

ವರದಿ :ಹಂಝ ಬಂಟ್ವಾಳ
ಬಂಟ್ವಾಳ :ಮತದಾನ ಪ್ರತಿಯೊಬ್ಬ ನಾಗರಿಕನ ಹಕ್ಕಾಗಿದೆ,ಜಾಗರೂಕತೆಯಿಂದ ಹಕ್ಕನ್ನು ಚಲಾಯಿಸಬೇಕು, ಚುನಾವಣೆ ಹತ್ತಿರ ಬರುತ್ತಿದ್ದು ರಾಜಕೀಯ ಪಕ್ಷಗಳು ತನ್ನ ಕಾರ್ಯ ಚಟುವಟಿಕೆಯನ್ನು ನಡೆಸುತ್ತಿದೆ. ಆದರೆ ಈ ರಾಜಕೀಯ ಆಟಕ್ಕೆ ಯುವಜನತೆ ಪರಸ್ಪರ ಸಂಬಂಧಗಳು ಕಳಚಿ ಹೋಗದಂತೆ ನೋಡಿಕೊಳ್ಳಬೇಕು .ಕೇವಲ ರಾಜಕೀಯಕ್ಕಾಗಿ ಯುವಕರು ಸೌಹಾರ್ದತೆ ಹಾಗೂ ಊರಿನ ಜಮಾಅತಿನ ಶಾಂತಿಗೆ ಧಕ್ಕೆಉಂಟಾಗುವ ರೀತಿಯಲ್ಲಿ ಯಾವುದೇ ಕಾರಣಕ್ಕೂ ನಡೆದುಕೊಳ್ಳಬಾರದು.ಇಂದಿನ ಯುವಕರು ಮುಂದೆ ಮಸೀದಿ ಮದರಸ ಹಾಗೂ ಜಮಾಅತಿನ ಇಸ್ಲಾಮಿಕ್ ಕಾರ್ಯ ಚಟುವಟಿಕೆಗಳಿಗೆ ನೇತೃತ್ವ ನೀಡಬೇಕಾದವರು. ಆದುದರಿಂದ ಯುವಕರು ತಮ್ಮ ಜೀವನವನ್ನು ಸಂಪೂರ್ಣವಾಗಿ ಇಲಾಹೀ ಮಾರ್ಗದರ್ಶನದಲ್ಲಿ ಮುನ್ನಡೆಸಬೇಕು. ನಮ್ಮ ಮಹಲ್ಲಿಗೆ ಉತ್ತಮವಾದ ಹೆಸರನ್ನು ಗಳಿಸಿಕೊಟ್ಟ ಪೂರ್ವಿಕ ಗುರುಹಿರಿಯರ ಶ್ರಮಗಳನ್ನು ಅರ್ತೈಸಿಕೊಂಡು ಮಹಲ್ಲಿನ ಹೆಸರನ್ನು ಉಳಿಸಿ ಅಭಿವೃದ್ಧಿಗೆ ಕೊಂಡಯ್ಯಲು ಪಣತೊಡಬೇಕು. ಯುವಕರು ಕುಟುಂಬವನ್ನು ಮುನ್ನಡೆಸುವ ಜವಾಬ್ದಾರಿಯನ್ನು ಹೊಂದಿರುವವರಾಗಿದ್ದು ವಿವೇಕ ಹಾಗೂ ಕ್ರಿಯಾಶೀಲತೆ ಇರುವ ಒಳಿತಿನ ಚಿಂತನೆಗಳನ್ನು ಹೆಚ್ಚಿಸಿ. ಯಾವುದೇ ರೀತಿಯ ಮಾಧಕ ವ್ಯಸನಕ್ಕೆ ಬಲಿಯಾಗದಿರಿ. ಇಂದು ಮಾಧಕ ವಸ್ತುಗಳ ಉಪಯೋಗ ಹೆಚ್ಚುತ್ತಿದ್ದು ಇದು ಮುಂಬರುವ ದಿನಗಳಲ್ಲಿ ಸಮುದಾಯಕ್ಕೆ ಅತಿದೊಡ್ಡ ಮಾರಕವಾಗಲಿದೆ. ಆದುದರಿಂದ ಯುವಕರೇ ಇದರ ವಿರುದ್ಧ ಧ್ವನಿಯೆತ್ತಿ ಮುಂಧಿನ ಪೀಳಿಗೆಯನ್ನು ಒಳಿತಿನೆಡೆಗೆ ಕೊಂಡೊಯ್ಯಲು ಯುವಕರು ಮುಂದೆ ಬರಬೇಕು. ಹಾಗೂ ಹಿರಿಯರು ಮತ್ತು ಉಲಮಾ ಶ್ರೇಷ್ಠ ರೊಂದಿಗೆ ಗೌರವದಿಂದ ವರ್ತಿಸಿ.ಅವರ ಉಪದೇಶದಂತೆ ಜೀವನವನ್ನು ಮುಂದೆ ಸಾಗಿಸಲು ತಯಾರಾಗಿ.