

ಭಾರತೀಯ ಚುನಾವಣಾ ಆಯೋಗ (ECI) ಬುಧವಾರ (ಮಾರ್ಚ್ 29) ಕರ್ನಾಟಕ ಚುನಾವಣೆ 2023ರ(Karnataka Elections 2023) ದಿನಾಂಕಗಳನ್ನು ಪ್ರಕಟಿಸಿದೆ.ಕರ್ನಾಟಕ ರಾಜ್ಯದಲ್ಲಿ ಮೇ 10 ರಂದು ಒಂದೇ ಹಂತದಲ್ಲಿ ಚುನಾವಣೆ ನಡೆಯಲಿದ್ದು, ಮೇ 13 ರಂದು ಫಲಿತಾಂಶ ಪ್ರಕಟವಾಗಲಿದೆ. ಈ ಘೋಷಣೆಯೊಂದಿಗೆ ರಾಜ್ಯದಲ್ಲಿ ಮಾದರಿ ನೀತಿ ಸಂಹಿತೆ (model code of conduct)ಜಾರಿಯಾಗಿದೆ. ಅದೇ ವೇಳೆ ನಾಗರಿಕರಿಂದ ಅನುಕೂಲಕರ ಮತಗಳನ್ನು ಸೆಳೆಯಲು ಯಾವುದೇ ನಗದು, ಉಚಿತ ಅಥವಾ ಯಾವುದನ್ನೂ ನೀಡದಂತೆ ಪಕ್ಷದ ಮುಖಂಡರಿಗೆ ಎಚ್ಚರಿಕೆ ನೀಡಲಾಗಿದೆ.

ಒಂದು ವೇಳೆ ಪಕ್ಷಗಳು/ವ್ಯಕ್ತಿಗಳು ಮಾದರಿ ನೀತಿ ಸಂಹಿತೆ ಉಲ್ಲಂಘನೆ ಮಾಡಿದರೆ ಅವುಗಳ ವಿರುದ್ಧ ದೂರುಗಳನ್ನು ಸಲ್ಲಿಸಲು ನಾಗರಿಕರು cVIGIL ಆ್ಯಪ್ ಬಳಸಿ ದೂರುಸಲ್ಲಿಸಬಹುದು. ಇದರಲ್ಲಿ ವಿಡಿಯೊಗಳನ್ನು ಶೂಟ್ ಮಾಡಬಹುದು ಅಥವಾ ಕೃತ್ಯದ ಫೋಟೋಗಳನ್ನು ಸೆರೆಹಿಡಿಯಬಹುದು. ಇದಾದ ನಂತರ ತಕ್ಷಣವೇ ಅವುಗಳನ್ನು ಅಪ್ಲಿಕೇಶನ್ಗೆ ಅಪ್ಲೋಡ್ ಮಾಡಬಹುದು. ಈ ರೀತಿಯಾಗಿ, ತಪ್ಪಿತಸ್ಥ ಸ್ಪರ್ಧಿಗಳನ್ನು ಅನರ್ಹಗೊಳಿಸಲು ಚುನಾವಣಾ ಆಯೋಗಕ್ಕೆ ಇದು ನಿರ್ಣಾಯಕ ಸಾಕ್ಷ್ಯವನ್ನು ನೀಡುತ್ತದೆ.

cVIGIL ಅಪ್ಲಿಕೇಶನ್ ಬಳಸುವುದು ಹೇಗೆ?
- cVIGIL ಅಪ್ಲಿಕೇಶನ್ ಬಳಸಿ, ಜನರು ಮತಗಳನ್ನು ಗಳಿಸಲು ಕ್ಷೇತ್ರದ ನಾಗರಿಕರಿಗೆ ಅಭ್ಯರ್ಥಿ ಅಥವಾ ಅವರ ಅನುಯಾಯಿಗಳು ಹಣ ಅಥವಾ ಉಡುಗೊರೆಗಳನ್ನು ಹಸ್ತಾಂತರಿಸುವ ಚಿತ್ರವನ್ನು ತೆಗೆದುಕೊಳ್ಳಬಹುದು.
- ಫೋಟೋ/ವೀಡಿಯೊ ಜೊತೆಗೆ, ಅಪ್ಲಿಕೇಶನ್ ರೇಖಾಂಶಗಳು ಮತ್ತು ಸ್ಪಾಟ್ ಅಕ್ಷಾಂಶಗಳೊಂದಿಗೆ ನಿಖರವಾದ ಜಿಯೊ ಲೊಕೇಶನ್ ಕೂಡಾ ಸಹ ಸೆರೆಹಿಡಿಯುತ್ತದೆ.
- ನಾಗರಿಕರು ಅಪ್ಲಿಕೇಶನ್ನಲ್ಲಿ ದೂರಿನ ಜೊತೆಗೆ ಮಲ್ಟಿಮೀಡಿಯಾ ವಿಷಯವನ್ನು ಅಪ್ಲೋಡ್ ಮಾಡಿದ ನಂತರ ಸಂಹಿತೆ ಉಲ್ಲಂಘಿಸುವವರನ್ನು ಪೊಲೀಸ್ ಕಸ್ಟಡಿಗೆ ತೆಗೆದುಕೊಳ್ಳಲು ಫ್ಲೈಯಿಂಗ್ ಸ್ಕ್ವಾಡ್ ನಿಖರವಾದ ಸ್ಥಳಕ್ಕೆ ಆಗಮಿಸುವ ಸಾಧ್ಯತೆ ಇರುತ್ತದೆ.
- ಹೆಚ್ಚಿನ ಸಂದರ್ಭಗಳಲ್ಲಿ, ಸರಿಯಾದ ಮಾಹಿತಿಯನ್ನು ನೀಡಿದರೆ ಚುನಾವಣಾ ಆಯೋಗದ ಫ್ಲೈಯಿಂಗ್ ಸ್ಕ್ವಾಡ್ ಸಮಯಕ್ಕೆ ಸ್ಥಳಕ್ಕೆ ತಲುಪಬಹುದು. ಸಾಕ್ಷ್ಯಗಳೊಂದಿಗೆ (ಲೆಕ್ಕವಿಲ್ಲದ ಉಡುಗೊರೆಗಳು / ನಗದು) ಅಪರಾಧಿಗಳನ್ನು ಸೆರೆ ಹಿಡಿದು ಶಿಕ್ಷೆಗೊಳಪಡಿಸಬಹುದು.
- cVIGIL ಅಪ್ಲಿಕೇಶನ್ನೊಂದಿಗೆ, ಬಳಕೆದಾರರು ಎಂಸಿಸಿ ಉಲ್ಲಂಘನೆ ಪ್ರಕರಣದ ಸ್ಥಿತಿಯನ್ನು ಸಹ ಟ್ರ್ಯಾಕ್ ಮಾಡಬಹುದು ಬಳಕೆದಾರರು ಇತರೆ ದೂರುಗಳಿಗಾಗಿ ರಾಷ್ಟ್ರೀಯ ಸಂಪರ್ಕ ಕೇಂದ್ರಕ್ಕೆ 1800111950 ಅಥವಾ ರಾಜ್ಯ ಸಂಪರ್ಕ ಕೇಂದ್ರಕ್ಕೆ 1950ಕ್ಕೆ ಕರೆ ಮಾಡಬಹುದು.
-
-