

ಬಿಜೆಪಿ ಶಾಸಕ ಉಮಾನಾಥ ಕೋಟ್ಯಾನ್ ಭೂಸ್ವಾಧೀನಕ್ಕೆ ಸಂಬಂಧಿಸಿದಂತೆ ಮತ್ತು ಬೆನಾಮಿ ಆಸ್ತಿ ಹೊಂದಿರುವ ಬಗ್ಗೆ ಕಾಂಗ್ರೆಸ್ ಪಕ್ಷ ನಕಲಿ ದಾಖಲೆ ನೀಡಿದೆ. ಈ ಬಗ್ಗೆ ದಾಖಲೆ ನೀಡಿದವರ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡುವುದಾಗಿ ಹೇಳಿದ್ದಾರೆ. ಅವ್ರು ಮೊದ್ಲು ಆ ಕೆಲಸ ಮಾಡಲಿ. ಅವರ ಹೇಳಿಕೆಗೆ ಸ್ವಾಗತ ಮತ್ತು ಅವರ ಸವಾಲನ್ನು ಸ್ವೀಕರಿಸಲು ನಾನು ಸಿದ್ಧ ಎಂದು ಮೂಡಬಿದ್ರೆ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಮಿಥುನ್ ರೈ ಸವಾಲ್ ಹಾಕಿದ್ದಾರೆ. ಅವರು ಮಂಗಳೂರು ನಗರದ ಮಲ್ಲಿಕಟ್ಟೆಯಲ್ಲಿ ನಡೆದ ಪ್ರೆಸ್ ಮೀಟ್ ನಲ್ಲಿ ಮಾತನಾಡಿದರು. ಮೂಡಬಿದ್ರೆ ಶಾಸಕರು ಅಲ್ಲಿನ ಕೃಷಿ ಭೂಮಿಯನ್ನು ಕೈಗಾರಿಕೆಗಾಗಿ ಸ್ವಾಧೀನ ಪಡಿಸಿಕೊಳ್ಳಲು ಸರಕಾರದ ಹಂತದಲ್ಲಿ ನಡೆಸಿರುವ ಪತ್ರಗಳ ದೃಢೀಕೃತ ಪ್ರತಿಗಳನ್ನು ಪಡೆದು ಹೇಳಿಕೆ ನೀಡಿದ್ದೇನೆ. ಆಧಾರ ರಹಿತವಾಗಿ ಹೇಳಿಕೆ ನೀಡಿಲ್ಲ. ಈ ಬಗ್ಗೆ ಯಾವ ದೈವ ದೇವರ ಮುಂದೆ ಆ ಪ್ರದೇಶದ ಜನರ ಮುಂದೆ ನಮ್ಮ ಮಾತುಗಳನ್ನು ಪುನರುಚ್ಚರಿ ಸುತ್ತೇವೆ. ನಾವು ಸತ್ಯವನ್ನೇ ಹೇಳುತ್ತಿದ್ದೇವೆ. ಯಾರನ್ನೂ ತೇಜೋವಧೆ ಮಾಡುವ ಅಗತ್ಯ ಕಾಂಗ್ರೆಸ್ ಗೆ ಇಲ್ಲ ಎಂದು ಕಿಡಿಕಾರಿದರು

