಜ್ಯದಲ್ಲಿ ಚುನಾವಣೆ ಮುಗಿದು , ಫಲಿತಾಂಶವು ಹೊರ ಬಂದಿದೆ. ಕಾಂಗ್ರೆಸ್ 135 ಸೀಟ್ ಗಳಿಸಿ ಬಹುಮತ ಸಾಧಿಸಿದ್ದಾರೆ. ರಾಜ್ಯದ ಕೆಲವು ಕಡೆಗಳಲ್ಲಿ ಬಿಜೆಪಿ ಹಾಗೂ ಜೆಡಿಎಸ್ ಗೆಲುವು ಪಡೆದುಕೊಂಡಿದೆ. ಗೆದ್ದವರ ಸಂಭ್ರಮ ಮುಗಿಲು ಮುಟ್ಟಿದ್ದೆ.

ಅದರ ನಡುವೆ ಚುನಾವಣೆ ಪ್ರಚಾರದ ವೇಳೆ ಮೋದಿ ಸಾಗಿದ ಮಾರ್ಗವನ್ನ ಶುಚಿಗೊಳಿಸುವ ಮೂಲಕ ಕೈ ಕಾರ್ಯಕರ್ತರ ವ್ಯಂಗ್ಯ ಮಾಡಿರುವ ವಿಡಿಯೋ ಒಂದು ಬೆಳಕಿಗೆ ಬಂದಿದೆ. ವೇಳೆ ನಗರದ ಕೆ.ಆರ್ ವೃತ್ತ, ಸಯ್ಯಾಜೀರಾವ್, ಗನ್‌ಹೌಸ್ ವೃತ್ತದಿಂದ ಹೈವ್ ವೃತ್ತದ ವರೆಗೆ ಮೋದಿ ರೋಡ್ ಶೋ ಮಾಡಿದ್ದರು ಎಂಬ ಕಾರಣಕ್ಕೆ ಸಗಣಿ, ಗಂಜಲದಿಂದ ರಸ್ತೆ ಶುದ್ದಿಗೊಳಿಸಲಾಗಿದೆ.

ರೋಡ್ ಶೋ ವೇಳೆ ರಸ್ತೆಉದ್ದಗಲಕ್ಕೂ ಗಂಜಲದಿಂದ ಕ್ಲೀನ್ ಮಾಡಲಾಗಿದೆ. ನಾಡದೇವಿ ಚಾಮುಂಡೇಶ್ವರಿ ಮೆರವಣಿಗೆ ಸಾಗುವ ದಾರಿಯಲ್ಲಿ ಮೋದಿ ಬಂದಿದ್ದು ಅಪವಿತ್ರ ಎಂದು ಆರೋಪಿಸುತ್ತಿದ್ದಾರೆ.
ರೋಡ್ ಶೋ ವೇಳೆ ರಸ್ತೆಗಳೆಲ್ಲಾ ಮಲಿನಗೊಂಡಿದೆ. ರಾಜ ಮಹಾರಾಜರು ಸಾಗಿದ್ದ ಮಾರ್ಗ, ಸದ್ಯದಲ್ಲೇ ತಾಯಿ ಚಾಮುಂಡೇಶ್ವರಿ ಅದೇ ಮಾರ್ಗವಾಗಿ ಸಾಗುವುದರಿಂದ ರಸ್ತೆಯನ್ನು ಸಗಣಿ ಗಂಜಲದಿಂದ ಶುದ್ಧಿ ಮಾಡಲಾಗಿದೆಂದು ಕೈ ಕಾರ್ಯಕರ್ತರು ಹೇಳಿದ್ದಾರೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ

