

ಉಡುಪಿ: ಹಿಂದಿನಿಂದಲೂ ಕಾಂಗ್ರೆಸ್ ಪಕ್ಷ ಮಹಿಳೆಯರಿಗೆ ಪ್ರಾತಿನಿಧ್ಯವನ್ನು ನೀಡುತ್ತಲೇ ಬಂದಿದೆ. ಬಿಜೆಪಿಯ ಭ್ರಷ್ಟಾಚಾರ, ಬೆಲೆ ಏರಿಕೆ ಪ್ರತೀ ಮಹಿಳೆಯರಿಗೆ ಅರ್ಥವಾಗಿದೆ. ಬಿಜೆಪಿಯ ದುರಾಡಳಿತದಿಂದ ಬೇಸೆತ್ತಿರುವ ಮಹಿಳೆಯರು ಈ ಭಾರಿ ಸರಕಾರವನ್ನು ಬದಲಾಯಿಸ ಬೇಕೆನ್ನುವ ಆಶಯವನ್ನು ಹೊಂದಿದ್ದು ಕಾಂಗ್ರೆಸ್ ಪಕ್ಷವನ್ನು ಪೂರ್ಣವಾಗಿ ಬೆಂಬೆಲಿಸಲಿದ್ದಾರೆ ಎಂದು ಉಡುಪಿ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಪ್ರಸಾದ್‌ರಾಜ್ ಕಾಂಚನ್ ಹೇಳಿದರು.
ಅವರು ಉಡುಪಿ ಕಾಂಗ್ರೆಸ್ ಭವನದಲ್ಲಿ ಉಡುಪಿ ಮತ್ತು ಬ್ರಹ್ಮಾವರ ಕಾಂಗ್ರೆಸ್ ಬ್ಲಾಕ್ ಸಹಯೋಗದಲ್ಲಿ ನಡೆದ ಉಡುಪಿ ವಿಧಾನಸಭಾ ಕೇತ್ರದ ಮಹಿಳಾ ಸಮಾವೇಶದಲ್ಲಿ ಮಾತನಾಡಿದರು. ಅಖಿಲ ಭಾರತ ಮಹಿಳಾ ಕಾಂಗ್ರೆಸ್ ಮೈಸೂರು ವಿಭಾಗದ ಉಸ್ತುವಾರಿ ನಿಧಿ ಚತುರ್ವೇದಿ ಸಮಾವೇಶವನ್ನು ಉದ್ಘಾಟಿಸಿದರು

ಒಟ್ಟಾಗಿ ಬಾಳುವುದು ನಮ್ಮ ಸಂಸ್ಕೃತಿ:
ಒಟ್ಟಾಗಿ ಬೆಳೆಯೋಣ, ಒಟ್ಟಾಗಿ ಬಾಳ್ಳೋಣ ಯಾರನ್ನೂ ದ್ವೇಷಿಸದೇ ಶಾಂತಿಯಿಂದ ಇರೋಣ ಇದು ಉಪನಿಷತ್ತು ಹಾಗೂ ನಮ್ಮ ಸಂಸðತಿ. ಕಾಂಗ್ರೆಸ್‌ನ ಆಡಳಿತದ ನೀತಿಯೂ ಇದೆ ಆಗಿದೆ ಎಂದು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ವಕ್ತಾರ ಸುಧೀರ್ ಕುಮಾರ್ ಮರೋಳಿ ಹೇಳಿದರು.

ಮಾದರಿ ದೇಶ ಕಟ್ಟುವ:
ದೇಶ ಕಟ್ಟಲು ನಾವು ಮಹಿಳೆಯರಿಗೆ ಪ್ರೋತ್ಸಾಹ ನೀಡುವುದು ಅಗತ್ಯ. ಇದೀಗ ವಿರೋಧ ಪಕ್ಷದವರು ನಾನಾ ಷಡ್ಯಂತ್ರ ತೋರಿಸಿ ನಮ್ಮ ಮಹಿಳೆಯರನ್ನು, ಯುವಕರನ್ನು, ಮಕ್ಕಳನ್ನು ಬೇರೆ ರೀತಿಯಲ್ಲಿ ತಳ್ಳುವಂತಹ ವ್ಯವಸ್ಥೆಯನ್ನು ಮಾಡಿದ್ದಾರೆ. ಇಂತಹರಿಗೆ ನಾವು ಮತ್ತೆ ಪ್ರೋತ್ಸಾಹ ನೀಡಿದರೆ ಈ ಹಿಂದೆ ಮಹಿಳೆಯರು ಶೋಷಣೆಗೆ ಒಳಗಾಗುತ್ತಿದ್ದ ಪದ್ದತಿಯನ್ನು ಮತ್ತೆ ತರುವ ಪ್ರಯತ್ನ ಮಾಡಬಹುದು. ಇಂತಹ ಕೃತ್ಯಗಳಿಗೆ ನಾವೆಲ್ಲ ವಿರೋಧಿಸುವ ಮೂಲಕ ನಮ್ಮ ದೇಶ ಪ್ರಪಂಚದ ಮಾದರಿ ದೇಶ ಮಾಡಬೇಕಾಗಿದೆ ಎಂದು ಪ್ರಸಾದ್‌ರಾಜ್ ಕಾಂಚನ್ ಹೇಳಿದರು.

ಉಡುಪಿ ಚಿಕ್ಕಮಗಳೂರು ಲೋಕಸಭಾ ವೀಕ್ಷಕ ಸುದರ್ಶನ ಕೌಶಿಕ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಶೋಕ್ ಕುಮಾರ್ ಕೊಡವೂರು, ಹಿರಿಯ ಕಾಂಗ್ರೆಸ್ ನಾಯಕಿ ಸರಳಾ ಕಾಂಚನ್, ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಗೀತಾ ವಾಗ್ಳೆ, ಕಾರ್ಯಾಧ್ಯಕ್ಷ ಕಿಶನ್ ಹೆಗ್ಡೆ ಕೊಳ್ಳೆಬೈಲು, ರಾಜ್ಯ ಮಾಧ್ಯಮ ಪ್ರಕೋಷ್ಠದ ಕಾರ್ಯದರ್ಶಿ ಅಮೃತ್ ಶೆಣೈ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಮೇಶ್ ಕಾಂಚನ್,ಉಡುಪಿ ಬ್ಲಾಕ್ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಮಮತಾ ಶೆಟ್ಟಿ, ಕಾಂಗ್ರೆಸ್ ನಾಯಕರಾದ ವೆರೋನಿಕಾ ಕರ್ನೇಲಿಯೋ, ಮೀನಾಕ್ಷಿ ಮಾಧವ ಬನ್ನಂಜೆ, ಪ್ರಮೀಳ, ಸುಕನ್ಯ ಕಡೆಕಾರ್, ದಿನಕರ ಹೇರೂರು, ಮಲ್ಲಿಕಾ ಪೂಜಾರಿ, ವಿಶ್ವಾಸ್ ಅಮೀನ್, ರೋಶನ್ ಶೆಟ್ಟಿ, ಜ್ಯೋತಿ ಹೆಬ್ಟಾರ್, ಗೋಪಿ ನಾಯ್ಕ, ಗಣೇಶ್ ನೆರ್ಗಿ ಮೊದಲಾದವರು ಪಾಲ್ಗೊಂಡಿದ್ದರು.
ಇಂದು ಡಿಕೆಶಿಯಿಂದ ಉಡುಪಿಯಲ್ಲಿ ರೋಡ್ ಶೋ
ಉಡುಪಿ ವಿಧಾನಸಭಾ ಕಾಂಗ್ರೆಸ್ ಅಭ್ಯರ್ಥಿ ಪ್ರಸಾದ್‌ರಾಜ್ ಕಾಂಚನ್ ನೇತೃತ್ವದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ಎ. 24ರಂದು ಮಧ್ಯಾಹ್ನ ಉಡುಪಿಗೆ ಆಗಮಿಸಲಿದ್ದಾರೆ. ಮಧ್ಯಾಹ್ನ 3 ಗಂಟೆಗೆ ಉಡುಪಿಯಲ್ಲಿ ರೋಡ್ ಶೋ ನಡೆಸಲಿದ್ದಾರೆ.

ಸಿಟಿ ಬಸ್‌ನಿಲ್ದಾಣದ ನರ್ಮ್ ಬಸ್ ಸ್ಟ್ಯಾಂಡ್ ನಿಂದ ಆರಂಭಗೊಂಡ ರೋಡ್ ಶೋ, ಕ್ಲಾಕ್ ಟವರ್ ಗಾಂಧಿ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಬಳಿಕ ಕೆ. ಎಂ. ಮಾರ್ಗ, ಕೋರ್ಟ್ ರಸ್ತೆ, ಡಯಾನ ಹೋಟೆಲ್ ಬಳಿ ಬಲಕ್ಕೆ ತಿರುಗಿ ಅಜ್ಜರಕಾಡಿನ ಹುತಾತ್ಮ ಚೌಕದವರೆಗೆ ಸಾಗಿ ಬರಲಿದೆ. ಬಳಿಕ ಅಲ್ಲಿ ಸಾರ್ವಜನಿಕ ಸಭೆ ನಡೆದು ಕಾರ್ಯಕ್ರಮ ಸಮಾಪ್ತಿಗೊಳ್ಳಲಿದೆ. ಸುಮಾರು 7 ಸಾವಿರ ಮಂದಿ ಪಾಲ್ಗೊಳ್ಳುವ ನಿರೀಕ್ಷೆ ಇದೆ ಎಂದು ರಾಜ್ಯ ಮಾಧ್ಯಮ ಪ್ರಕೋಷ್ಠದ ಕಾರ್ಯದರ್ಶಿ ಅಮೃತ್ ಶೆಣೈ ತಿಳಿಸಿದ್ದಾರೆ.
