

ಸುರತ್ಕಲ್: ಉತ್ತರ ಶಾಸಕ ಭರತ್ ಶೆಟ್ಟಿ ಅವರು ಸುರತ್ಕಲ್ ಮಾರುಕಟ್ಟೆ ಮತ್ತು ಸದ್ಯ ನಿರ್ಮಾಣಗೊಳ್ಳುತ್ತಿರುವ ಸುರತ್ಕಲ್ ವೃತ್ತದಲ್ಲಿ ಭ್ರಷ್ಟಾಚಾರ ನಡೆಸಿರುವ ವಾಸನೆ ಬರುತ್ತಿದೆ. ಜೆಡಿಎಸ್ ಅಭ್ಯರ್ಥಿ ಮೊಯಿದ್ದೀನ್ ಬಾವಾ ಕಾಂಗ್ರೆಸ್ ಶಾಸಕರಾಗಿದ್ದ ಸಂದರ್ಭ ಕಾಂಗ್ರೆಸ್ ಸರಕಾರ ನೀಡಿದ್ದ ಅನುದಾನದಿಂದ ಮಾಡಿದ ಕಾರ್ಯಗಳಿಗೆ ತನ್ನ ವೈಯಕ್ತಿಕ ಸಾಧನೆ ಎಂದು ಹೇಳಿಕೊಂಡು ಮತಯಾಚನೆ ಮಾಡುತ್ತಾ, ಕಾಂಗ್ರೆಸ್ ಅಭ್ಯರ್ಥಿ ವಿರುದ್ಧ ಮಾಡುತ್ತಿರುವ ಅಪಪ್ರಚಾರವನ್ನು ನಿಲ್ಲಿಸಬೇಕು ಎಂದು ಸುರತ್ಕಲ್ ಬ್ಲಾಕ್ ಕಾಂಗ್ರೆಸ್ ಪತ್ರಿಕಾಗೋಷ್ಟಿಯಲ್ಲಿ ಎಚ್ಚರಿಕೆ ನೀಡಿದೆ.

ಹೊಸಬೆಟ್ಟುವಿನ ಕಾಂಗ್ರೆಸ್ ಕಚೇರಿಯಲ್ಲಿ ಮಾತನಾಡಿದ ಕಾಂಗ್ರೆಸ್ ಜಿಲ್ಲಾ ಕಾರ್ಯದರ್ಶಿ ರಾಘವೇಂದ್ರ ರಾವ್, ಸುರತ್ಕಲ್ ಮಾರುಕಟ್ಟೆ ಕಾಮಗಾರಿ ಬಾವಾ ಅವಧಿಯಲ್ಲಿ ಎಷ್ಟು ನಡೆದಿತ್ತು, ಇಂದಿಗೂ ಅದು ಅಷ್ಟಕ್ಕೇ ಸೀಮಿತವಾಗಿದೆ. ಬಳಿಕ ಬಂದ ಇಂದಿನ ಶಾಸಕ ಭರತ್ ಶೆಟ್ಟಿ ಅವರು ಕಾಮಗಾರಿಗಳನ್ನು ಮುಟ್ಟಿಯೂ ನೋಡಿಲ್ಲ. ಈ ಕಾಮಗಾರಿಯಲ್ಲಿ ಶಾಸಕರು ಭ್ರಷ್ಟಾಚಾರ ನಡೆಸಿರುವ ವಾಸನೆ ಬರುತ್ತಿದೆ. ಸುರತ್ಕಲ್ ಜಂಕ್ಷನ್ ನಲ್ಲಿ 5 ಕೋಟಿ
ವೃತ್ತಕ್ಕೆ 5 ಕೋಟಿ ರೂ. ಬೇಕಾ ಎಂದು ಶಾಸಕ ಭರತ್ ಶೆಟ್ಟಿ ಅವರನ್ನು ಪ್ರಶ್ನೆ ಮಾಡಿರುವ ಅವರು, ವೃತ್ತ ನಿರ್ಮಾಣದ ಹೆಸರಿನಲ್ಲೂ ಭ್ರಷ್ಟಾಚಾರ ನಡೆಸಿರುವ ವಾಸನೆ ಬರುತ್ತಿದೆ ಎಂದು ಆರೋಪಿಸಿದರು.

ಮಳಲಿ ಮಸೀದಿ ನವೀಕರಣದ ವೇಳೆ ಮಧ್ಯ ಪ್ರವೇಶಿಸಿ ಕಾಮಗಾರಿಗೆ ತಡೆ ತಂದು ಅಲ್ಪಸಂಖ್ಯಾತರಿಗೆ ಅನ್ಯಾಯ ಮಾಡಿದರು. ವೈದ್ಯರಾಗಿರುವ ಅವರು ಕೋಮು ದ್ವೇಷ ಹರಡುವ ಭಾಷಣ ಮಾಡುತ್ತಾರೆ. ಇದರಿಂದ ಅವರು ಸಾಧಿಸಿದ್ದಾದರೂ ಏನು ಎಂದು ರಾಘವೇಂದ್ರ ರಾವ್ ಪ್ರಶ್ನೆ ಮಾಡಿದರು.
ಕೇರಳ ಮಹಿಳಾ ಕಾಂಗ್ರೆಸ್‌ನ ಪ್ರಧಾನ ಕಾರ್ಯದರ್ಶಿ ಹಾಗೂ ಕೆಪಿಸಿಸಿ ಚುನಾವಣಾ ಕೋ ಆಡಿನೇಟರ್ ಶಿಬಾ ರಾಮಚಂದ್ರ ಮಾತಾಡಿ, ಇನಾಯತ್ ಅಲಿ ಅವರು ಸಮಾಜಮುಖಿ ಚಿಂತನೆ ಮತ್ತು ಕಾರ್ಯಗಳಿಂದ ಹೆಸರು ಪಡೆದವರು. ಮಂಗಳೂರು ಉತ್ತರ ಕ್ಷೇತ್ರಕ್ಕೆ ಸಮರ್ಥ ಅಭ್ಯರ್ಥಿಯನ್ನು ಪಕ್ಷ ನೀಡಿದೆ. ಪಕ್ಷದ ಮುಖಂಡರು, ಕಾರ್ಯಕರ್ತರು ಪರಸ್ಪರ ವೈಮನಸ್ಸು ಮರೆತು ಅಭ್ಯರ್ಥಿ ಗೆಲುವಿಗಾಗಿ ಶ್ರಮಿಸಬೇಕು ಎಂದು ಕಾರ್ಯಕರ್ತರಿಗೆ ಕರೆ ನೀಡಿದರು.
