

ಚೆನ್ನೈ: ಮಹಿಳಾ ಪ್ರಯಾಣಿಕರೊಬ್ಬರ ಲಗೇಜ್ ನಲ್ಲಿ ವಿವಿಧ ಜಾತಿಯ 22 ಹಾವುಗಳು ಪತ್ತೆಯಾಗಿದ್ದು, ಕಸ್ಟಮ್ಸ್ ಅಧಿಕಾರಿಗಳು ವಶಕ್ಕೆ ಪಡೆದುಕೊಂಡಿದ್ದಾರೆ.ಮಲೇಷ್ಯಾದಿಂದ ಚೆನ್ನೈಗೆ ಆಗಮಿಸಿದ ಮಹಿಳೆಯನ್ನು ವಿಮಾನ ನಿಲ್ದಾಣದ ಚೆಕ್ ಇನ್ ನಲ್ಲಿ ಅಧಿಕಾರಿಗಳು ಪರಿಶೀಲಿಸಿದ್ದಾರೆ. ಆಕೆಯ ಬ್ಯಾಗ್ ನಲ್ಲಿ ವಿವಿಧ ಜಾತಿಯ 22 ಗಳನ್ನು ಪ್ಲ್ಯಾಸ್ಟಿಕ್ ಕವರ್ ನಲ್ಲಿ ಇಡಲಾಗಿತ್ತು. ಇದನ್ನು ನೋಡಿದ ಅಧಿಕಾರಿಗಳು ಒಂದೊಂದೇ ಹಾವುಗಳನ್ನು ರಾಡ್ ನಿಂದ ತೆಗೆದು ಬಾಕ್ಸ್ ನಲ್ಲಿ ಹಾಕಿದ್ದಾರೆ.
ಕೌಲಾಲಂಪುರದಿಂದ ಆಗಮಿಸಿದ ಮಹಿಳೆಯನ್ನು ಕಸ್ಟಮ್ಸ್ ಇಲಾಖೆ ಬಂಧಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಹಾವುಗಳು ಮಾತ್ರವಲ್ಲದೆ, ಆಕೆಯ ಬ್ಯಾಗ್ ನಲ್ಲಿ ಒಂದು ಊಸರವಳ್ಳಿಯನ್ನೂ ವಶಪಡಿಸಿಕೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

