

ತಮಿಳುನಾಡಿನಲ್ಲಿ ಬುಧವಾರವೂ ಬಿಜೆಪಿಯ ಪಕ್ಷಾಂತರ ಪರ್ವ ಮುಂದುವರಿದಿದ್ದು, ಐಟಿ ವಿಭಾಗದ ಪದಾಧಿಕಾರಿ ಸೇರಿದಂತೆ ಪಕ್ಷದ 13 ಪದಾಧಿಕಾರಿಗಳು ಕೇಸರಿ ಪಕ್ಷವನ್ನು ತೊರೆದಿದ್ದಾರೆ.
ಬಿಜೆಪಿ ಪಕ್ಷದ ಪಶ್ಚಿಮ ಚೆನ್ನೈ ಘಟಕದಲ್ಲಿ ಐಟಿ ವಿಭಾಗದ ಮುಖ್ಯಸ್ಥರಾಗಿದ್ದ ಓರತಿ ಅನ್ಬರಸು ಮತ್ತು ಇತರ 12 ಪದಾಧಿಕಾರಿಗಳು ಬುಧವಾರ ಕೇಸರಿ ಪಕ್ಷ ತೊರೆದು ಮಿತ್ರ ಪಕ್ಷ ಅಖಿಲ ಭಾರತ ಅಣ್ಣಾ ದ್ರಾವಿಡ ಮುನ್ನೇತ್ರ ಕಳಗಂ (ಎಐಎಡಿಎಂಕೆ) ಸೇರಿದ್ದಾರೆ.

ಬಿಜೆಪಿ ರಾಜ್ಯಾಧ್ಯಕ್ಷ Orathi Anbarasu ಅವರ ಕಾರ್ಯನಿರ್ವಹಣೆ ಶೈಲಿ ವಿಚಾರದಲ್ಲಿ ಭಿನ್ನಾಭಿಪ್ರಾಯ ಮೂಡಿದ ಹಿನ್ನಲೆಯಲ್ಲಿ ಪಕ್ಷದ ಐಟಿ ವಿಭಾಗದ ಮುಖ್ಯಸ್ಮರಾಗಿದ್ದ ಸಿಟಿ ಆರ್ ನಿರ್ಮಲ್ ಕುಮಾರ್ ಅವರು ಕೇಸರಿ ಪಕ್ಷಕ್ಕೆ ರಾಜೀನಾಮೆ ನೀಡಿ ಎಐಎಡಿಎಂಕೆ ಸೇರಿದ್ದಾರೆ. ಇದರ ಬೆನ್ನಲ್ಲೇ ಇದೀಗ ಬಿಜೆಪಿಯಿಂದ 13 ಜನರು ಪಕ್ಷ ತೊರೆದಿದ್ದಾರೆ.
ಈ 13 ಜನರು ಕೂಡ ಈಗ ತಮ್ಮ “ನಾಯಕ” ಮತ್ತು ಮಾಜಿ ರಾಜ್ಯ ಐಟಿ ವಿಭಾಗದ ಮುಖ್ಯಸ್ಥ ಸಿಟಿಆರ್ ನಿರ್ಮಲ್ ಕುಮಾರ್ ಅವರ ರಾಜಕೀಯ ಮಾರ್ಗವನ್ನು ಅನುಸರಿಸಿದ್ದಾರೆ. ನಿರ್ಮಲ್ ಕುಮಾರ್ ಅವರು ಬಿಜೆಪಿಯನ್ನು ತೊರೆದು ಎಐಎಡಿಎಂಕೆಗೆ ಸೇರಿದ್ದರು. ಪಕ್ಷದ ಇತರ ಕೆಲವು ಪದಾಧಿಕಾರಿಗಳು ಸಹ ಬಿಜೆಪಿ ತೊರೆದು ಕೆ ಪಳನಿಸ್ವಾಮಿ ನೇತೃತ್ವದ ಎಐಎಡಿಎಂಕೆಗೆ ಸೇರ್ಪಡೆಗೊಂಡರು, ಇದು ಎರಡು ಮಿತ್ರಪಕ್ಷಗಳ ನಡುವೆ ಮಾತಿನ ಸಮರಕ್ಕೆ ಕಾರಣವಾಗಿದೆ.

ದೀರ್ಘಕಾಲದಿಂದ ಬಿಜೆಪಿಗಾಗಿ ದುಡಿದಿದ್ದೇನೆ. ನಾನು ಯಾವುದೇ ಸ್ನಾನಮಾನ ನಿರೀಕ್ಷೆ ಮಾಡಿಲ್ಲ ಎಂಬುದು ಜನರಿಗೆ ಗೊತ್ತಿದ. ಆದರ ಕಳೆದ ಕೆಲವು ದಿನಗಳಿಂದ ಪಕ್ಷದಲ್ಲಿನ ಘಟನೆಗಳನ್ನು ಪರಿಗಣಿಸಿ ಪಕ್ಷದಲ್ಲಿನ “ಪಿತೂರಿಗಳಿಗೆ” ಬಲಿಯಾಗಲು ಬಯಸುವುದಿಲ್ಲ ಆದ್ದರಿಂದ ಬಿಜೆಪಿಯನ್ನು ತೊರೆಯುತ್ತಿದ್ದೇನೆ” ಎಂದು ಬಿಜೆಪಿ ಐಟಿ ವಿಭಾಗದ ಜಿಲ್ಲಾಧ್ಯಕ್ಷ ಓರತಿ ಅನ್ಸರಸು ಅವರು ಹೇಳಿದ್ದಾರೆ.

ಈ ನಡುವೆ ಬಿಜೆಪಿ ರಾಜ್ಯಾಧ್ಯಕ್ಷ ಕೆ.ಅಣ್ಣಾಮಲೈ ಅವರು ಕೊಯಮತ್ತೂರಿನಲ್ಲಿ ಮಾಧ್ಯಮ ಪ್ರತಿನಿಧಿಗಳು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ್ದು, ”ಬಿಜೆಪಿಯಲ್ಲಿನ ಬೆಳವಣಿಗೆಗಳನ್ನು ಇತರ ಪಕ್ಷಗಳು ಸೂಕ್ಷ್ಮವಾಗಿ ಗಮನಿಸುತ್ತಿರುವುದರಿಂದ, ಕೆಲವು ಎರಡನೇ ಅಥವಾ ಮೂರನೇ ಹಂತದ ನಾಯಕರು ಪಕ್ಷವನ್ನು ತೊರೆಯುವ ವಿಷಯವು ದೊಡ್ಡ ಆಯಾಮವನ್ನು ಪಡೆದುಕೊಂಡಿದೆ” ಎಂದು ಹೇಳಿದರು.
”ಕೆಲವು ದೊಡ್ಡ ನಾಯಕರು ಬಿಜೆಪಿ ತೊರೆದು ಮೂರು ತಿಂಗಳ ನಂತರ ದೊಡ್ಡ ನಾಯಕರು ಪಕ್ಷಕ್ಕೆ ಬರುವ ಸಾಧ್ಯತೆಗಳಿವೆ ಎಂದರು. ನಾನು ಅಣ್ಣಾಮಲೈ ಹೆಸರಿನ ಹಿಂದೆ ಎಂಪಿ ಅಥವಾ ಎಂಎಲ್‌ಎ ಟ್ಯಾಗ್ ಹೊಂದಲು ಬಿಜೆಪಿಗೆ ಸೇರಿಲ್ಲ, ಪಕ್ಷದ ಬೆಳವಣಿಗೆಗಾಗಿ ಸೇರಿದ್ದಾನೆ” ಎಂದು ಅವರು ಹೇಳಿದರು.