Hayathtv
  • ಮುಖಪುಟ
  • ಸುದ್ದಿ
    • All
    • ಕರಾವಳಿ
    • ರಾಜ್ಯ
    • ರಾಷ್ಟ್ರೀಯ
    • ವಿದೇಶ

    ಮರು ಎಣಿಕೆಯಲ್ಲಿ ಮಂಜುನಾಥ್ ಗೌಡ ಗೆದ್ರೆ ರಾಜಕೀಯ ಬಿಡುವೆ: ಶಾಸಕ ಕೆವೈ ನಂಜೇಗೌಡ

    ಲಂಚ ತಗೊಂಡಾದ್ಮೇಲೆ ಡಾಕ್ಟ್ರು ನಿನ್ ಹೆಂಡ್ತಿ ಸತ್ತೋದ್ಲು ಅಂದ್ರು: ಪತಿ ಗೋಳಾಟ

    ಲಂಚ ತಗೊಂಡಾದ್ಮೇಲೆ ಡಾಕ್ಟ್ರು ನಿನ್ ಹೆಂಡ್ತಿ ಸತ್ತೋದ್ಲು ಅಂದ್ರು: ಪತಿ ಗೋಳಾಟ

    ಸೌಜನ್ಯ ಮಾವ ವಿಠಲ್‌ಗೌಡ ತೋರಿಸಿದ ಬಂಗ್ಲೆಗುಡ್ಡೆ ಕಾಡಿನಲ್ಲಿ 5 ಅಸ್ಥಿಪಂಜರ ಮೂಳೆ ಪತ್ತೆ!

    ಸೌಜನ್ಯ ಮಾವ ವಿಠಲ್‌ಗೌಡ ತೋರಿಸಿದ ಬಂಗ್ಲೆಗುಡ್ಡೆ ಕಾಡಿನಲ್ಲಿ 5 ಅಸ್ಥಿಪಂಜರ ಮೂಳೆ ಪತ್ತೆ!

    ಯುವತಿ ದೇಹದ ಮೇಲಿನ ಕಪ್ಪು ಚುಕ್ಕೆ ಗುರುತಿಸಿದ AI.. ಫೋಟೋ ಅಪ್​ಲೋಡ್​ ಮಾಡುವಾಗ ಹುಷಾರ್​!

    ವಿಜಯಪುರ| SBI ಬ್ಯಾಂಕ್‌ ದರೋಡೆ – ಪಿಸ್ತೂಲ್‌ ತೋರಿಸಿ 8 ಕೋಟಿ ನಗದು, 50 ಕೆಜಿ ಚಿನ್ನದೊಂದಿಗೆ ಪರಾರಿ

    ಕೆಂಪು ಕಲ್ಲು ಬಗ್ಗೆ ನಿಯಮ ಸಡಿಲಿಕೆ, 25 ಗುತ್ತಿಗೆದಾರರಿಗೆ ಪರವಾನಗಿ, ಕಲ್ಲಿನ ದರ ಇಳಿಯಲಿದೆ ; ಯುಟಿ ಖಾದರ್

    ಕೆಂಪು ಕಲ್ಲು ಬಗ್ಗೆ ನಿಯಮ ಸಡಿಲಿಕೆ, 25 ಗುತ್ತಿಗೆದಾರರಿಗೆ ಪರವಾನಗಿ, ಕಲ್ಲಿನ ದರ ಇಳಿಯಲಿದೆ ; ಯುಟಿ ಖಾದರ್

    ಮಾಲೂರು ಶಾಸಕ ನಂಜೇಗೌಡ ಆಯ್ಕೆ ಅಸಿಂಧು – ಮರು ಮತ ಎಣಿಕೆಗೆ ಹೈಕೋರ್ಟ್ ಆದೇಶ

    ಸ್ವಾತಂತ್ರ್ಯೋತ್ಸವ ಪ್ರಯುಕ್ತ SDPI ಯಿಂದ ಬಿಸಿ ರೋಡ್ ನಲ್ಲಿ ತಿರಂಗಾ ರ್‍ಯಾಲಿ ಹಾಗೂ ಸಾರ್ವಜನಿಕ ಸಭೆ

    ಬಿಜೆಪಿ ಮಾಡಿದ 40% ಕಮಿಷನ್ ಹಗರಣ ಮತ್ತು ಕೋವಿಡ್ ಹಗರಣದ ವಿರುದ್ಧ ಕ್ರಮಕ್ಕೆ ಮುಂದಾಗದ ಕಾಂಗ್ರೆಸ್‌ ಸರಕಾರ ಹೊಂದಾಣಿಕೆ ರಾಜಕಾರಣ ಮಾಡುತ್ತಿದೆ – ಎಸ್‌ಡಿಪಿಐ:

    15 ವರ್ಷಕ್ಕಿಂತ ಹಳೇ ಸರ್ಕಾರಿ ವಾಹನಗಳನ್ನ ಗುಜರಿಗೆ ಹಾಕಿ: ಸರ್ಕಾರ ಆದೇಶ

    • ರಾಜ್ಯ
    • ರಾಷ್ಟ್ರೀಯ
    • ವಿದೇಶ
    • ಚುನಾವಣೆ
  • ಕರಾವಳಿ
  • ಕ್ರೈಮ್
  • ವಿಶೇಷ ಸುದ್ದಿ
  • ಕ್ರೀಡೆ
  • ಮನೋರಂಜನೆ
  • ವೀಡಿಯೋ ಗ್ಯಾಲರೀ
No Result
View All Result
Hayathtv
  • ಮುಖಪುಟ
  • ಸುದ್ದಿ
    • All
    • ಕರಾವಳಿ
    • ರಾಜ್ಯ
    • ರಾಷ್ಟ್ರೀಯ
    • ವಿದೇಶ

    ಮರು ಎಣಿಕೆಯಲ್ಲಿ ಮಂಜುನಾಥ್ ಗೌಡ ಗೆದ್ರೆ ರಾಜಕೀಯ ಬಿಡುವೆ: ಶಾಸಕ ಕೆವೈ ನಂಜೇಗೌಡ

    ಲಂಚ ತಗೊಂಡಾದ್ಮೇಲೆ ಡಾಕ್ಟ್ರು ನಿನ್ ಹೆಂಡ್ತಿ ಸತ್ತೋದ್ಲು ಅಂದ್ರು: ಪತಿ ಗೋಳಾಟ

    ಲಂಚ ತಗೊಂಡಾದ್ಮೇಲೆ ಡಾಕ್ಟ್ರು ನಿನ್ ಹೆಂಡ್ತಿ ಸತ್ತೋದ್ಲು ಅಂದ್ರು: ಪತಿ ಗೋಳಾಟ

    ಸೌಜನ್ಯ ಮಾವ ವಿಠಲ್‌ಗೌಡ ತೋರಿಸಿದ ಬಂಗ್ಲೆಗುಡ್ಡೆ ಕಾಡಿನಲ್ಲಿ 5 ಅಸ್ಥಿಪಂಜರ ಮೂಳೆ ಪತ್ತೆ!

    ಸೌಜನ್ಯ ಮಾವ ವಿಠಲ್‌ಗೌಡ ತೋರಿಸಿದ ಬಂಗ್ಲೆಗುಡ್ಡೆ ಕಾಡಿನಲ್ಲಿ 5 ಅಸ್ಥಿಪಂಜರ ಮೂಳೆ ಪತ್ತೆ!

    ಯುವತಿ ದೇಹದ ಮೇಲಿನ ಕಪ್ಪು ಚುಕ್ಕೆ ಗುರುತಿಸಿದ AI.. ಫೋಟೋ ಅಪ್​ಲೋಡ್​ ಮಾಡುವಾಗ ಹುಷಾರ್​!

    ವಿಜಯಪುರ| SBI ಬ್ಯಾಂಕ್‌ ದರೋಡೆ – ಪಿಸ್ತೂಲ್‌ ತೋರಿಸಿ 8 ಕೋಟಿ ನಗದು, 50 ಕೆಜಿ ಚಿನ್ನದೊಂದಿಗೆ ಪರಾರಿ

    ಕೆಂಪು ಕಲ್ಲು ಬಗ್ಗೆ ನಿಯಮ ಸಡಿಲಿಕೆ, 25 ಗುತ್ತಿಗೆದಾರರಿಗೆ ಪರವಾನಗಿ, ಕಲ್ಲಿನ ದರ ಇಳಿಯಲಿದೆ ; ಯುಟಿ ಖಾದರ್

    ಕೆಂಪು ಕಲ್ಲು ಬಗ್ಗೆ ನಿಯಮ ಸಡಿಲಿಕೆ, 25 ಗುತ್ತಿಗೆದಾರರಿಗೆ ಪರವಾನಗಿ, ಕಲ್ಲಿನ ದರ ಇಳಿಯಲಿದೆ ; ಯುಟಿ ಖಾದರ್

    ಮಾಲೂರು ಶಾಸಕ ನಂಜೇಗೌಡ ಆಯ್ಕೆ ಅಸಿಂಧು – ಮರು ಮತ ಎಣಿಕೆಗೆ ಹೈಕೋರ್ಟ್ ಆದೇಶ

    ಸ್ವಾತಂತ್ರ್ಯೋತ್ಸವ ಪ್ರಯುಕ್ತ SDPI ಯಿಂದ ಬಿಸಿ ರೋಡ್ ನಲ್ಲಿ ತಿರಂಗಾ ರ್‍ಯಾಲಿ ಹಾಗೂ ಸಾರ್ವಜನಿಕ ಸಭೆ

    ಬಿಜೆಪಿ ಮಾಡಿದ 40% ಕಮಿಷನ್ ಹಗರಣ ಮತ್ತು ಕೋವಿಡ್ ಹಗರಣದ ವಿರುದ್ಧ ಕ್ರಮಕ್ಕೆ ಮುಂದಾಗದ ಕಾಂಗ್ರೆಸ್‌ ಸರಕಾರ ಹೊಂದಾಣಿಕೆ ರಾಜಕಾರಣ ಮಾಡುತ್ತಿದೆ – ಎಸ್‌ಡಿಪಿಐ:

    15 ವರ್ಷಕ್ಕಿಂತ ಹಳೇ ಸರ್ಕಾರಿ ವಾಹನಗಳನ್ನ ಗುಜರಿಗೆ ಹಾಕಿ: ಸರ್ಕಾರ ಆದೇಶ

    • ರಾಜ್ಯ
    • ರಾಷ್ಟ್ರೀಯ
    • ವಿದೇಶ
    • ಚುನಾವಣೆ
  • ಕರಾವಳಿ
  • ಕ್ರೈಮ್
  • ವಿಶೇಷ ಸುದ್ದಿ
  • ಕ್ರೀಡೆ
  • ಮನೋರಂಜನೆ
  • ವೀಡಿಯೋ ಗ್ಯಾಲರೀ
No Result
View All Result
Hayathtv
No Result
View All Result
Home ಚುನಾವಣೆ

ಕರಾವಳಿ ಗೆದ್ದ ಪಕ್ಷಕ್ಕೆ ರಾಜ್ಯದಲ್ಲಿ ಅಧಿಕಾರ! ದಕ್ಷಿಣ ಕನ್ನಡ ಜಿಲ್ಲೆಯ ಕ್ಷೇತ್ರಗಳಲ್ಲಿ ಹೇಗಿದೆ ಎಲೆಕ್ಷನ್ ಹವಾ..?

editor tv by editor tv
April 27, 2023
in ಚುನಾವಣೆ, ಸುದ್ದಿ
0
ನಾಮಪತ್ರ ಸಲ್ಲಿಕೆ ಅವಧಿ ಅಂತ್ಯ – ಕಣದಲ್ಲಿ 4 ಸಾವಿರಕ್ಕೂ ಹೆಚ್ಚು ಅಭ್ಯರ್ಥಿಗಳು
1.9k
VIEWS
Share on FacebookShare on TwitterShare on Whatsapp

Karnataka Assembly Elections: ರಾಜ್ಯದೆಲ್ಲೆಡೆ ಎಲೆಕ್ಷನ್ ಅಬ್ಬರ ಜೋರಾಗಿದೆ. ಮೊದಲಿನಿಂದಲೂ ಕರಾವಳಿಯಲ್ಲಿ ಗೆದ್ದ ಪಕ್ಷ ರಾಜ್ಯದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿಯಲಿದೆ ಎಂಬ ಮಾತಿದೆ. ಕರಾವಳಿಯಲ್ಲಿ ಪ್ರಸ್ತುತ ಏಳು ಮಂದಿ ಬಿಜೆಪಿ ಶಾಸಕರಿದ್ದು, ಒಬ್ಬರು ಕಾಂಗ್ರೆಸ್ ಶಾಸಕರಿದ್ದಾರೆ.

