

ಉತ್ತರ ಪ್ರದೇಶದ ವಾರಣಾಸಿಯಲ್ಲಿರುವ ಜ್ಞಾನವಾಪಿ ಮಸೀದಿಗೆ ಸಂಬಂಧಿಸಿದ ಪ್ರಕರಣವನ್ನು ಏಪ್ರಿಲ್ 14 ರಂದು ವಿಚಾರಣೆ ನಡೆಸುವುದಾಗಿ ಸುಪ್ರೀಂ ಕೋರ್ಟ್ ಗುರುವಾರ ಹೇಳಿದೆ.
ದೆಹಲಿ: ಉತ್ತರ ಪ್ರದೇಶ (Uttar Pradesh) ವಾರಣಾಸಿಯಲ್ಲಿರುವ ಜ್ಞಾನವಾಪಿ ಮಸೀದಿಗೆ (Gyanvapi Mosque) ಸಂಬಂಧಿಸಿದ ಪ್ರಕರಣವನ್ನು ಏಪ್ರಿಲ್ 14 ರಂದು ವಿಚಾರಣೆ ನಡೆಸುವುದಾಗಿ ಸುಪ್ರೀಂ ಕೋರ್ಟ್ ಗುರುವಾರ ಹೇಳಿದೆ. ಮಸೀದಿ ಆವರಣದೊಳಗೆ ಶುಚಿಗೊಳಿಸುವ ಕೆಲಸಕ್ಕೆ ಅನುಮತಿ ನೀಡುವಂತೆ ಕೋರಿದ ಮನವಿಗೆ ಸಂಬಂಧಿಸಿದಂತೆ ತನ್ನ ಮುಂದೆ ಅರ್ಜಿಯನ್ನು ಸಲ್ಲಿಸಲು ಸುಪ್ರೀಂ ಕೋರ್ಟ್ ಮುಸ್ಲಿಂ ಪಕ್ಷಕ್ಕೆ ಅನುಮತಿ ನೀಡಿದೆ ಎಂದು ಸುದ್ದಿ ಸಂಸ್ಥೆ ANI ವರದಿ ಮಾಡಿದೆ. ಹಿಂದೂ ಸಂಘಟನೆಗಳ ಕಡೆಯಿಂದ ‘ಶಿವಲಿಂಗ’ ಎಂದು ಹೇಳಲಾದ ವಸ್ತುವು ‘ವಜೂಖಾನಾ’ ಜಲಾಶಯದ ನೀರಿನ ಕಾರಂಜಿ ಕಾರ್ಯವಿಧಾನದ ಭಾಗವಾಗಿದೆ ಎಂದು ಮುಸ್ಲಿಂ ಸಂಘಟನೆಗಳು ಸಮರ್ಥಿಸಿಕೊಂಡಿದ್ದಾರೆ. ಅಲ್ಲಿ ಮುಸ್ಲಿಂ ಸಮುದಾಯದ ಜನರು ನಮಾಜ್ ಸಲ್ಲಿಸುವ ಮೊದಲು ಅಂಗಸ್ನಾನ ಮಾಡುತ್ತಾರೆ. ನವೆಂಬರ್ 2022ರಲ್ಲಿ, ವಾರಣಾಸಿಯ ಜ್ಞಾನವಾಪಿ ಮಸೀದಿ ಸಂಕೀರ್ಣದಲ್ಲಿ ಪತ್ತೆಯಾದ ‘ಶಿವಲಿಂಗ’ಎಂದು ಹೇಳುತ್ತಿರುವ ಮುಸ್ಲಿಮರ ಅಂಗ ಸ್ನಾನ ಮಾಡುವ ಸ್ಥಳ ರಕ್ಷಣೆಗಾಗಿ ಕೋರ್ಟ್ ತನ್ನ ಹಿಂದಿನ ಆದೇಶವನ್ನು ವಿಸ್ತರಿಸಿತು. ‘ಈ ’ ಪ್ರದೇಶಕ್ಕೆ ರಕ್ಷಣೆ ನೀಡುವ ಸುಪ್ರೀಂ ಕೋರ್ಟ್‌ನ ಮೇ 17ರ ಆದೇಶವು ನವೆಂಬರ್ 12 ರಂದು ಮುಕ್ತಾಯಗೊಳ್ಳುತ್ತಿದೆ ಮತ್ತು ಅದನ್ನು ಮತ್ತೆ ವಿಸ್ತರಿಸುವ ಅಗತ್ಯವಿದೆ ಎಂದು ಹಿಂದೂ ಸಂಘಟನೆಗಳು ಅರ್ಜಿ ಸಲ್ಲಿದ ನಂತರ ಸುಪ್ರೀಂನಿಂದ ಈ ಆದೇಶ ಬಂದಿದೆ.

