

ಕ್ರೈಸ್ತ ಧರ್ಮಕ್ಕೆ ಮತಾಂತರವಾದ ಪರಿಶಿಷ್ಟಜಾತಿ ಸಮುದಾಯದ ಎಲ್ಲಾ ಜನರಿಗೆ ಹಿಂದಿನಂತೆ ಎಲ್ಲಾ ಸವಲತ್ತುಗಳನ್ನು ಮುಂದುವರೆಸಬೇಕೆಂದು ಕೇಂದ್ರ ಸರ್ಕಾರವನ್ನು ಒತ್ತಾಯಿಸುವ ಗೊತ್ತುವಳಿಯನ್ನು ತಮಿಳುನಾಡು ವಿಧಾನಸಭೆ ಬುಧವಾರ ಅಂಗೀಕರಿಸಿದೆ.
ಚೆನ್ನೈ: ಕ್ರೈಸ್ತ ಧರ್ಮಕ್ಕೆ ಮತಾಂತರವಾದ ಪರಿಶಿಷ್ಟಜಾತಿ ಸಮುದಾಯದ ಎಲ್ಲಾ ಜನರಿಗೆ ಹಿಂದಿನಂತೆ ಎಲ್ಲಾ ಸವಲತ್ತುಗಳನ್ನು ಮುಂದುವರೆಸಬೇಕೆಂದು ಕೇಂದ್ರ ಸರ್ಕಾರವನ್ನು ಒತ್ತಾಯಿಸುವ ಗೊತ್ತುವಳಿಯನ್ನು ತಮಿಳುನಾಡು ವಿಧಾನಸಭೆ ಬುಧವಾರ ಅಂಗೀಕರಿಸಿದೆ. ಮತಾಂತರಗೊಂಡ ಪರಿಶಿಷ್ಟರಿಗೂ ಶಿಕ್ಷಣ, ಉದ್ಯೋಗದಲ್ಲಿ ಮೀಸಲು ಕಲ್ಪಿಸಿದರೆ ಅದರಿಂದ ಮತಾಂತರಗೊಂಡ ದಲಿತರ ಅಭಿವೃದ್ಧಿಗೂ ಉಪಯೋಗವಾಗಲಿದೆ ಎಂದು ಮುಖ್ಯಮಂತ್ರಿ ಸ್ಟಾಲಿನ್ ಹೇಳಿದರು. ಜನರಿಗೆ ಅವರಿಗೆ ಬೇಕಾದ ಧರ್ಮವನ್ನು ಆಚರಿಸುವ ಹಕ್ಕು ಇದೆ. ಆದರೆ ಅವರನ್ನು ಜಾತಿ ಆಧಾರದಲ್ಲಿ ಬೇರ್ಪಡಿಸುವುದು ಮಾತ್ರ ಅಪರಾಧ. ಹೀಗಾಗಿ ನಾವು ಕೇಂದ್ರ ಸರ್ಕಾರಕ್ಕೆ ಕ್ರೈಸ್ತ ಧರ್ಮಕ್ಕೆ ಮತಾಂತರಗೊಂಡ ನಂತರವು ಪರಿಶಿಷ್ಟರಿಗೆ ತಮ್ಮ ಎಸ್‌ಸಿ ಸೌಲಭ್ಯ ಒದಗಿಸುವಂತೆ ನಾವು ಮನವಿ ಮಾಡುತ್ತೇವೆ ಎಂದು ಸ್ಟಾಲಿನ್ ಹೇಳಿದರು. ಈ ವೇಳೆ ಬಿಜೆಪಿ ಸಭಾತ್ಯಾಗ ಮಾಡಿತು.