  • ಕರಾವಳಿ ಗೆದ್ದ ಪಕ್ಷ ರಾಜ್ಯದಲ್ಲಿ ಅಧಿಕಾರ ಅಂತಾರೆ ಜನ
  • ಹಾಲಿ 7 ಬಿಜೆಪಿ ಒಂದು ಕ್ಷೇತ್ರದಲ್ಲಿ ಕಾಂಗ್ರೆಸ್‌ ಶಾಸಕರು
  • ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಗೆದ್ದು ಬೀಗೋರು ಯಾರು..?

Karnataka Assembly Elections 2023: ರಾಜ್ಯದೆಲ್ಲೆಡೆ ಎಲೆಕ್ಷನ್ ಕಾವು ಹೆಚ್ಚಾಗಿದ್ದು ಬಿರುಬೇಸಿಗೆಯನ್ನೇ ಮರೆಸಿಬಿಟ್ಟಿದೆ ಚುನಾವಣಾ ಧಗೆ. ಯಾಕಂದ್ರೆ ಶತಗಥಾಯ ಗೆದ್ದು ಆಡಳಿತ ಯಂತ್ರ ಹಿಡಿದು ಸರ್ಕಾರ ರಚಿಸಲೇಬೇಕೆಂದು ಆಡಳಿತರೂಢ ಬಿಜೆಪಿ, ಪ್ರತಿ ಪಕ್ಷಗಳಾದ ಕಾಂಗ್ರೆಸ್ ಹಾಗೂ ಜೆಡಿಎಸ್ ಪ್ರತಿಷ್ಠೆ ಪಣಕ್ಕಿಟ್ಟಿದೆ. ಈ ಮಧ್ಯೆ ಯಾವ ಜಿಲ್ಲೆಯಲ್ಲಿ ಯಾವ ರೀತಿಯ ಚುನಾವಣೆ ನಡೆಯುತ್ತಿದೆ. ಯಾರೆಲ್ಲಾ ಅಭ್ಯರ್ಥಿಗಳು ಸೆಣಸಾಟ ನಡೆಸ್ತಿದಾರೆ. ಯಾವ ಪಕ್ಷ ಅಥವಾ ಅಭ್ಯರ್ಥಿ ಪರ ಮತದಾರಪ್ರಭುವಿನ ಒಲವಿದೆ ಎನ್ನುವುದರ ಸಂಪೂರ್ಣ ಮಾಹಿತಿಯನ್ನು hayath tv web page ನಲ್ಲಿ ನೀಡಲಿದ್ದೇವೆ. ಈ ಲೇಖನದಲ್ಲಿ ಇಂದು ದಕ್ಷಿಣ ಕನ್ನಡ ಜಿಲ್ಲೆ ಅಂದ್ರೆ ಕರಾವಳಿ ಭಾಗದಲ್ಲಿ ಎಲೆಕ್ಷನ್ ಹವಾ ಹೇಗಿದೆ. ಇಲ್ಲಿನ ಎಂಟು ವಿಧಾನಸಭಾ ಕ್ಷೇತ್ರಗಳಲ್ಲಿ ಮತದಾನ ಪ್ರಭುವಿನ ಒಲವು ಯಾರಿಗಿದೆ ಎಂದು ತಿಳಿಯೋಣ…

ವಾಸ್ತವವಾಗಿ, ಮೊದಲಿನಿಂದಲೂ ಕರಾವಳಿಯಲ್ಲಿ ಗೆದ್ದ ಪಕ್ಷ ರಾಜ್ಯದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿಯಲಿದೆ ಎಂಬ ಮಾತಿದೆ. ಕರಾವಳಿಯಲ್ಲಿ ಪ್ರಸ್ತುತ ಏಳು ಮಂದಿ ಬಿಜೆಪಿ ಶಾಸಕರಿದ್ದು, ಒಬ್ಬರು ಕಾಂಗ್ರೆಸ್ ಶಾಸಕರಿದ್ದಾರೆ. ಸುಳ್ಯ, ಪುತ್ತೂರು, ಬಂಟ್ವಾಳ, ಬೆಳ್ತಂಗಡಿ, ಮೂಡಬಿದ್ರೆ, ಮಂ.ಉತ್ತರ, ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರಗಳಲ್ಲಿ ಬಿಜೆಪಿ ಶಾಸಕರು ಗೆದ್ದಿದ್ದರು. ಉಳ್ಳಾಲ ವಿಧಾನಸಭಾ ಕ್ಷೇತ್ರದಲ್ಲಿ ಮಾತ್ರವೇ ಕಾಂಗ್ರೆಸ್ ಗೆದ್ದಿದೆ.

ದಕ್ಷಿಣ ಕನ್ನಡ ಜಿಲ್ಲೆಯ ಕ್ಷೇತ್ರಗಳಲ್ಲಿ ಹಿಂದಿನ ಚುನಾವಣೆ ಹೇಗಿತ್ತು..? ಯಾರು ಎಷ್ಟು ಮತಗಳ ಅಂತರದಲ್ಲಿ ಗೆದ್ದು ಬೀಗಿದ್ರು ಅಂತ ನೋಡೋದಾದ್ರೆ…  
– ಬೆಳ್ತಂಗಡಿ ಕ್ಷೇತ್ರದಲ್ಲಿ ಬಿಜೆಪಿಯ ಹರೀಶ್ ಪೂಂಜಾ 98417 ಮತಗಳನ್ನು ಪಡೆದಿದ್ದರು. ಇವರ ಎದುರಾಳಿ ಕಾಂಗ್ರೆಸ್ ನ ಕೆ.ವಸಂತ ಬಂಗೇರ 75443 ಮತಗಳನ್ನು ಮಾತ್ರ ಪಡೆದು ಸೋತಿದ್ದರು.