ಮಾತ್ರವಲ್ಲ ಮುಂದೆ ಬರುವ ಚುನಾವಣೆಯ ವಿಷಯದಲ್ಲಿ ಸಾಮಾಜಿಕ ಜಾಲತಾಣದಲ್ಲಿ ಬರುತ್ತಿರುವ ಸಂದೇಶವನ್ನು ರವಾನಿಸುವಾಗ ಜಾಗೃತವಹಿಸಿ. ದುಡುಕಿನ ನಿರ್ಧಾರ, ರಾಜಕೀಯ ಹುಚ್ಚಾಟಕ್ಕೆ ನಿಮ್ಮ ಭವಿಷ್ಯವನ್ನು ಹಾಳು ಮಾಡದಿರಿ. ಸೌಹಾರ್ದತೆಯಲ್ಲಿ, ಹೊಂದಾಣಿಕೆಯಲ್ಲಿ ಇರಬೇಕು ಎಂದು, ಮುಹಿಯ್ಯುದ್ದೀನ್ ಜುಮಾ ಮಸೀದಿ ಮಿತ್ತಬೈಲ್ ಇದರ ಖತೀಬರಾದ ಹಾಜಿ ಎಂ,ವೈ.ಅಶ್ರಫ್ ಫೈಝಿ ಈದ್ ಸಂದೇಶವನ್ನು ಯುವಕರಿಗೆ ನೀಡಿದರು

ಸೌಹಾರ್ದತೆಯ ಮಹಾ ಸಂಗಮ
ಈದ್ ಪ್ರಯುಕ್ತ ಮುಹಿಯುದ್ದೀನ್ ಜುಮಾ ಮಸೀದಿ ಮಿತ್ತಬೈಲ್ ಇಲ್ಲಿಗೆ ಬಂಟ್ವಾಳ ಮೊಡಂಕಾಪು ಇನ್ಫೆಂಟ್ ಜೀಸಸ್ ಚರ್ಚ್ ಪಾಲನಾ ಮಂಡಳಿ ಹಾಗೂ ಅಂತರ್ ಧರ್ಮಿಯ ಆಯೋಗವು ಮಸೀದಿಗೆ ಬಂದು ಈದ್ ಶುಭಾಶಯಗಳನ್ನು ಕೋರಿ ಸೌಹಾರ್ದತೆಯ ಮಹಾ ಸಂಗಮವು ಊರಿಗೆ ಮಾದರಿಯಾಯಿತು.
ಈ ಸಂದರ್ಭದಲ್ಲಿ ಚರ್ಚ್ ನ ಪ್ರಧಾನ ಧರ್ಮ ಗುರುಗಳಾದ ಅತೀ. ವಂ. ಫಾ. ವಲೇರಿಯನ್ ಡಿ ಸೋಜಾ,ಶ್ರೀ ಲಾಯ್ಡ್ ಮನೋಹರ್ ಡಿ ಕೊಸ್ತಾ,ಶ್ರೀಮತಿ ವೀನಾ ಗೋವಿಯಸ್, ಶ್ರೀ ಆನಿಲ್ ಫ್ರೆಂಕ್, ಶ್ರೀ ಜೋಯ್ ಡಿ ಕ್ರೋಜ್,ಶ್ರೀಮತಿ ಪ್ರೀಯ ಡಿ ಸೋಜಾ, ಶ್ರೀ ಮ್ಯಾಕ್ಸಿಮ್ ಲಸ್ರಾದೊ, ಶ್ರೀ ಫ್ರಾನ್ಸಿಸ್ ಡಿ ಕುನ್ಹಾ, ಶ್ರೀ ಥೋಮಸ್ ಸಲ್ದಾನಾ, ಶ್ರೀ ವಿನಯ್
ಡಿಮಲ್ಲೊ, ಹಾಗೂ ಮಸೀದಿ ಖತೀಬರಾದ ಅಶ್ರಫ್ ಫೈಝಿ, ಜಮಾತ್ ಅಧ್ಯಕ್ಷರಾದ ಸಯ್ಯದ್ ಫಲುಲ್ ತಂಗಳ್, ಉಪಾಧ್ಯಕ್ಷರುಗಳಾದ ಅಬ್ದುಲ್ ರಹಿಮಾನ್, ಜಮಾಲ್, ಕೋಶಾಧಿಕಾರಿ ಹಬೀಬುಲ್ಲ,ಕಾರ್ಯದರ್ಶಿಗಳಾದ ಅಶ್ರಫ್,
ಆದಮ್ ಪಲ್ಲ , ಇಕ್ಬಾಲ್ ನಂದರಬೆಟ್ಟು ಉಪಸ್ಥಿತರಿದ್ದರು.ಕಾರ್ಯಕ್ರಮ ಮುಖ್ಯ ಸಂಯೋಜಕರಾದ ಜೀವನ ಲೋಬೊ ಆಯೋಜಿಸಿ ಮಿತ್ತಬೈಲ್ ಜಮಾತ್ ಪ್ರಧಾನ ಕಾರ್ಯದರ್ಶಿ ಅಕ್ಬರ್ ಅಲಿ ಕಾರ್ಯಕ್ರಮ ನಿರೂಪಿಸಿದರು



