

ಬಂಟ್ವಾಳ :ನಿನ್ನೆ ಮಧ್ಯಾಹ್ನದಿಂದ ನಾಪತ್ತೆ ಯಾಗಿದ್ದ ಬಾಲಕ ನ ಮೃತ ದೇಹ ತಡ ರಾತ್ರಿ ಕಳ್ಳಿಗೆ ಗ್ರಾಮ ದ ಕುಪ್ಪಿಳ ಬಳಿ ಕೆರೆಯೊಂದರಲ್ಲಿ ಪತ್ತೆ ಯಾಗಿದೆ.
ಬಿ. ಸಿ. ರೋಡು ಮಿತ್ತ ಬೈಲ್ ನಿವಾಸಿ ಅಬ್ದುಲ್ ರಝಕ್ ರವರ ಮಗ ಅಝೀಮ್ (13) ನಿನ್ನೆ ಮಧ್ಯಾಹ್ನ ದಿಂದ ನಾಪತ್ತೆ ಯಾಗಿದ್ದು, ಆತನ ಮೊಬೈಲ್ ಗೆ
ಕರೆಮಾಡಿದರೂ ಸ್ವೀಕರಿಸದ ಕಾರಣ ಮನೆಯವರು ಬಂಟ್ವಾಳ ನಗರ ಠಾಣೆಗೆ ದೂರು ನೀಡಿದ್ದರು , ನಂತರ ಮೊಬೈಲ್ ಲೊಕೇಶನ್ ಆದರದಲ್ಲಿ ಕಳ್ಳಿಗೆ ಗ್ರಾಮ ದಲ್ಲಿ ಹುಡುಕಾಟ ನಡೆಸಿದಾಗ ಸಮೀಪ ದ ಕೆರೆಯ ಬಳಿ ಬಾಲಕನ ಬಟ್ಟೆ, ಮೊಬೈಲ್ ಕಂಡುಬಂದಿತ್ತು . ಕೆರೆಯಲ್ಲಿ ಹುಡುಕಿದಾಗ ತಡ ರಾತ್ರಿ ವೇಳೆ ಬಾಲಕನ ಮೃತ ದೇಹ ಪತ್ತೆಯಾಗಿದೆ , ಮೃತ ದೇಹ ವನ್ನು ಬಂಟ್ವಾಳ
ಸರಕಾರಿ ಆಸ್ಪತ್ರೆ ಯ ಶವಾಗಾರಕ್ಕೆ ಸಾಗಿಸಲಾಗಿದ್ದು . ಪ್ರಕರಣ ದಾಖಲಿಸಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ವರದಿ :ಹಂಝ ಬಂಟ್ವಾಳ