ಮುಂದಿನ ಆದೇಶಗಳು ಬಾಕಿ ಉಳಿದಿವೆ, ಮೇ 17ರ ಮಧ್ಯಂತರ ಆದೇಶ ಮುಂದುವರಿಯುತ್ತದೆ ಎಂದು ನಾವು ನಿರ್ದೇಶಿಸಲಾಗಿದೆ ಎಂದು ಭಾರತದ ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ಮತ್ತು ನ್ಯಾಯಮೂರ್ತಿಗಳಾದ ಸೂರ್ಯಕಾಂತ್ ಮತ್ತು ಪಿ ಎಸ್ ನರಸಿಂಹ ಅವರ ಪೀಠ ಹೇಳಿದೆ. ಸರ್ವೆ ಕಮಿಷನರ್ ನೇಮಕದ ಬಗ್ಗೆ ಅಲಹಾಬಾದ್ ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿ ಅಂಜುಮನ್ ಇಂತೇಜಾಮಿಯಾ ಮಸೀದಿಯ ಆಡಳಿತ ಸಮಿತಿಯು ಸಲ್ಲಿಸಿದ ಮೇಲ್ಮನವಿಯ ಬಗ್ಗೆ ಮೂರು ವಾರಗಳಲ್ಲಿ ತಮ್ಮ ಉತ್ತರಗಳನ್ನು ಸಲ್ಲಿಸುವಂತೆ ಪೀಠವು ಹಿಂದೂ ಪಕ್ಷಗಳಿಗೆ ಸೂಚಿಸಿದೆ ಎಂದು ಸುದ್ದಿ ಸಂಸ್ಥೆ ಪಿಟಿಐ ವರದಿ ಮಾಡಿದೆ.

ಕಳೆದ ವರ್ಷ ಮೇ 17ರಂದು, ವಾರಣಾಸಿ ಜಿಲ್ಲಾ ಮ್ಯಾಜಿಸ್ಟ್ರೇಟ್‌ಗೆ ಸುಪ್ರಿಂ ಕೋರ್ಟ್ ಮಧ್ಯಂತರ ಆದೇಶ ನೀಡಿದ್ದು, ಜ್ಞಾನವಾಪಿ-ಶೃಂಗಾರ್ ಗೌರಿ ಸಂಕೀರ್ಣದೊಳಗೆ ‘ಶಿವಲಿಂಗ’ ವೀಡಿಯೋಗ್ರಾಫಿಕ್ ಸಮೀಕ್ಷೆಯಲ್ಲಿ ಕಂಡುಬಂದಿದೆ ಎಂದು ಹೇಳಲಾದ ಪ್ರದೇಶದ ರಕ್ಷಣೆಯನ್ನು ಖಚಿತಪಡಿಸಿಕೊಳ್ಳುವಂತೆ ನಿರ್ದೇಶಿಸಿತ್ತು. ಜ್ಞಾನವಾಪಿ ಮಸೀದಿಯಲ್ಲಿ ಮುಸ್ಲಿಮರು ನಮಾಜ್ ಮಾಡಲು ಸುಪ್ರೀಂ ಕೋರ್ಟ್ ಅನುಮತಿ ನೀಡಿದೆ. ಏಪ್ರಿಲ್ 26, 2022 ರಂದು, ಕೆಳ ನ್ಯಾಯಾಲಯವು ಮಸೀದಿಯ ಹೊರ ಗೋಡೆಗಳ ಮೇಲೆ ಪ್ರತಿದಿನ ಹಿಂದೂ ದೇವತೆಗಳ ವಿಗ್ರಹಗಳನ್ನು ಪೂಜಿಸಲು ಅನುಮತಿ ಕೋರಿ ಐದು ಮಹಿಳೆಯರ ಮನವಿಯನ್ನು ಆಲಿಸಿ, ಜ್ಞಾನವಾಪಿ ಸಂಕೀರ್ಣದ ವೀಡಿಯೊಗ್ರಾಫಿಕ್ ಸಮೀಕ್ಷೆಗೆ ಆದೇಶಿಸಿತು. ಈ ಕಾರ್ಯಚರಣೆ ವೇಳೆ ಶಿವಲಿಂಗ ಪತ್ತೆಯಾಗಿದೆ ಎಂದು ಹಿಂದೂ ಪಕ್ಷ ಹೇಳಿಕೊಂಡಿತ್ತು.

2022ರ ಮೇ 20 ರಂದು ಸಿವಿಲ್ ನ್ಯಾಯಾಧೀಶರಿಂದ (ಹಿರಿಯ ವಿಭಾಗ) ಜಿಲ್ಲಾ ನ್ಯಾಯಾಧೀಶರಿಗೆ ಸುಪ್ರೀಂ ಕೋರ್ಟ್ ಪ್ರಕರಣವನ್ನು ವರ್ಗಾಯಿಸಿತು, ಸಮಸ್ಯೆಯ ಸಂಕೀರ್ಣತೆ ಮತ್ತು ಸೂಕ್ಷ್ಮತೆಯನ್ನು ನೋಡಿ, ಈ ಪ್ರಕರಣಕ್ಕೆ ಸಂಬಂಧಿಸಿ ಹಿರಿಯ ನ್ಯಾಯಾಂಗ ಅಧಿಕಾರಿಗಳು ಬೇಕು ಎಂದು ಹೇಳಿದೆ. 25-30 ವರ್ಷಗಳ ಅನುಭವ ಇರುವವರು ಈ ಪ್ರಕರಣ ನಿಭಾಯಿಸಬೇಕಾಗಿದೆ ಎಂದು ಹೇಳಿದ್ದಾರೆ