

ಕಳೆದ ಭಾನುವಾರದಂದು ಮಂಗಳೂರು ಪುರಭವನದ ಬಳಿ ಬೀದಿ ಬದಿ ವ್ಯಾಪಾರದಲ್ಲಿ ತೊಡಗಿಸಿಕೊಂಡವರ ಮೇಲೆ ಕೊಳಕು ನೀರನ್ನು ಚೆಲ್ಲಿ ಅವರನ್ನು ಅಲ್ಲಿಂದ ಎಬ್ಬಿಸಲು ಮುಂದಾಗಿರುವ ಅಧಿಕಾರಿಗಳ ಕ್ರಮವನ್ನು ಮಂಗಳೂರು ದಕ್ಷಿಣ ವಿಧಾನ ಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಜೆ ಆರ್ ಲೋಬೋ ಖಂಡಿಸಿದ್ದಾರೆ.
ಮಂಗಳೂರಿನಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಲೋಬೋ, ಬೀದಿ ವ್ಯಾಪಾರ ಮಾಡಲು ಬಂದು ಹೊಟ್ಟೆಪಾಡಿಗಾಗಿ ಕೆಲಸ ಮಾಡುತ್ತಿದ್ದವರನ್ನು ಎಬ್ಬಿಸುವ ಈ ಅಮಾನವೀಯ ರೀತಿ ಸರಿಯೇ..? ಎಂದು ಪ್ರಶ್ನಿಸಿದ ಅವರು ಅವರನ್ನು ಎಬ್ಬಿಸುವ ಸಂದರ್ಭದಲ್ಲಿ ಮಾನವೀಯತೆ ಇಲ್ಲದೆ ವರ್ತಿಸಿರುವುದು ಖಂಡನೀಯ ಎಂದರು


