

ಹಾಸನ: ಬೇಲೂರು ಚನ್ನಕೇಶವ ರಥೋತ್ಸವದ (Beluru Channakeshava Temple) ಸಂದರ್ಭದಲ್ಲಿ ಕುರಾನ್ ಪಠಣಕ್ಕೆ (Quran) ವಿರೋಧ ವ್ಯಕ್ತಪಡಿಸಿ ಇಂದು ಹಿಂದೂಪರ ಸಂಘಟನೆ (Hindu Organizations) ಕಾರ್ಯಕರ್ತರು ಬೇಲೂರಿನ ದೇವಾಲಯ ರಸ್ತೆಯಲ್ಲಿ ಪ್ರತಿಭಟನೆ ನಡೆಸಿದರು. ರಥೋತ್ಸವದ ವೇಳೆ ಕುರಾನ್ ಪಠಣೆ ಮಾಡಲು ಅವಕಾಶ ನೀಡಬಾರದು ಎಂದು ಆಗ್ರಹಿಸಿದರು. ಈ ವೇಳೆ ಮುಸ್ಲಿಂ ಯುವಕ ಬೈಕ್ನಲ್ಲಿ ಬಂದು ‘ಕುರಾನ್ ಜಿಂದಾಬಾದ್’ ಎಂದು ಕೂಗಿದ್ದಾನೆ. ಈ ವೇಳೆ ಕಾರ್ಯಕರ್ತರು ಮತ್ತು ಯುವಕನ ನಡುವೆ ವಾಗ್ವಾದವಾಗಿದ್ದು ಬೇಲೂರು ಪೊಲೀಸರು ಠಾಣೆ ಚಾರ್ಜ್ ಮಾಡಿ ಯುವಕನನ್ನು ವಶಕ್ಕೆ ಪಡೆದು ಪರಿಸ್ಥಿತಿ ನಿಯಂತ್ರಿಸಿದ್ದಾರೆ. ಈಗ ಐಪಿಸಿ ಸೆಕ್ಷನ್ 107 ರ ಅಡಿಯಲ್ಲಿ ಮುಂಜಾಗ್ರತಾ ಕ್ರಮದ ಬಂಧನ ಮಾಡಿ ತಹಶೀಲ್ದಾರ್ ಮುಂದೆ ಹಾಜರುಪಡಿಸಲಿದ್ದಾರೆ.

ಬೇಲೂರಿನ ಚನ್ನಕೇಶವ ರಥೋತ್ಸವದ ವೇಳೆ ಕುರಾನ್ ಪಠಣ ವಿರೋಧಿಸಿ ಪ್ರತಿಭಟನೆ ನಡೆಯುತ್ತಿದ್ದ ವೇಳೆ ಶಾಕಿಬ್ ಹುಸೇನ್(33) ಎಂಬ ಯುವಕ ಕುರಾನ್ ಜಿಂದಾಬಾದ್ ಎಂದು ಘೋಷಣೆ ಕೂಗಿದ್ದಾನೆ. ಸದ್ಯ ಈತನನ್ನು ವಶಕ್ಕೆ ಪಡೆಯಲಾಗಿದೆ. ಈತ ಬೇಲೂರು ಪಟ್ಟಣದ ಮೀನುಮಾರುಕಟ್ಟೆ ಪ್ರದೇಶದ ನಿವಾಸಿ. ಶಾಕಿಬ್ ಹುಸೇನ್ ಪ್ರತಿಭಟನೆ ವೇಳೆ ಮೆರವಣಿಗೆಗೆ ಎದುರಾಗಿ ಬೈಕ್ ನಲ್ಲಿ ತೆರಳುತ್ತಿದ್ದ. ಆಗ ಹಿಂದೂಪರ ಸಂಘಟನೆ ಕಾರ್ಯಕರ್ತರು ಕುರಾನ್ ಪಠಣ ರದ್ದಾಗಲಿ ಎಂದು ಘೋಷಣೆ ಕೂಗಿದ್ದಾರೆ. ಈ ವೇಳೆ ಅವರಿಗೆ ಕೌಂಟರ್ ನೀಡುವ ಸಲುವಾಗಿ ಏಕಾ ಏಕಿ ಕುರಾನ್ ಜಿಂದಾಬಾದ್ ಎಂದು ಘೋಷಣೆ ಕೂಗಿದ್ದಾನೆ. ಘೋಷಣೆ ಕೂಗುತ್ತಲೆ . ಆಗ ಹೋರಾಟಗಾರರು ಮತ್ತು ಯುವಕನ ನಡುವೆ ಮಾತಿನ ಚಕಮಕಿಯಾಗಿದೆ. ಕೂಡಲೆ ಯುವಕನನ್ನು ವಶಕ್ಕೆ ಪಡೆದು ಪೊಲೀಸರು ಅನಾಹುತ ತಪ್ಫಿಸಿದ್ದಾರೆ

ಈಗ ಐಪಿಸಿ ಸೆಕ್ಷನ್ 107 ರ ಅಡಿಯಲ್ಲಿ ಮುಂಜಾಗ್ರತಾ ಕ್ರಮದ ಬಂಧನ ಮಾಡಿ ಪೊಲೀಸರು ಯುವಕನ್ನು ಬಂಧಿಸಿ ತಹಶೀಲ್ದಾರ್ ಮುಂದೆ ಹಾಜರುಪಡಿಸಲಿದ್ದಾರೆ. ಏಪ್ರಿಲ್ 4 ರ ಬೇಲೂರು ಜಾತ್ರೆ ವರೆಗೆ ಯಾವುದೇ ಅನಾಹುತ ಆಗದಂತೆ ಮುನ್ನೆಚ್ಚರಿಕೆ ಕ್ರಮವಾಗಿ ಅರಸ್ಟ್ ಮಾಡಲಾಗಿದೆ


HAYATH TV ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8861948115 ನಂಬರ್ ಸೇರಿಸಿ. ನೈಜ ಸುದ್ದಿಗಳನ್ನು ಪಡೆಯಿರಿ