

ಬಂಟ್ವಾಳ : ಇನ್ನೇನು ಕೆಲವೇ ದಿನಗಳಲ್ಲಿ ವಿಧಾನ ಸಭೆ ಚುನಾವಣೆ ಬರುತ್ತಿದೆ.5 ವರ್ಷ ಮೊದಲು ನಾವು ನೋಡಿದ್ದ ಕೆಲ ರಾಜಕೀಯ ವ್ಯಕ್ತಿ ಗಳು ಈಗ ಕಾಣಸಿಗುತ್ತಿದ್ದಾರೆ.
ಇದು ಸರ್ವೇಸಾಮಾನ್ಯ ಬಿಡಿ. ಆದರೆ ಚುನಾವಣೆಗೆ ನಿಂತು, ಮತದಾರರ ಕೈ ಕಾಲು ಹಿಡಿದು, ಹಲವು ಭರವಸೆ ಯನ್ನು ನೀಡಿ ಗೆದ್ದ ನಂತರ ಅವರ ವರ್ತನೆ, ಬದಲಾವಣೆ ಆಗಿ ಕಣ್ಣಿಗೆ ಕಾಣದೆ ಮಾಯವಾಗುತ್ತಾರೆ. ಮತ್ತೆ ನೋಡಬೇಕೆಂದರೆ ಚುನಾವಣೆ ಬರಬೇಕು. ಅದೇ ಹಾಡು ಅದೇ ರಾಗ, ಮೊದಲಿನ ವಿಷಯ ವನ್ನು ಜನ ಮರೆತಿರುತ್ತಾರೆ..
ಆದರೆ ಈಗ ಮತದಾರ ಬುದ್ದಿವಂತ ನಾಗಿದ್ದಾನೆ. ಅಭಿವೃದ್ಧಿ ಕೆಲಸ ಮಾಡಿದ ವ್ಯಕ್ತಿ ಯನ್ನು ಮಾತ್ರ ಆಯ್ಕೆ ಮಾಡಿ ತಕ್ಕ ಉತ್ತರ ನೀಡುತ್ತಿದ್ದಾನೆ


ಆದರೆ ಕೆಲವು ರಾಜಕಾರಣಿ ಗಳು ಪ್ರಾಮಾಣಿಕವಾಗಿ ಕೆಲಸ ಮಾಡುತ್ತಾರೆ.
ಅದರಲ್ಲಿ ಜನ ಕಂಡ ಒಬ್ಬ ನಾಯಕ ಇದ್ದರೆ ಅದು ಶ್ರೀ ಬಿ ರಮಾನಾಥ್ಯ ರೈ . ಅಧಿಕಾರ ದಲ್ಲಿ ಇದ್ದಾಗ ಬಂಟ್ವಾಳ ವಿಧಾನ ಸಭಾ ವ್ಯಾಪ್ತಿಯಲ್ಲಿ ಹಲವು ಅಭಿವೃದ್ಧಿ ಕಾರ್ಯ ಮಾಡಿದರೂ,ಕಳೆದ ಚುನಾವಣೆ ಯಲ್ಲಿ ಜನರ ನಿರ್ಧಾರ ಕ್ಕೆ ತಲೆ ಬಾಗಿ ಸೋಲು ಒಪ್ಪಿದ್ದರು.
ಅದು ಚುನಾವಣೆ ಯಲ್ಲಿ ಮಾತ್ರ. ಆದರೆ ಬಂಟ್ವಾಳ ವಿಧಾನ ಸಭಾ ಕ್ಷೇತ್ರ ದಲ್ಲಿ ಅವರ ಜನ ಸೇವೆ, ಕಾರ್ಯ ಪ್ರವೃತ್ತಿ, ಅಭಿವೃದ್ಧಿ ಕಾರ್ಯ ನಡೆಯುತ್ತಾನೆ ಇತ್ತು.ಅಧಿಕಾರ ಇರಲಿ ಬಿಡಲಿ ಸಾಮಾನ್ಯ ಜನರಿಗೆ ನ್ಯಾಯ ದೊರಕಿಸಿ ಕೊಡುವಲ್ಲಿ ಹಾಗೂ ಸರಕಾರದ ಸೌಲಭ್ಯ ಗಳನ್ನು ಸಮಾಜದ ಕಟ್ಟಕಡೆಯ ವ್ಯಕ್ತಿಗೂ ತಲುಪಿಸುವಲ್ಲಿ ರಮಾನಾಥ ರೈ ಯವರು ಎತ್ತಿದ ಕೈ.

