

ಇದೇ ಮಾರ್ಚ್ 12-03-2023 ರಂದು ದಕ್ಷಿಣ ಕನ್ನಡ ಜಿಲ್ಲೆಯ ಮಿತ್ತೂರು ಜಂಕ್ಷನ್ ನಲ್ಲಿ ನಡೆದ ಹಿಂದೂ ಜಾಗರಣ ವೇದಿಕೆಯ ಪ್ರತಿಭಟನೆಯಲ್ಲಿ ಪ್ರತಿಭಟನಾಕಾರರನ್ನು ಉದ್ದೇಶಿಸಿ ಭಾಷಣ ಮಾಡಿದ ಹಿಂದೂ ಸಂಘಟನೆಯೊಂದರ ಮುಖಂಡ
ಮಾಣಿ ನರಸಿಂಹ ಎಂಬುವವರು ಕೆದಿಲ ಗ್ರಾಮದ ಪಾಟ್ರಕೋಡಿಯನ್ನು ಮಿನಿ ಪಾಕಿಸ್ತಾನ ಎಂದು ಹೇಳಿಕೆ ನೀಡಿದ್ದು ಭಾರೀ ವಿವಾದಕ್ಕೆ ಗುರಿಯಾಗಿದೆ. ಅಲ್ಲದೇ ಅಲ್ಲಿ ಜೀವಿಸುವ ನಾಗರಿಕರನ್ನು ದೇಶದ್ರೋಹಿಗಳು, ದನಕಳ್ಳರು ಎಂದು ಆರೋಪಿಸಿದ್ದನ್ನು ಖಂಡಿಸಿ ಪಾಟ್ರಕೋಡಿಯ ನಾಗರಿಕರು ಇಂದು ವಿಟ್ಲ ಪೊಲೀಸ್ ಠಾಣೆಯಲ್ಲಿ ಕೇಸು ದಾಖಲಿಸಿ ನರಸಿಂಹನ ಮೇಲೆ ಎಫ್ಐಆರ್ ದಾಖಲಿಸಲು ಠಾಣಾ ಆರಕ್ಷಕರಲ್ಲಿ ಮನವಿ ಸಲ್ಲಿಸಿದರು.