ಮೂಡಬಿದ್ರೆ ಕ್ಷೇತ್ರದಲ್ಲಿ ಬಿಜೆಪಿಯ ಎಂ.ಉಮಾನಾಥ ಕೋಟ್ಯಾನ್ 87444 ಮತಗಳನ್ನು ಪಡೆದಿದ್ದರು. ಕಾಂಗ್ರೆಸ್ ನ ಕೆ. ಅಭಯಚಂದ್ರ ಜೈನ್ 57645 ಮತಗಳನ್ನು ಪಡೆದು ಸೋತಿದ್ದರು.

– ಮಂಗಳೂರು ಉತ್ತರದಲ್ಲಿ ಬಿಜೆಪಿಯ ಭರತ್ ಶೆಟ್ಟಿ 98648 ಮತಗಳನ್ನು ಪಡೆದು ಗೆದ್ದಿದ್ದರು. ಕಾಂಗ್ರೆಸ್ ಬಿಎ ಮೊಯ್ದೀನ್ ಬಾವಾ    72000 ಮತಗಳನ್ನು ಪಡೆದು ಸೋತಿದ್ದರು.

– ಮಂಗಳೂರು ದಕ್ಷಿಣದಲ್ಲಿ ಬಿಜೆಪಿಯ ವೇದವ್ಯಾಸ ಕಾಮತ್ 
86545 ಮತಗಳನ್ನು ಪಡೆದು ಗೆದ್ದಿದ್ದರು. ಕಾಂಗ್ರೆಸ್ ನ ಜೆ.ಆರ್.ಲೋಬೋ 70470 ಮತಗಳನ್ನು ಪಡೆದು ಸೋತಿದ್ದರು.

– ಮಂಗಳೂರು ಉಳ್ಳಾಲದಲ್ಲಿ ಕಾಂಗ್ರೆಸ್ ನ ಯುಟಿ ಖಾದರ್ 
80813 ಮತಗಳನ್ನು ಪಡೆದು ಗೆದ್ದಿದ್ದರು. ಬಿಜೆಪಿಯ ಸಂತೋಷ್ ಕುಮಾರ್ ರೈ ಬೋಳಿಯಾರ್ 61074 ಮತಗಳನ್ನು ಪಡೆದು ಸೋತಿದ್ದರು.

– ಬಂಟ್ವಾಳ ಕ್ಷೇತ್ರದಲ್ಲಿ ಬಿಜೆಪಿಯ ರಾಜೇಶ್ ನಾಯ್ಕ್ 97802 ಮತಗಳನ್ನು ಪಡೆದು ಗೆದ್ದಿದ್ದರು. ಕಾಂಗ್ರೆಸ್ ನ ಬಿ. ರಮಾನಾಥ ರೈ ಅವರು 81831 ಮತಗಳನ್ನು ಪಡೆದು ಸೋತಿದ್ದರು.

– ಪುತ್ತೂರು ಕ್ಷೇತ್ರದಲ್ಲಿ ಬಿಜೆಪಿಯ ಸಂಜೀವ ಮಠಂದೂರು 
90073 ಮತಗಳನ್ನು ಪಡೆದು ಗೆದ್ದಿದ್ದರು. ಕಾಂಗ್ರೆಸ್ ಪಕ್ಷದ ಶಕುಂತಲಾ ಶೆಟ್ಟಿ 70596 ಮತಗಳನ್ನು ಪಡೆದು ಸೋತಿದ್ದರು.

– ಸುಳ್ಯ ಕ್ಷೇತ್ರದಲ್ಲಿ ಎಸ್.ಅಂಗಾರ ಅವರು 95205 ಮತಗಳನ್ನು ಪಡೆದು ಗೆದ್ದಿದ್ದರು. ಕಾಂಗ್ರೆಸ್ ಪಕ್ಷದ ಡಾ. ಬಿ.ರಘು 69137 ಮತಗಳನ್ನು ಪಡೆದು ಸೋತಿದ್ದರು.

ಹಿಂದಿನ ಚುನಾವಣಾ ಫಲಿತಾಂಶ – ಯಾವ ಪಕ್ಷ ಗೆದ್ದಿತ್ತು – ಎಷ್ಟು ಮತಗಳ ಅಂತರದಿಂದ ಗೆದ್ದಿದ್ದರು.. – 2ನೇ ಸ್ಥಾನದಲ್ಲಿದ್ದ ಅಭ್ಯರ್ಥಿ ಯಾವ ಪಕ್ಷ..?
– 2018 ರಲ್ಲಿ ನಡೆದ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಅನಿರೀಕ್ಷಿತವಾಗಿ ಬಹುಮತದಿಂದ ಗೆದ್ದಿತ್ತು.
– 7,15,208 (53.8 %) ವೋಟ್ ಗಳನ್ನು ಬಿಜೆಪಿ ಪಡೆದು ಪ್ರಥಮ ಸ್ಥಾನ ಪಡೆದಿತ್ತು.
– ಗೆಲ್ಲುವ ಹುಮ್ಮಸ್ಸಿನಲ್ಲಿದ್ದ ಕಾಂಗ್ರೆಸ್ ಕೇವಲ 5,77,935 (43.5 %) ಮತಗಳನ್ನು ಪಡೆದು ಎರಡನೇ ಸ್ಥಾನ ಪಡೆಯಿತು.
– ಜೆಡಿಎಸ್ ಪಕ್ಷವು 9,346 (0.7 %) ಮತಗಳನ್ನು ಪಡೆದು ಮೂರನೇ ಸ್ಥಾನದಲ್ಲಿತ್ತು.
– ನಾಲ್ಕನೇ ಸ್ಥಾನ ಪಡೆದಿದ್ದ ಪಕ್ಷೇತರರು 8,785 (0.7 %) ಮತಗಳನ್ನು ‌ಪಡೆದಿದ್ದರು. 
– ಸಿಪಿಐಎಂ ಪಕ್ಷವು 8,287 (0.6 %) ಮತಗಳನ್ನು ಪಡೆದು ಕೊನೆಯ ಸ್ಥಾನ ಪಡೆದಿತ್ತು.

