

ರಾಮನಗರದಲ್ಲಿ ಜಾನುವಾರು ಸಾಗಾಟ ಮಾಡುತ್ತಿದ್ದ ವಾಹನದ ಮೇಲೆ ಹಿಂದುತ್ವ ಕಾರ್ಯಕರ್ತರು ದಾಳಿ ನಡೆಸಿದ ಘಟನೆ ನಿನ್ನೆ ನಡೆದಿತ್ತು. ಇದೀಗ ಘಟನೆ ನಡೆದ ಸ್ವಲ್ಪ ದೂರದಲ್ಲೇ ವಾಹನದಲ್ಲಿದ್ದ ವ್ಯಕ್ತಿಯ ಶವ ಪತ್ತೆಯಾಗಿದೆ.
ರಾಮನಗರ:
ಜಾನುವಾರು ಸಾಗಣೆ (Transportation of cattle ) ಮಾಡುತ್ತಿದ್ದಾಗ ಹಿಂದುತ್ವ ಕಾರ್ಯಕರ್ತರ (Hindu activists) ದಾಳಿಗೆ ವಾಹನದಲ್ಲಿದ್ದ ವ್ಯಕ್ತಿ ಸಾವನಪ್ಪಿದ್ದಾನೆ (Suspicious death). ಮಂಡ್ಯ ಜಿಲ್ಲೆ ಮಳವಳ್ಳಿಯ ಇರ್ಗೀಷ್ ಪಾಷಾ (35) ಸಾವನ್ನಪ್ಪಿದ ವ್ಯಕ್ತಿ. ಜಿಲ್ಲೆಯ ಕನಕಪುರ ತಾಲೂಕಿನ ಸಾತನೂರು ಬಳಿ ಇರ್ಗೀಷ್ ಪಾಷಾ ಶವ ಪತ್ತೆಯಾಗಿದ್ದು, ಆಕ್ರೋಶಗೊಂಡ ಕುಟುಂಬಸ್ಥರು ಸಾತನೂರು ಠಾಣೆ ಬಳಿ ಪ್ರತಿಭಟನೆ ನಡೆಸಿ ಇರ್ಗೀಷ್ ಪಾಷಾ ಸಾವಿಗೆ ಪುನೀತ್ ಕೆರೆಹಳ್ಳಿ ಕಾರಣ ಎಂದು ಆರೋಪಿಸಿದ್ದಾರೆ. ಅಲ್ಲದೆ, ಕೂಡಲೇ ಪುನೀತ್ ಕೆರೆಹಳ್ಳಿಯನ್ನು ಬಂಧಿಸಿ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.

ಕ್ಯಾಂಟರ್ ವಾಹನದಲ್ಲಿ ಇರ್ಗೀಷ್ ಪಾಷಾ ಎಂಬಾತ ಜಾನುವಾರುಗಳನ್ನು ಕೊಂಡೊಯ್ಯುತ್ತಿದ್ದನು. ಈ ವಿಚಾರ ತಿಳಿದ ಹಿಂದತ್ವ ಗೂಂಡಾ ಪುನೀತ್ ಕೆರೆಹಳ್ಳಿ ಮತ್ತು ತಂಡ ವಾಹನದ ಮೇಲೆ ದಾಳಿ ನಡೆಸಿದ್ದಾರೆ. ಈ ವೇಳೆ ಭಯಬೀತನಾದ ಇರ್ಗೀಷ್ ಪಾಷಾ ನ ಮೇಲೆ ದಾಳಿ ಮಾಡಿದ್ದಾರೆ , . ಜಾನುವಾರು ರಕ್ಷಣೆ ಸಂಬಂಧ ಸಾತನೂರು ಠಾಣೆಯಲ್ಲಿ ಕೇಸ್ ದಾಖಲಾಗಿತ್ತು.

ಆದರೆ, ದಾಳಿ ನಡೆದ ಸ್ವಲ್ಪ ದೂರದಲ್ಲೇ ಇರುವ ಸಾತನೂರು ಗ್ರಾಮದಲ್ಲಿ ಇರ್ಗೀಷ್ ಪಾಷಾ ಅನುಮಾನಸ್ಪದವಾಗಿ ಸಾವನ್ನಪ್ಪಿದ್ದು, ಶವ ಕೂಡ ಪತ್ತೆಯಾಗಿದೆ. ಸದ್ಯ ಪಾಷಾ ಸಾವಿಗೆ ಪುನೀತ್ ಕೆರೆಹಳ್ಳಿ ಕಾರಣ ಎಂದು ಮೃತನ ಕುಟುಂಬಸ್ಥರು ಆರೋಪಿಸಲಾಗುತ್ತಿದ್ದು, ಬಂಧನಕ್ಕೆ ಆಗ್ರಹಿಸುತ್ತಿದ್ದಾರೆ
