

ಉಳ್ಳಾಲ ದೇರಳಕಟ್ಟೆ: ಬಿಜೆಪಿ ಶಾಸಕ ಈಶ್ವರಪ್ಪ ತನ್ನ ಎಲುಬಿಲ್ಲದ ನಾಲಿಗೆಯನ್ನು ಮತ್ತೊಮ್ಮೆ ಮುಸಲ್ಮಾನರ ಆಜಾನ್ ಹಾಗೂ ಆರಾಧಿಸುವ ಅಲ್ಲಾಹನ ಮೇಲೆ ಮತ್ತೆ ಪ್ರಯೋಗಿಸಿದ್ದು, ತನ್ನ ಹಳೇ ಚಾಳಿಯನ್ನು ಮತ್ತೆ ಮುಂದುವರಿಸಿದ್ದು ಇವರ ವಿರುದ್ದ SDPI ಪಕ್ಷವು ಕಾನೂನು ಹೋರಾಟ ನಡೆಸುತ್ತದೆ ಎಂದು
ನಿನ್ನೆ ದೇರಳಕಟ್ಟೆಯಲ್ಲಿ SDPI ಮಂಗಳೂರು ವಿಧಾನಸಭಾ ಕ್ಷೇತ್ರ ಸಮಿತಿ ನಡೆಸಿದ ಪ್ರತಿಭಟನೆಯಲ್ಲಿ ಮುಖ್ಯ ಭಾಷಣಕಾರರಾಗಿ ಆಗಮಿಸಿದ SDPI ದಕ್ಷಿಣ ಕನ್ನಡ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅನ್ವರ್ ಸಾದತ್ ಬಜತ್ತೂರು ತಿಳಿಸಿದರು.

ಇತ್ತೀಚೆಗೆ ರಾಜ್ಯದ ಗೃಹ ಸಚಿವ ಅರಗ ಜ್ಞಾನೇಂದ್ರ, ತಿರ್ಥಹಳ್ಳಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ತುಳುನಾಡಿನ ಹಿಂದೂಗಳು ಆರಾಧಿಸುವ ಗುಳಿಗ ದೈವದ ಬಗ್ಗೆ ಅತ್ಯಂತ ಕೆಟ್ಟ ಶಬ್ದಗಳನ್ನು ಬಳಸಿ ನಿಂದನಾತ್ಮಕ ಬಾಷಣ ಮಾಡಿದ್ದನ್ನು ನಾವು ಬಲವಾಗಿ ಖಂಡಿಸುತ್ತೇವೆ,ಯಾಕೆಂದರೆ ಪ್ರತಿಯೊಂದು ಧರ್ಮಕ್ಕೂ ಅದರದ್ದೇ ಆದ ಮಹತ್ವವಿದೆ , ಎಲ್ಲಾ ಧರ್ಮಕ್ಕೂ ಅದರದ್ದೇ ಆದ ಅನುಯಾಯಿಗಳು, ಆರಾಧಕರು ಇದ್ದಾರೆ ಎಲ್ಲಾ ಧರ್ಮಗಳ ಬಹುತ್ವವನ್ನು ಪ್ರೀತಿಸಿ ಗೌರವದಿಂದ ಬಾಳುವುದೇ ಬಾರತದ ಸಹಬಾಳ್ವೆಯ ಸಂಕೇತ ಇದೇ ಆಗಿದೆ SDPI ಪಕ್ಷದ ಮೂಲ ಆಶಯ ಬಸವನ ಗೌಡ ಯತ್ನಾಳ್ ,ಜಗದೀಶ್ ಕಾರಂತ, ಕಲ್ಲಡ್ಕ ಪ್ರಭಾಕರ ಭಟ್ ರಂತಹ ಪ್ರಚೋದನಕಾರಿ ಬಾಷಢಗಾರರು ಸಮಾಜವನ್ನು ಒಡೆಯುವ ಧರ್ಮ ದರ್ಮಗಳ ನಡುವೆ ಒಡಕನ್ನು ಉಂಟುಮಾಡುವ ಮಾತುಗಳನ್ನನ್ನಾಡುತ್ತಿದ್ದು ಇದನ್ನು ಕಟು ಶಬ್ದಗಳಿಂದ ಟೀಕಿಸಿದರು. ಇಂತಹ ವಿಭಜನಕಾರಿ ಶಕ್ತಿಗಳನ್ನು ಸರಕಾರ ಹದ್ದುಬಸ್ತಿನಲ್ಲಿ ಇಡಬೇಕು ಇಲ್ಲದಿದ್ದರೆ ಅವರನ್ನು ಕಾನೂನಾತ್ಮಕ ರೀತಿಯಲ್ಲಿ ನಿಯಂತ್ರಿಸಲು SDPI ಪಕ್ಷಕ್ಕೆ ಚೆನ್ನಾಗಿ ಗೊತ್ತಿದೆ ಎಂದು ಗುಡುಗಿದ್ದಾರೆ

ಧರ್ಮಗಳ ನಡುವೆ ಒಡಕುಂಟು ಮಾಡಿ ಸಮಾಜದಲ್ಲಿ ಅಶಾಂತಿ ಹಬ್ಬಿಸುವ ಯಾವುದೇ ಹೇಳಿಕೆಗಳನ್ನು SDPI ಪಕ್ಷವು ಖಂಡಿಸುತ್ತದೆ ಮಾತ್ರವಲ್ಲ ಸವಿಂದಾನತ್ಮಕ ವಾಗಿ ಪ್ರತಿಭಟಿಸಿ ಕಾನೂನು ಸಮರ ನಡೆಸುತ್ತದೆ ಎಂದು ಈ ಸಂದರ್ಭದಲ್ಲಿ ಹೇಳಿದರು.


SDPI ಮಂಗಳೂರು ವಿಧಾನಸಭಾ ಕ್ಷೇತ್ರ ಸಮಿತಿ ಅಧ್ಯಕ್ಷರಾದ ಇರ್ಶಾದ್ ಅಜ್ಜಿನಡ್ಕ ಇವರ ನೇತೃತ್ವದಲ್ಲಿ ನಡೆದ ಪ್ರತಿಭಟನಾ ಸಭೆಯಲ್ಲಿ ಮುಸ್ಲಿಂ ಒಕ್ಕೂಟ ಉಳ್ಳಾಲ ಇದರ ಅಧ್ಯಕ್ಷರಾದ ಹಸೈನಾರ್ ಬಸ್ತಿಪಡ್ಪು, SDPI ಮಂಗಳೂರು ವಿಧಾನಸಭಾ ಕ್ಷೇತ್ರ ಸಮಿತಿ ಕಾರ್ಯದರ್ಶಿ ಉಬೈದ್ ಅಮ್ಮೆಂಬಳ, ಜೊತೆ ಕಾರ್ಯದರ್ಶಿ ಸಲಾಂ ವಿದ್ಯಾ ನಗರ,ಸದಸ್ಯರಾದ ಸುಹೈಲ್ ಉಳ್ಳಾಲ್, ಪಾವೂರು ಗ್ರಾಮ ಪಂಚಾಯತ್ ಉಪಾಧ್ಯಕ್ಷ ಅನ್ಸಾರ್ ಇನೊಳಿ, ಉಳ್ಳಾಲ ನಗರ ಸಮಿತಿ ಉಪಾಧ್ಯಕ್ಷರಾದ ಇಮ್ತಿಯಾಝ್ ಕೋಟೆಪುರ, ಶಕೀಲ್ ತಲಪಾಡಿ ಹಾಗೂ ಪ್ರಮುಖರು ಉಪಸ್ಥಿತರಿದ್ದರು