ಈ ಬಾರಿ ಚುನಾವಣೆಗೆ ಯಾವ ಪಕ್ಷದಿಂದ ಯಾರು ಸ್ಪರ್ಧೆ..? 
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅಂತಿಮವಾಗಿ ಕಣದಲ್ಲಿ 60 ಮಂದಿ ಅಭ್ಯರ್ಥಿಗಳು
ವಿವರ ಇಂತಿದೆ:
200-ಬೆಳ್ತಂಗಡಿ ವಿಧಾನಸಭಾ ಕ್ಷೇತ್ರ:
ಜನತಾದಳ(ಜಾತ್ಯಾತೀತ)ದ ಅಶ್ರಫ್‍ಲಿಕುಂಞ ಮುಂಡಾಜೆ, ಆಮ್‍ಆದ್ಮಿ ಪಕ್ಷದಿಂದ ಜನಾರ್ಧನ ಬಂಗೇರ, ಕಾಂಗ್ರೆಸ್ ಪಕ್ಷದಿಂದ ರಕ್ಷಿತ್ ಶಿವರಾಂ, ಭಾರತೀಯ ಜನತಾ ಪಾರ್ಟಿಯಿಂದ ಹರೀಶ್‍ಪೂಂಜ, ಸೋಶಿಯಲ್ ಡೆಮಾಕ್ರೆಟಿಕ್ ಪಕ್ಷದಿಂದ ಅಕ್ಬರ್ ಬೆಳ್ತಂಗಡಿ, ಸರ್ವೋದಯ ಕರ್ನಾಟಕ ಪಕ್ಷದಿಂದ ಆದಿತ್ಯ ನಾರಾಯಣ ಕೊಲ್ಲಾಜೆ, ತುಳುವರೇ ಪಕ್ಷದಿಂದ ಶೈಲೇಶ ಆರ್.ಜೆ ಹಾಗೂ ಪಕ್ಷೇತರ ಅಭ್ಯರ್ಥಿಯಾಗಿ ಮಹೇಶ್ ಆಟೋ.

201-ಮೂಡಬಿದ್ರೆ ವಿಧಾನಸಭಾ ಕ್ಷೇತ್ರ:
ಜನತಾದಳ (ಜಾತ್ಯಾತೀತ) ಪಕ್ಷದಿಂದ ಡಾ. ಅಮರಶ್ರೀ ಅಮರನಾಥ ಶೆಟ್ಟಿ, ಭಾರತೀಯ ಜನತಾ ಪಾರ್ಟಿಯಿಂದ ಉಮಾನಾಥ್ ಕೋಟ್ಯಾನ್, ಕಾಂಗ್ರೆಸ್ ಪಕ್ಷದಿಂದ ಮಿಥುನ್ ಎಂ. ರೈ, ಆಮ್ ಆದ್ಮಿ ಪಕ್ಷದಿಂದ ವಿಜಯನಾಥ ವಿಠಲ ಶೆಟ್ಟಿ, ಸೋಶಿಯಲ್ ಡೆಮಾಕ್ರೆಟಿಕ್ ಪಕ್ಷದಿಂದ ಅಲ್ಫೋನ್ಸ್ ಫ್ರಾಂಕೊ, ಕರ್ನಾಟಕ ರಾಷ್ಟ್ರ ಸಮಿತಿಯಿಂದ ದಯಾನಂದ, ಪಕ್ಷೇತರರಾಗಿ ಈಶ್ವರ ಎಸ್. ಮೂಡುಶೆಟ್ಟಿ ಹಾಗೂ ದುರ್ಗಾ ಪ್ರಸಾದ್.

202-ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರ:
ಕಾಂಗ್ರೆಸ್ ಪಕ್ಷದಿಂದ ಇನಾಯತ್ ಅಲಿ, ಭಾರತೀಯ ಜನತಾ ಪಾರ್ಟಿಯಿಂದ ಭರತ್ ಶೆಟ್ಟಿ ವೈ,  ಜನತಾದಳ (ಜಾತ್ಯಾತೀತ) ಪಕ್ಷದಿಂದ ಮೊಯಿದ್ದೀನ್ ಬಾವ, ಆಮ್ ಆದ್ಮಿ ಪಕ್ಷದಿಂದ ಸಂದೀಪ್ ಪಿ. ಶೆಟ್ಟಿ, ಅಖಿಲ ಭಾರತ ಹಿಂದೂ ಮಹಾಸಭಾ ಪಕ್ಷದಿಂದ ಧರ್ಮೇಂದ್ರ, ಹಿಂದೂಸ್ತಾನ್ ಜನತಾ ಪಾರ್ಟಿ ಸೆಕ್ಯುಲರ್ ಪಕ್ಷದಿಂದ ಬಿ. ಪ್ರವೀಣ್ ಚಂದ್ರರಾವ್, ಉತ್ತಮ ಪ್ರಜಾಕೀಯ ಪಕ್ಷದಿಂದ ಪ್ರಶಾಂತ್, ಕರ್ನಾಟಕ ರಾಷ್ಟ್ರ ಸಮಿತಿಯಿಂದ ಯಶೋಧ, ಪಕ್ಷೇತರರಾಗಿ ಮೆಕ್ಸಿ ಪಿಂಟೊ ಹಾಗೂ ಎಚ್. ವಿನಯ ಆಚಾರ್ಯ.

