ಅನ್ವರ್ ಸಾದಾತ್ ಬಜತ್ತೂರು
ಪ್ರ.ಕಾರ್ಯದರ್ಶಿ,ಎಸ್‌ಡಿಪಿಐ ದ.ಕ


ಮಂಗಳೂರು ಎ 22: ರಂಜಾನ್ ತಿಂಗಳ ಮೂವತ್ತು ದಿನಗಳ ಉಪವಾಸದ ನಂತರದ ದಿನದಲ್ಲಿ ಜಗತ್ತಿನಾದ್ಯಂತ ವಿಶ್ವಾಸಿಗಳು ಅತ್ಯಂತ ಭಕ್ತಿ, ಪ್ರೀತಿ, ಸಡಗರದಿಂದ ಆಚರಿಸುವ ಪಾವನ ಹಬ್ಬವಾಗಿದೆ ಈದುಲ್ ಫಿತರ್.
ಈದ್ ಹಬ್ಬವು ಸಹೋದರತೆ, ಸಹಬಾಳ್ವೆ, ಏಕತೆಯ ಸಮಾಜದ ನಿರ್ಮಾಣಕ್ಕೆ ಪ್ರೇರಣೆಯಾಗಲಿ ಎಂದು SDPI ದಕ್ಷಿಣ ಕನ್ನಡ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅನ್ವರ್ ಸಾದತ್ ಬಜತ್ತೂರು ಈದ್ ಸಂದೇಶದಲ್ಲಿ ತಿಳಿಸಿದರು.

ಸಮಾಜದಲ್ಲಿ ಬಡವ ,ಶ್ರೀಮಂತ, ದನಿಕ,ರಾಜ,ಕಾರ್ಮಿಕ, ಎಂಬ ಯಾವುದೇ ಭೇದವಿಲ್ಲದೆ ಪ್ರಭಾತದಿಂದ ಸೂರ್ಯಾಸ್ತದ ವರೆಗೂ ಅನ್ನಾಹಾರ,ಪಾನೀಯವನ್ನು ತ್ಯಜಿಸಿ, ಮನಸ್ಸು, ಹೃದಯ,ಶರೀರವನ್ನು ಆಧ್ಯಾತ್ಮಿಕ ಚಿಂತನೆಯ ಆಳದಲ್ಲಿ ಶುದ್ದೀಕರಿಸುವ ಮೂಲಕ ಮಾನವ ಬದುಕನ್ನು ಪುನೀತಗೊಳಿಸುವ ರಂಝಾನ್ ಅನುಭವಗಳು ಬದುಕಿಗೆ ಬದುಕಿನ ಪ್ರತಿಯೊಂದು ಹಂತದಲ್ಲೂ ಮಾದರಿಯಾಗಬೇಕು, ಅನ್ಯಾಯ, ಅಧರ್ಮ, ಅನೀತಿ ತಾಂಡವವಾಡುತ್ತಿರುವ ಪ್ರಸಕ್ತ ದಿನಗಳಲ್ಲಿ ಯಾವುದೇ ದುಷ್ಟ ಶಕ್ತಿಗಳ ಮುಂದೆ ಮಂಡಿಯೂರದೆ ,ಪಾದಗಳ ಮೇಲೆ ದೃಢವಾಗಿ ನಿಂತು ಆದುನಿಕ ಫರೋವಾಗಳ ವಿರುದ್ಧ ಸಂಘಟಿತ ಹೋರಾಟ ನಡೆಸುವ ಸಂಕಲ್ಪವನ್ನು ಭಾರತೀಯರಾದ ನಾವೆಲ್ಲರೂ ಈದ್ ಸುದಿನದಲ್ಲಿ ಕೈಗೊಳ್ಳಬೇಕು, ಬಾರತವು ಹಲವಾರು ಧರ್ಮ, ಜಾತಿ,ಮತ, ಜನಾಂಗ ,ಪಂಗಡಗಳ ತವರೂರು ..ಇಲ್ಲಿ ಎಲ್ಲರನ್ನೂ ಒಳಗೊಂಡ ಬಹುತ್ವ ,ವಿವಿದತೆಯಲ್ಲಿ ಏಕತೆ ಯಾಗಿದೆ ದೇಶದ ಸೊಬಗು. ಇದನ್ನು ಉಳಿಸಿ ಬೆಳೆಸಲು ಬಾರತೀಯರಾದ ನಾವೆಲ್ಲರೂ ಕಟಿ ಬದ್ಧರಾದರೆ ಮಾತ್ರ ದೇಶದ ಆತ್ಮವಾದ ಸಹೋದರತೆ, ಸಹಭಾಳ್ವೆಯನ್ನು ಉಳಿಸಲು ಸಾದ್ಯ ,ಇದಕ್ಕೆ ಧಾರ್ಮಿಕ ಹಬ್ಬಗಳು ಪ್ರೇರಣೆಯಾಗಲಿ ಎಂದು ಸಂದೇಶವನ್ನು ನೀಡಿದರು



