

ಇತ್ತೀಚೆಗೆ ದುಷ್ಕರ್ಮಿಗಳಿಂದ ಹತ್ಯೆಯಾದ ಗ್ಯಾಂಗ್ಸ್ಟರ್ ಅತೀಕ್ ಅಹಮದ್ ಸಾವಿರಾರು ಕೋಟಿ ರು. ಆಸ್ತಿ ಸಂಪಾದನೆ ಮಾಡಿದ್ದ ವಿಷಯ ಬೆಳಕಿಗೆ ಬಂದಿದೆ.
ಲಖನೌ: ಇತ್ತೀಚೆಗೆ ದುಷ್ಕರ್ಮಿಗಳಿಂದ ಹತ್ಯೆಯಾದ ಗ್ಯಾಂಗ್ಸ್ಟರ್ ಅತೀಕ್ ಅಹಮದ್ ಸಾವಿರಾರು ಕೋಟಿ ರು. ಆಸ್ತಿ ಸಂಪಾದನೆ ಮಾಡಿದ್ದ ವಿಷಯ ಬೆಳಕಿಗೆ ಬಂದಿದೆ. ಸಿಎಂ ಯೋಗಿ ಸರ್ಕಾರ ಅತೀಕ್ ಸೇರಿದ 1169 ಕೋಟಿ ರು. ಮೌಲ್ಯದ ಆಸ್ತಿ ವಶಪಡಿಸಿಕೊಂಡಿದೆ.
ಹೀಗೆ ವಶಪಡಿಸಿಕೊಂಡ ಆಸ್ತಿ ಪೈಕಿ 750 ಕೋಟಿ ರು. ಮೌಲ್ಯದ ಭೂಮಿ ಮತ್ತು 417 ಕೋಟಿ ರು. ಮೌಲ್ಯದ ಇತರೆ ಆಸ್ತಿ ಸೇರಿವೆ. ಇದರ ಜೊತೆಗೆ ಹುಡುಕಿದಷ್ಟೂಆತನ ಇನ್ನಷ್ಟು ಆಸ್ತಿಗಳು ಪತ್ತೆಯಾಗುತ್ತಲೇ ಇವೆ. ಆದರೆ ಈಗಾಗಲೇ ಆಸಿಫ್ (Asif) ಮತ್ತು ಆತನ ಸೋದರ ಹತ್ಯೆಗೀಡಾಗಿದ್ದಾರೆ . ಮಗ ಕೂಡಾ ಎನ್ಕೌಂಟರ್ಗೆ (Encounter) ಬಲಿಯಾಗಿದ್ದಾನೆ. ಇನ್ನಿಬ್ಬರು ಪುತ್ರರು ಜೈಲು ಸೇರಿದ್ದಾರೆ. ಪತ್ನಿ ಪರಾರಿಯಾಗಿದ್ದಾಳೆ. ಹೀಗಾಗಿ ಅತೀಕ್ನ ನಿಜವಾದ ಆಸ್ತಿ ಎಂದಾದರೂ ಪೂರ್ಣ ಪ್ರಮಾಣದಲ್ಲಿ ಬಯಲಾಗುವುದೇ ಎಂಬ ಅನುಮಾನವನ್ನು ಅಧಿಕಾರಿಗಳು ವ್ಯಕ್ತಪಡಿಸಿದ್ದಾರೆ.

ಪೊಲೀಸರ ಅಮಾನತು
ಮಾಫಿಯಾ ಡಾನ್ ಅತೀಕ್ ಅಹ್ಮದ್ ಹಾಗೂ ಆತನ ಸಹೋದರ ಅಶ್ರಫ್ ಹತ್ಯೆ ಸಮಯದಲ್ಲಿದ್ದ 5 ಪೊಲೀಸ್ ಅಧಿಕಾರಿಗಳನ್ನು ಸರ್ಕಾರ ಅಮಾನತುಗೊಳಿಸಿದೆ. ಅತೀಕ್ ಅಹ್ಮದ್ ಹಾಗೂ ಆತನ ಸೋದರ ಅಶ್ರಫ್ ತನಿಖೆಗೆಂದು ರಚಿಸಿರುವ ಎಸ್ಐಟಿ, ಈ ಅಧಿಕಾರಿಗಳು ತಮ್ಮ ಕೆಲಸದ ವೇಳೆಯಲ್ಲಿ ನಿರ್ಲಕ್ಷ ತೋರಿದ್ದಾರೆ ಎಂದು ವರದಿ ನೀಡಿದೆ. ಈ ಕಾರಣವಾಗಿ ಅಲ್ಲಿದ್ದ ಐವರು ಶಾಹಗಂಜ್ ಪೊಲೀಸ್ ಠಾಣೆಯ ಅಶ್ವನಿ ಕುಮಾರ್ ಸಿಂಗ್ ಸೇರಿ ಐವರು ಪೊಲೀಸರನ್ನು ಕೆಲಸದಿಂದ ಅಮಾನತುಗೊಳಿಸಲಾಗಿದೆ ಎಂದು ಹಿರಿಯ ಅಧಿಕಾರಿಗಳು ತಿಳಿಸಿದರು.