203-ಮಂಗಳೂರು ನಗರ ದಕ್ಷಿಣ ವಿಧಾನಸಭಾ ಕ್ಷೇತ್ರ:
ಕಾಂಗ್ರೆಸ್ ಪಕ್ಷದಿಂದ ಜೆ.ಆರ್. ಲೋಬೊ, ಭಾರತೀಯ ಜನತಾ ಪಾರ್ಟಿಯಿಂದ ಡಿ. ವೇದವ್ಯಾಸ್ ಕಾಮತ್, ಆಮ್ ಆದ್ಮಿ ಪಕ್ಷದಿಂದ ಕೆ. ಸಂತೋಷ್ ಕಾಮತ್, ಜನತಾದಳ (ಜಾತ್ಯಾತೀತ) ಪಕ್ಷದಿಂದ ಸುಮತಿ ಎಸ್. ಹೆಗಡೆ, ಅಖಿಲ ಭಾರತ ಹಿಂದೂ ಮಹಾಸಭಾ ಪಕ್ಷದಿಂದ ಧರ್ಮೇಂದ್ರ, ಕರ್ನಾಟಕ ರಾಷ್ಟ್ರ ಸಮಿತಿಯಿಂದ ವಿನ್ನಿ ಪಿಂಟೋ, ಜನಹಿತ ಪಕ್ಷದಿಂದ ಸುಪ್ರೀತ್ ಕುಮಾರ್ ಪೂಜಾರಿ ಹಾಗೂ ಪಕ್ಷೇತರ ಅಭ್ಯರ್ಥಿಯಾಗಿ ಕೆ.ಎಸ್. ಪೈ.

204-ಮಂಗಳೂರು ವಿಧಾನಸಭಾ ಕ್ಷೇತ್ರ:
ಕಾಂಗ್ರೆಸ್ ಪಕ್ಷದಿಂದ ಯು.ಟಿ. ಖಾದರ್ ಫರೀದ್, ಆಮ್ ಆದ್ಮಿ ಪಕ್ಷದಿಂದ ಮೊಹಮ್ಮದ್ ಅಶ್ರಫ್, ಭಾರತೀಯ ಜನತಾ ಪಾರ್ಟಿಯಿಂದ ಸತೀಶ್ ಕುಂಪಲ, ಸೋಶಿಯಲ್ ಡೆಮಾಕ್ರೆಟಿಕ್ ಪಾರ್ಟಿ ಆಫ್ ಇಂಡಿಯಾದಿಂದ ರಿಯಾಜ್ ಫರಂಗಿಪೇಟೆ, ಪಕ್ಷೇತರ ಅಭ್ಯರ್ಥಿಯಾಗಿ ದೀಪಕ್ ರಾಜೇಶ್ ಕುವೆಲ್ಲೊ.

205-ಬಂಟ್ವಾಳ ವಿಧಾನಸಭಾ ಕ್ಷೇತ್ರ:
ಆಮ್‍ಆದ್ಮಿ ಪಕ್ಷದಿಂದ ಪುರುಷೋತ್ತಮ ಗೌಡ ಕೋಲ್ಪೆ, ಜನತಾದಳ ಪಕ್ಷದಿಂದ ಪ್ರಕಾಶ್ ಗೋಮ್ಸ್, ಕಾಂಗ್ರೆಸ್ ಪಕ್ಷದಿಂದ ಬಿ. ರಮಾನಾಥ ರೈ, ಭಾರತೀಯ ಜನತಾ ಪಾರ್ಟಿಯಿಂದ ರಾಜೇಶ್ ನಾಯ್ಕ್. ಯು ಹಾಗೂ ಸೋಶಿಯಲ್ ಡೆಮಾಕ್ರೆಟಿಕ್ ಪಾರ್ಟಿ ಆಫ್ ಇಂಡಿಯಾದಿಂದ ಇಲ್ಯಾಸ್ ಮೊಹಮ್ಮದ್ ತುಂಬೆ

206-ಪುತ್ತೂರು ವಿಧಾನಸಭಾ ಕ್ಷೇತ್ರ:
ಕಾಂಗ್ರೆಸ್ ಪಕ್ಷದಿಂದ ಅಶೋಕ್ ಕುಮಾರ್  ರೈ, ಭಾರತೀಯ ಜನತಾ ಪಕ್ಷದಿಂದ ಆಶಾ ತಿಮ್ಮಪ್ಪ, ಜನತಾದಳ(ಜಾತ್ಯಾತೀತ) ಪಕ್ಷದಿಂದ ದಿವ್ಯ ಪ್ರಭ ಗೌಡ, ಆಮ್‍ಆದ್ಮಿ ಪಕ್ಷದಿಂದ ಡಾ. ಬಿ.ಕೆ. ವಿಶುಕುಮಾರ್ ಗೌಡ, ಸೋಶಿಯಲ್ ಡೆಮಾಕ್ರೆಟಿಕ್ ಪಾರ್ಟಿ ಆಫ್ ಇಂಡಿಯಾದಿಂದ ಶಾಫಿ ಬೆಳ್ಳಾರೆ, ಕರ್ನಾಟಕ ರಾಷ್ಟ್ರ ಸಮಿತಿಯಿಂದ ಐವನ್ ಫೆರಾವೋ ಪಿ., ಪಕ್ಷೇತರ ಅಭ್ಯರ್ಥಿಯಾಗಿ ಅರುಣ್ ಕುಮಾರ್ ಪುತ್ತಿಲ ಹಾಗೂ ಸುಂದರ ಕೊಯಿಲ.

