

ಬಂಟ್ವಾಳ : ಅರಳ ಸುಂಟಿಹಿತ್ಲು ನಿವಾಸಿ, ಆಯುರ್ವೇದ ಔಷಧಿ ನೀಡುತ್ತಿದ್ದ ಅರಳ ವೈದ್ಯರ್ ಎಂದು ಹೆಸರು ಪಡೆದಿರುವ ಮೆಹಮೂದ್ ವೈದ್ಯ ರ್(72) ಅಲ್ಪ ಕಾಲದ ಅನಾರೋಗ್ಯ ದಿಂದ ನಿಧನ ರಾಗಿದ್ದಾರೆ.
ಹಲವಾರು ವರ್ಷಗಳ ಕಾಲ ಕಾವಲಕಟ್ಟೆ ಡಾ.ಹಝ್ರತ್ ಅವರ ಬಳಿ ಆಯುರ್ವೇದಿಕ್ ಔಷಧಿ ನೀಡುತ್ತಿದ್ದ ಇವರು, ಕೆಲವು ಮನೆಮದ್ದು ಹಾಗೂ ಧಾರ್ಮಿಕ ಪುಸ್ತಕಗಳನ್ನು ಬರೆದಿದ್ದಾರೆ.
ಇವರು ಹೆಂಡತಿ, 4 ಹೆಣ್ಣು ಮಕ್ಕಳು ಹಾಗೂ3 ಗಂಡು ಮಕ್ಕಳು ಅಪಾರ ಬಂಧು ಮಿತ್ರ ರನ್ನು ಅಗಲಿದ್ದಾರೆ.
ವರದಿ :ಹಂಝ ಬಂಟ್ವಾಳ

