

ಮದುವೆ ಬಳಿಕ ಆಕಾಶ್ ವಿರುದ್ಧ ವರದಕ್ಷಿಣೆ ಕಿರುಕುಳ, ಹಲ್ಲೆ ಆರೋಪ ಕೇಳಿ ಬಂದಿದ್ದು ಆಕಾಶ್, ತಂದೆ, ತಾಯಿ, ಸಹೋದರನ ವಿರುದ್ಧ ವಂದನಾ ದೂರು ನೀಡಿದ್ದಾರೆ
ಬೆಂಗಳೂರು: ಐಎಎಸ್ ಅಧಿಕಾರಿ ಆಕಾಶ್ ವಿರುದ್ಧ ವರದಕ್ಷಿಣೆ ಕಿರುಕುಳ ಆರೋಪ ಕೇಳಿ ಬಂದಿದೆ. ಕೊಡಗು ಜಿ.ಪಂ. ಸಿಇಒ ಡಾ.ಆಕಾಶ್ ವಿರುದ್ಧ ಪತ್ನಿ ವಂದನಾ ಬೆಂಗಳೂರು ಪೂರ್ವ ವಿಭಾಗದ ಮಹಿಳಾ ಠಾಣೆಯಲ್ಲಿ ದೂರು ನೀಡಿದ್ದಾರೆ. ಆಕಾಶ್ ಪತ್ನಿ ವಂದನಾ ದೂರಿನ ಮೇರೆಗೆ ಎಫ್ಐಆರ್ ದಾಖಲಾಗಿದೆ. 2022ರಲ್ಲಿ ನಿವೃತ್ತ ಡಿಐಜಿ ಪುತ್ರಿ ವಂದನಾ ಹಾಗೂ ಆಕಾಶ್ ಮದುವೆ ಮಾಡಿಕೊಂಡರು. ಮದುವೆ ಬಳಿಕ ಆಕಾಶ್ ವಿರುದ್ಧ ವರದಕ್ಷಿಣೆ ಕಿರುಕುಳ, ಹಲ್ಲೆ ಆರೋಪ ಕೇಳಿ ಬಂದಿದ್ದು ಆಕಾಶ್, ತಂದೆ, ತಾಯಿ, ಸಹೋದರನ ವಿರುದ್ಧ ವಂದನಾ ದೂರು ನೀಡಿದ್ದಾರೆ.

ಮದುವೆ ವೇಳೆ ಕೋಟ್ಯಾಂತರ ರೂಪಾಯಿ ಮೌಲ್ಯದ ಆಭರಣಗಳನ್ನು ಉಡುಗೊರೆಯಾಗಿ ನೀಡಿದ್ದರೂ ಸಹ ಬೆಂಗಳೂರಿನಲ್ಲಿ ಮನೆ ಕೊಡಿಸಬೇಕು ಎಂಬುದು ಸೇರಿದಂತೆ ಹಲವು ಬೇಡಿಕೆಗಳನ್ನು ಇಟ್ಟು ನನಗೆ ವರದಕ್ಷಿಣೆ ಕಿರುಕುಳ ನೀಡಿದ್ದಾರೆ ಎಂದು ವಂದನಾ ಆರೋಪಿಸಿದ್ದಾರೆ.