207-ಸುಳ್ಯ ವಿಧಾನಸಭಾ ಚುನಾವಣಾ ಕ್ಷೇತ್ರ:
ಕಾಂಗ್ರೆಸ್ ಪಕ್ಷದಿಂದ ಜಿ. ಕೃಷ್ಣಪ್ಪ ರಾಮಕುಂಜ, ಭಾರತೀಯ ಜನತಾ ಪಾರ್ಟಿಯಿಂದ ಭಾಗೀರಥಿ ಮುರುಳ್ಯ, ಜನತಾದಳ (ಜಾತ್ಯಾತೀತ) ಪಕ್ಷದಿಂದ ಎಚ್.ಎಲ್ ವೆಂಕಟೇಶ್, ಆಮ್‍ಆದ್ಮಿ ಪಕ್ಷದಿಂದ ಸುಮನ ಬೆಳ್ಳಾರ್ಕಾರ್, ಕರ್ನಾಟಕ ರಾಷ್ಟ್ರ ಸಮಿತಿಯಿಂದ ಗಣೇಶ ಎಂ.(ಸುಧೀಶ್), ಉತ್ತಮ ಪ್ರಜಾಕೀಯ ಪಾರ್ಟಿ ಪಕ್ಷದಿಂದ  ರಮೇಶ್ ಬೂಡು ಸುಳ್ಯ, ಕಲ್ಯಾಣ ರಾಜ್ಯ ಪ್ರಗತಿ ಪಕ್ಷದಿಂದ ಸುಂದರ ಮೇರಾ ಹಾಗೂ ಪಕ್ಷೇತರ ಅಭ್ಯರ್ಥಿಯಾಗಿ ಗುರುವಪ್ಪ ಕಲ್ಲುಗುಡ್ಡೆ ಅಂತಿಮವಾಗಿ ಕಣದಲ್ಲಿ ಉಳಿದಿರುವ ಅಭ್ಯರ್ಥಿಗಳಾಗಿದ್ದಾರೆ.

* ಈ ಬಾರಿ ಕ್ಷೇತ್ರದಲ್ಲಿ ಯಾರ ಬಗ್ಗೆ ಒಲವಿದೆ..?
2023ರ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ – ಬಿಜೆಪಿ ಮಧ್ಯೆ ನೇರಾನೇರ ಪೈಪೋಟಿ ಇದೆ. ಕಣದಲ್ಲಿರೋ ಅಭ್ಯರ್ಥಿ ಗೆಲುವು.. ಸೋಲಿಗೆ ಕಾರಣವಾಗಬಹುದಾದ ಅಂಶಗಳೇನು..? ಅಭ್ಯರ್ಥಿಯ ಫ್ಲಸ್‌, ಮೈನಸ್‌ ಏನು..? ಅಂತ ನೋಡೋದಾದ್ರೆ… 
– ದಕ್ಷಿಣ ಕನ್ನಡ ಜಿಲ್ಲೆಯ 8 ವಿಧಾನಸಭಾ ಕ್ಷೇತ್ರಗಳಲ್ಲಿ ಒಟ್ಟು 60 ಅಭ್ಯರ್ಥಿಗಳು ಅಂತಿಮವಾಗಿ ಕಣದಲ್ಲಿದ್ದಾರೆ.
– ಕಾಂಗ್ರೆಸ್, ಬಿಜೆಪಿ, ಎಸ್ ಡಿಪಿಐ, ಜೆಡಿಎಸ್, ಎಎಪಿ, ಉತ್ತಮ ಪ್ರಜಾಕೀಯ ಪಕ್ಷ ಹೀಗೆ ಅನೇಕ ಪಕ್ಷಗಳಿಂದ ಅಭ್ಯರ್ಥಿಗಳಿದ್ದಾರೆ. ಬಿಗ್ ಫೈಟ್ ಇರುವುದು ಕಾಂಗ್ರೆಸ್ – ಬಿಜೆಪಿ ಮಧ್ಯೆ. 
– ಕಾಂಗ್ರೆಸ್ ಗೆ ಅಭಿವೃದ್ಧಿ ವಿಚಾರಗಳು, ಗ್ಯಾರಂಟಿ ಕಾರ್ಡ್ ಗೆಲುವು ತಂದುಕೊಡಬಹುದಾದರೂ, ಸೋಲಿಗೆ ಅಪಪ್ರಚಾರ ಕಾರಣ ಆಗಬಹುದು.
– ಬಿಜೆಪಿಗೆ ಹಿಂದೂತ್ವದ ಹೆಸರು ಜಯ ತಂದುಕೊಡಬಹುದಾದರೂ, ಸೋಲಿಗೆ ಕೋಮು ಗಲಾಟೆ, ಹಿಜಾಬ್ ಗಲಾಟೆ, ಬೆಲೆ ಏರಿಕೆ, ನಿರುದ್ಯೋಗ, ಅಭಿವೃದ್ಧಿ ಕುಸಿತ ಮೀಸಲಾತಿ ರದ್ದು, ಟಿಕೆಟ್ ಗೊಂದಲ, ಹಿಂದೂತ್ವ ಸಂಘಟನೆಗಳ ಅಸಮಾಧಾನ ಸೋಲಿಗೆ ಕಾರಣವಾಗಬಹುದು.
– ಇನ್ನು ಚುನಾವಣೆಯಲ್ಲಿ ಸ್ಪರ್ಧಿಸಿರುವ ಅಭ್ಯರ್ಥಿಗಳಿಗೆ ಪಕ್ಷದ ಇಮೇಜ್, ವೈಯಕ್ತಿಕ ಪ್ರಾಬಲ್ಯ, ಪ್ರಚಲಿತ ಘಟನೆಗಳಿಗೆ ನೀಡಿದ ಸಾಥ್, ಹೋರಾಟದ ಬೆಂಬಲ, ಅಭಿವೃದ್ಧಿಯ ನಡೆ, ಜನಬೆಂಬಲ ಪ್ಲಸ್ ಆಗಿದೆ.
– ವಲಯ ಮಟ್ಟದಲ್ಲಿ ಮಾತ್ರ ಗುರುತಿಸಿಕೊಂಡು, ಜಿಲ್ಲಾ ಮಟ್ಟದಲ್ಲಿ ಅಷ್ಟೇನೂ ಪರಿಚಯ ಇಲ್ಲದ ಅಭ್ಯರ್ಥಿಗಳಿಗೆ ಜಯ ಕಷ್ಟವಾಗಲಿದೆ.  ಪಕ್ಷದೊಳಗಿನ ಭಿನ್ನಮತ, ಗುಂಪುಗಾರಿಕೆ, ಅಸಮಾಧಾನ ಮೈನಸ್ ಆಗಬಹುದು.

