

ಬೆಂಗಳೂರು: ಮೇ 10ರಂದು ಕರ್ನಾಟಕ ವಿಧಾನಸಭಾ ಚುನಾವಣೆಯನ್ನು (Election) ಘೋಷಿಸಿದ್ದು, ಅನಿವಾಸಿ ಕನ್ನಡಿಗರು (Non Resident Kannadigas) ತಾವಿರುವ ಸ್ಥಳದಲ್ಲಿಯೇ ಮತದಾನ (Voting) ಮಾಡಲು ಅವಕಾಶ ಕಲ್ಪಿಸಿ ಕೊಡುವಂತೆ ಮುಖ್ಯ ಚುನಾವಣಾ ಅಧಿಕಾರಿಗಳಿಗೆ (Chief Electoral Officer) ಮನವಿ ಮಾಡಿದ್ದಾರೆ.
ಕರ್ನಾಟಕದ (Karnataka) ಅನೇಕ ಕನ್ನಡಿಗರು ಕೆಲಸದ ಸಲುವಾಗಿ ದೇಶ- ವಿದೇಶಗಳಲ್ಲಿ ವಾಸಿಸುತ್ತಿದ್ದಾರೆ. ಮೇ 10ರಂದು ಕರ್ನಾಟಕ ವಿಧಾನಸಭಾ ಚುನಾವಣೆ ನಡೆಯುತ್ತಿದ್ದು, ಅನಿವಾಸಿ ಕನ್ನಡಿಗರಿಗೆ ಬರಲು ಅಸಾಧ್ಯ. ಆದ್ದರಿಂದ ಅಂಚೆ ಮತದಾನ (Postal Voting) ಅಥವಾ ಭಾರತೀಯ ರಾಯಭಾರಿ ಕಚೇರಿಯಲ್ಲಿ (Indian Embassy) ಮತಗಟ್ಟೆ (Polling Booth) ತೆರೆಯುವ ಮೂಲಕ ಮತದಾನ ಮಾಡಲು ಅವಕಾಶ ಮಾಡಿಕೊಡಬೇಕೆಂದು ಸಾಗರೋತ್ತರ ಕನ್ನಡಿಗರು ಮುಖ್ಯ ಚುನಾವಣಾ ಅಧಿಕಾರಿಗಳಿಗೆ ಮನವಿ ಮಾಡಿದ್ದಾರೆ.


ಅಲ್ಲದೇ ಚುನಾವಣಾ ಆಯೋಗವು ಧ್ವಜಾಧಾರಿ ಮತ್ತು ಪ್ರಜಾಸತ್ತಾತ್ಮಕ ಸುಧಾರಣೆಗಳ ಜವಾಬ್ದಾರಿಯುತ ಸಂಸ್ಥೆಯಾಗಿದೆ. ಪ್ರಜಾಸತ್ತಾತ್ಮಕ ಪ್ರಗತಿಯನ್ನು ಬಲಪಡಿಸುವ ನಿಮ್ಮ ಕೆಲಸವನ್ನು ಶ್ಲಾಘಿಸುತ್ತೇವೆ ಎಂದು ಮನವಿ ಪತ್ರದ ಮೂಲಕ ಶುಭಹಾರೈಸಿದ್ದಾರೆ.
ಸುಮಾರು 60 ಲಕ್ಷ ಭಾರತೀಯರು ವಿದೇಶದಲ್ಲಿ ವಾಸಿಸುತ್ತಿದ್ದು, ಇವರ ಮತದಾನದಿಂದ ಪ್ರಜಾಪ್ರಭುತ್ವದಲ್ಲಿ (Democracy) ಮಹತ್ವದ ಬದಲಾವಣೆ ತರಬಹುದು. ಅಲ್ಲದೇ 5 ಲಕ್ಷ ಅನಿವಾಸಿ ಕನ್ನಡಿಗರು ಮತದಾನ ಮಾಡಲು ಅರ್ಹರಾಗಿದ್ದಾರೆ. ಈ ಕುರಿತು ನಮ್ಮ ಮನವಿಯನ್ನು ಗಂಭೀರವಾಗಿ ಪರಿಗಣಿಸಿ ಮತದಾನ ನಡೆಸಲು ಅವಕಾಶ ಮಾಡಿಕೊಡಬೇಕು ಎಂದು ಮನವಿ ಪತ್ರದಲ್ಲಿ ತಿಳಿಸಿದ್ದಾರೆ.