ತಾವು ಶಾಸಕರಾಗಿದ್ದ ಅವಧಿಯಲ್ಲಿ ರೈ ಅವರು ಯಾವುದೇ ವಿವಾದಗಳಿಗೆ ಕಾರಣರಾಗದೇ ತಮ್ಮ ಕ್ಷೇತ್ರವನ್ನು ಪ್ರತಿನಿಧಿಸಿಕೊಂಡು ಬಂದಿದ್ದಾರೆ. ಬಂಟ್ವಾಳ ದಲ್ಲಿ ಮುಂಚೂಣಿಯಲ್ಲಿ ಮುನ್ನಡೆಯುತ್ತಿದ್ದಾರೆ. ತಮ್ಮ ಕ್ಷೇತ್ರ ವ್ಯಾಪ್ತಿಯಲ್ಲಿ ಹಲವು ಪರಿವರ್ತನೆಗೆ ಕಾರಣರಾಗಿದ್ದಾರೆ. ರೈ ಅವರು ಬಂಟ್ವಾಳ ಜನರಲ್ಲಿ ವಿಶ್ವಾಸ ಗಳಿಸಿದ್ದು, . ಕಾಂಗ್ರೆಸ್ ಅಧಿಕಾರಾವಧಿಯಲ್ಲಿ ರೈ ಅವರು ಸಚಿವರಾಗಿ ಸೇವೆ ಸಲ್ಲಿಸಿದ್ದರು. ಯಾವುದೇ ರೀತಿಯ ಪರಿಸ್ಥಿತಿಯನ್ನು ಶಾಂತ ಮತ್ತು ಸಂಯಮದಲ್ಲಿ ನಿಭಾಯಿಸುವಲ್ಲಿ ಯಶಸ್ವಿಯಾಗಿದ್ದಾರೆ.


ರಮಾನಾಥ ರೈ ಇನ್ನೂ ದಣಿವರಿಯದ ನಾಯಕ ಎಂದು ಹೇಳಬಹುದು.
ಇವರ ಅಭಿವೃದ್ಧಿ ಕಾರ್ಯಗಳಲ್ಲಿ ಬಿ.ಸಿ.ರೋಡ್ ಹೃದಯ ಭಾಗದಲ್ಲಿ ಎಲ್ಲಾ ಸರಕಾರಿ ಕಚೇರಿ ಯನ್ನು ಒಂದೇ ಕಡೆ ಇರುವಂತೆ ಮಾಡಿದ ಮಿನಿ ವಿಧಾನ ಸೌಧ ಬಂಟ್ವಾಳ RTO ಕಚೇರಿ, ಕೆಎಸ್ಆರ್ ಟಿಸಿ ಬಸ್ ನಿಲ್ದಾಣ, ಉದ್ಯೋಗ ಮೇಳ ದಿಂದ ನಿರುದ್ಯೋಗಿ ಗಳಿಗೆ ಕೆಲಸ, ಕುಡಿಯುವ ನೀರಿಗೆ ಹಲವು ಕಡೆ ಯೋಜನೆ, ಅತೀ ಹೆಚ್ಚು ಸುಸಜ್ಜಿತ ಅಂಗನವಾಡಿ ಕೇಂದ್ರ, ಹಕ್ಕು ಪತ್ರ ವಿತರಣೆ, ಇನ್ನು ಧಾರ್ಮಿಕ ಕೇಂದ್ರ ಗಳ , ಕ್ರೀಡೆ ಗಳಿಗೆ ಪ್ರೋತ್ಸಾಹ,ಅದೆಸ್ಟೋ ಅಭಿವೃದ್ಧಿ ಕಾರ್ಯ ಆಗಿದೆ. ಆದರೆ ಈ ಸಲ ಬಿಜೆಪಿ ಯಲ್ಲಿ ದಕ್ಷ ನಾಯಕರ ಕೊರತೆ ಎದ್ದು ಕಾಣುತ್ತಿದ್ದು ಮತದಾರ ಭಾಂದವರು ಕ್ಷೇತ್ರದ ಅಭಿವೃದ್ಧಿ ಯನ್ನು ನೋಡಿ ದಣಿವರಿಯದ ನಾಯಕನ ಕೈ ಹಿಡಿಯುವ ಎಲ್ಲಾ ಲಕ್ಷಣ ಗಳು ಇವೆ . ಕೊನೆಗೆ ಜನರ ಆಶೀರ್ವಾದ, ಕೃಪೆ ಯಾರ ಮೇಲೆ ಇರುತ್ತೆ ಎಂದು ಕಾದು ನೋಡಬೇಕಾಗಿದೆ.

ಈ ಬಾರಿ ಬಂಟ್ವಾಳ ಕ್ಷೇತ್ರದಲ್ಲಿ ರಮಾನಾಥ ರೈ ವಿರುದ್ಧ ಬಿಜೆಪಿ ಪ್ರಸ್ತುತ ಶಾಸಕ ರಾಜೇಶ್ ನಾಯಕ್ ,ಅಥವಾ ಇತರ ಸಂಭಾವ್ಯರನ್ನು ಕಣಕ್ಕಿಳಿಸುವ ಸಾಧ್ಯತೆಯಿದೆ.ಈ ಹಿಂದೆ ಕ್ಷೇತ್ರದ ಶಾಸಕರಾಗಿ ದಾಖಲೆಯನ್ನ ಬರೆದಿರುವ ರಮಾನಾಥ ರೈ ವಿರುದ್ಧ ಪ್ರಬಲ ಅಭ್ಯರ್ಥಿಯನ್ನು ಕಣಕ್ಕಿಳಿಸಲು ಬಿಜೆಪಿ ಮುಂದಾಗಿದೆ.