ಕ್ಷೇತ್ರದ ಮತದಾರರ ವಿವರ- ಪುರುಷರು- ಮಹಿಳೆಯರು- ಯುವ ಮತದಾರರ ಸಂಖ್ಯೆ ಎಷ್ಟಿದೆ? 
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 17.58 ಲಕ್ಷ ಮತದಾರರಿದ್ದಾರೆ. ಇವರಲ್ಲಿ 8,51,000 ಪುರುಷರು ಹಾಗೂ 8,87,100 ಮಹಿಳಾ ಮತದಾರರಿದ್ದಾರೆ. 25,300 ಕ್ಕಿಂತಲೂ ಹೆಚ್ಚು ಯುವ ಮತದಾರರಿದ್ದಾರೆ.

ಜಾತಿವಾರು ವಿವರ- ಯಾವ ಜಾತಿಯವರು ನಿರ್ಣಾಯಕ- ಯಾವ ಜಾತಿಯ ಮತದಾರರು ಎಷ್ಟೆಷ್ಟಿದ್ದಾರೆ..? 
– ದ.ಕ. ಜಿಲ್ಲೆಯಲ್ಲಿ ಅತೀ ಹೆಚ್ಚು ಪ್ರಾಬಲ್ಯ ಹೊಂದಿರುವುದು ಬಿಲ್ಲವ ಸಮುದಾಯ.
– ನಂತರದ ಅಂದರೆ ಎರಡನೇ ಸ್ಥಾನ ಮುಸ್ಲಿಮರು.
– ಆ ಬಳಿಕ ನಂತರದ ಸ್ಥಾನ ಬಂಟ್ಸ್ ಮತ್ತು ಒಕ್ಕಲಿಗರು. 
– ಉಳಿದಂತೆ ಎಸ್‌ಸಿ, ಎಸ್‌ಟಿ, ಕ್ರೈಸ್ತರು, ಬ್ರಾಹ್ಮಣರು ಹಾಗೂ ಇತರೆ ಜಾತಿಗಳು ಒಳಗೊಳ್ಳುತ್ತವೆ.
– ದ.ಕ.ದಲ್ಲಿ 3.12 ಲಕ್ಷದಷ್ಟು ಬಿಲ್ಲವ ಮತದಾರರಿದ್ದಾರೆ. 
– ಮುಸ್ಲಿಂ ಮತದಾರರ ಸಂಖ್ಯೆ 3.01 ಲಕ್ಷ ಇದ್ದಾರೆ. ಇವರು ದ್ವಿತೀಯ ಸ್ಥಾನದಲ್ಲಿದ್ದಾರೆ. 
– ನಂತರದ ಸ್ಥಾನ ಬಂಟ್ಸ್ ಮತದಾರರು 1.89 ಲಕ್ಷ
– ಎಸ್‌ಸಿ.ಎಸ್‌ಟಿ 1.85 ಲಕ್ಷ.
– ಬಳಿಕ ಒಕ್ಕಲಿಗರು 1.28 ಲಕ್ಷದಷ್ಟಿದ್ದಾರೆ
– ಬ್ರಾಹ್ಮಣರು 1.25 ಲಕ್ಷ, ಕ್ರೈಸ್ತ 1.06 ಲಕ್ಷ ಹಾಗೂ ಇತರೆ ಸಮುದಾಯದವರಿದ್ದಾರೆ.

Previous Post

ಕರ್ನಾಟಕದ 16 ಕ್ಷೇತ್ರಗಳನ್ನು ಹೊರತುಪಡಿಸಿ ಉಳಿದ ಕಡೆಗಳಲ್ಲಿ ಸಂಘಪರಿವಾರದ ಮನಸ್ಥಿತಿ ಇಲ್ಲದ ಅಭ್ಯರ್ಥಿಗಳಿಗೆ ನಮ್ಮ ಬೆಂಬಲ ನೀಡುವ ತೀರ್ಮಾನ: ಅಪ್ಸರ್ ಕೊಡ್ಲಿಪೇಟೆ

Next Post

ಅರುಣ್ ಪುತ್ತಿಲ ಯಾವ ಸೀಮೆಯ ಹಿಂದುತ್ವವಾದಿ:ಪ್ರಭಾಕರ್ ಭಟ್

Next Post
ಅರುಣ್ ಪುತ್ತಿಲ ಯಾವ ಸೀಮೆಯ ಹಿಂದುತ್ವವಾದಿ:ಪ್ರಭಾಕರ್ ಭಟ್

ಅರುಣ್ ಪುತ್ತಿಲ ಯಾವ ಸೀಮೆಯ ಹಿಂದುತ್ವವಾದಿ:ಪ್ರಭಾಕರ್ ಭಟ್

ನಮ್ಮ ಬಗ್ಗೆ

ಹಯಾತ್ TV ರಾಜ್ಯದ ಹೆಸರಾಂತ ವಾರ್ತಾ ವೇದಿಕೆಗಳಲ್ಲಿ ಒಂದಾಗಿದೆ. ಇದರಲ್ಲಿ ರಾಜ್ಯ, ದೇಶ, ವಿದೇಶ, ಕ್ರೀಡೆ, ಸಿನಿಮಾ, ಮನರಂಜನೆ ಸೇರಿ ಹತ್ತಾರು ಸುದ್ದಿ ಗಳನ್ನು ಪ್ರತಿದಿನ ಹಾಕಲಾಗುತ್ತದೆ. ದೇಶ ಬದಲಾಗುತ್ತಿದೆ, ನ್ಯೂಸ್ ಅನ್ನು ಓದುವ ವಿಧಾನ ವೂ ಬದಲಾಗಲಿದೆ. ಈ ಬದಲಾವಣೆಯ ಬೆನ್ನಲ್ಲೇ ನಾವಿದ್ದೇವೆ.

ಜಾಹೀರಾತು ಮತ್ತು ಸುದ್ದಿಗಾಗಿ ಸಂಪರ್ಕಿಸಿ

Hayath Tv Media network
Mangalore
Chief Editor Ashraf Kammaje – 8861948115

Print Media

9483267000

  • Contact Us
  • HayathTV
  • Privacy Policy
  • Terms and Conditions

© 2025 HAYATH TV NEWS.

No Result
View All Result
  • Contact Us
  • HayathTV
  • Privacy Policy
  • Terms and Conditions

© 2025 HAYATH TV NEWS.