

ಮೊನ್ನೆಯಷ್ಟೇ ಮೋಸ್ಟ್ ವಾಂಟೆಡ್ ಅತೀಕ್ ಅಹಮ್ಮದ್ ಪುತ್ರನ ಹತ್ಯೆ ಮಾಡಿದ್ದ ಯುಪಿ ಪೊಲೀಸ್, ಇದೀಗ ಪೋಲಿಸ್ ಕಸ್ಟಡಿಯಲ್ಲಿದ್ದ ಅತೀಕ್ ಅಹಮ್ಮದ್ ಹಾಗೂ ಆತನ ಸಹೋದರನನ್ನೇ ಹತ್ಯೆ ಮಾಡಿದೆ.
ಲಖನೌ(ಏ.15): ಉತ್ತರ ಪ್ರದೇಶದಲ್ಲಿ ಮಹತ್ವದ ಬೆಳವಣಿಗೆಯಾಗಿದೆ. ಗ್ಯಾಂಗ್ಸ್ಟರ್, ಮಾಫಿಯಾ ಮ್ಯಾನ್ ಅತೀಕ್ ಅಹಮ್ಮದ್ ಹಾಗೂ ಆತನ ಸಹೋದರನನ್ನು ಯುಪಿ ಪೊಲೀಸರು ಹತ್ಯೆ ಮಾಡಿದ್ದಾರೆ. ವೈದ್ಯಕೀಯ ಪರೀಕ್ಷೆಗಾಗಿ ಪ್ರಯಾಗ್ರಾಜ್ಗೆ ಕರೆದುಕೊಂಡು ಹೋಗಲಾಗಿತ್ತು. ಈ ವೇಳೆ ನಡೆದ ದಾಳಿಯಲ್ಲಿ ಅತೀಕ್ ಅಹಮ್ಮದ್ ಹಾಗೂ ಆತನ ಸಹೋದರ ಅಶ್ರಫ್ ಅಹಮ್ಮದ್ ಹತ್ಯೆಯಾಗಿದ್ದಾರೆ.


ಇಬ್ಬರನ್ನು ಇಂದು ಪ್ರಯಾಗ್ರಾಜ್ ಆಸ್ಪತ್ರೆಗೆ ಮೆಡಿಕಲ್ ಚೆಕಪ್ಗೆಂದು ಕರೆದುಕೊಂಡು ಹೋಗಲಾಗುತ್ತಿತ್ತು. ಈ ಸಂದರ್ಭದಲ್ಲಿ ಮಾಧ್ಯಮಗಳ ಜೊತೆ ಮಾತನಾಡಲು ಮುಂದಾಗುತ್ತಿದ್ದಾಗ ಬಂದ ಇಬ್ಬರು ಅನಾಮಿಕ ವ್ಯಕ್ತಿಗಳು ಪಿಸ್ತೂಲ್ನಿಂದ ಶೂಟ್ ಮಾಡಿ ಹತ್ಯೆ ಮಾಡಿದ್ದಾರೆ.
ಈ ಹಿಂದೆ ಗುಜರಾತಿನ ಸಬರಮತಿ (Sabarmati) ಜೈಲಿನಿಂದ ಉತ್ತರ ಪ್ರದೇಶದ ಪ್ರಯಾಗ್ರಾಜ್ಗೆ (Prayagraj) ಕರೆದೊಯ್ಯುವ ವೇಳೆ ಪತ್ರಕರ್ತರು ಜೀವ ಭಯವಿದೆಯೇ ಎಂದು ಕೇಳಿದ್ದರು. ಈ ಪ್ರಶ್ನೆಗೆ ಅತಿಕ್ ನ್ಯಾಯಾಲಯಕ್ಕೆ ಕರೆದೊಯ್ಯುವುದು ಪೊಲೀಸರು ನನ್ನನ್ನು ಕೊಲ್ಲಲು ಇರುವ ನೆಪವಾಗಿದೆ ಎಂದಿದ್ದ.