

ಬೆಂಗಳೂರು: ವಿಧಾಸಭೆ ಚುನಾವಣೆ (Karnataka Assembly Elections 2023) ಹೊತ್ತಲ್ಲಿ 40 ಪರ್ಸೆಂಟ್ ಕಮಿಷನ್ ಅಸ್ತ್ರವನ್ನೇ ಇಟ್ಕೊಂಡು ಬಿಜೆಪಿ ವಿರುದ್ಧ ಮುಗಿಬಿದ್ದಿದ್ದ ಕಾಂಗ್ರೆಸ್ಗೆ (Congress) ಇದೀಗ ಮತ್ತೊಂದು ಅಸ್ತ್ರ ಸಿಕ್ಕಿದೆ. ಭ್ರಷ್ಟಾಚಾರ(Corruption) ಸಮರ ಸಾರಿದ್ದ ಕೈ ಪಡೆಗೆ ಬಿಜೆಪಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಲೋಕಾಯುಕ್ತ ಪ್ರಕರಣವನ್ನು ಭಾರೀ ಅಸ್ತ್ರವಾಗಿ ಬಳಸಿಕೊಳ್ಳು ಕಾಂಗ್ರೆಸ್ ಸನ್ನದ್ಧವಾಗಿದ್ದು, ಹೀಗಾಗಿಯೇ ಮಾರ್ಚ್ 9ರಂದು ರಾಜ್ಯಾದ್ಯಂತ 2 ಗಂಟೆ ಬಂದ್ಗೆ ಕರ್ನಾಟಕ ಕಾಂಗ್ರೆಸ್ ಕರೆ ಕೊಟ್ಟಿದೆ. ಮಾರ್ಚ್ 9ರಂದು ಬೆಳಗ್ಗೆ 9ರಿಂದ ಬೆಳಗ್ಗೆ 11 ಗಂಟೆಯವರೆಗೆ ರಾಜ್ಯಾದ್ಯಂತ ಬಂದ್ಗೆ (Karnataka Bandh) ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಕರೆ ಕೊಟ್ಟಿದ್ದಾರೆ. 2 ಗಂಟೆ ಕಾಲ ಅಂಗಡಿ ಮುಂಗಟ್ಟು ಮುಚ್ಚಿ ಬಂದ್ಗೆ ಸಹಕರಿಸಲು ಮನವಿ ಮಾಡಿಕೊಂಡಿದ್ದಾರೆ.

ಇಂದು(ಮಾರ್ಚ್ 05) ತುಮಕೂರು ಜಿಲ್ಲೆ ಕೊರಟಗೆರೆಯಲ್ಲಿ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್, ಸಿಎಂ ಸಾಕ್ಷಿ ಕೋಡಿ ಅಂದಿದ್ದರು. ಲೋಕಾಯುಕ್ತದವರು ಇಂದು ಸಾಕ್ಷಿ ನೀಡಿದ್ದಾರೆ. ಲೋಕಾಯುಕ್ತರಿಗೆ ಅಭಿನಂದನೆ. ಸಿಎಂ ರಾಜೀನಾಮೆಗೂ ಒತ್ತಾಯಿಸಿ ಪ್ರತಿಭಟನೆ ಕೂಡ ಮಾಡಿದ್ದೇವೆ. ಬರುವ 9ರಂದು(ಮಾರ್ಚ್ 09) ಬಂದ್ ಕರೆ ನೀಡಲಾಗುತ್ತಿದೆ. ಬಂದ್ ವೇಳೆ ಯಾರಿಗೂ ತೊಂದರೆ ನೀಡಲ್ಲ. ಶಾಂತಿ ರೀತಿಯಿಂದ ಪ್ರತಿಭಟನೆ ಮಾಡಬೇಕು. ವ್ಯಾಪಾರವನ್ನ ಎರಡು ಗಂಟೆಗಳ ಕಾಲ ಅಂಗಡಿ ಮುಗ್ಗಟ್ಟು ಬಂದ್ ಮಾಡಿ ಬೆಂಬಲ ನೀಡುವಂತೆ ಮನವಿ ಮಾಡಿದರು.

ರಾಷ್ಟ್ರದ ನಾಯಕರು ಹಾಗೂ ರಾಜ್ಯದ ನಾಯಕರು ಬಳಿ ಚರ್ಚೆ ಮಾಡಲಾಗಿದೆ. ಇಡೀ ಕರ್ನಾಟಕ ರಾಜ್ಯಕ್ಕೆ ಕಳಂಕ ಬಂದಿದೆ. ಮೂರು ವರ್ಷಗಳಿಂದ ಭ್ರಷ್ಟಾಚಾರ ಬಗ್ಗೆ ಗಮನ ಸೆಳೆದಿದ್ದೆವೆ. ಕೋವಿಡ್ ,ಮಠ,ಕಾರ್ಪೋರೇಷನ್ ಗಳಲ್ಲಿ ಕಮಿಷನ್ ಬಗ್ಗೆ ಗಮನ ಸೆಳೆದಿದ್ದೆವೆ. ಗುತ್ತಿಗೆದಾರರ ಅಧ್ಯಕ್ಷ ಪಿಎಮ್ ಗೆ ಪತ್ರ ಬರೆದಿದ್ದರು. ಪಿಎಮ್ ನಾನು ತಿನ್ನಲ್ಲ,ತಿನ್ನೊಕು ಬಿಡುವುದಿಲ್ಲ ಅಂದಿದ್ದರು. ನಾವು ಜನಸಾಮಾನ್ಯರಿಗೆ ಆಗುವ ತೊಂದರೆ ಬಗ್ಗೆ ಗಮನ ಸೆಳೆದಿದ್ದೆವೆ ಎಂದರು.
ನಾವು ಉತ್ತಮ ಸರ್ಕಾರ ಮಾಡುತ್ತೇವೆ. ಜನರು ನಮಗೆ ಸಹಕಾರ ನೀಡುತ್ತಾರೆ. ಅಮಿತ್ ಷಾ ಕಾರ್ಯಕ್ರಮ ಮುಂದೂಡಿಕೆ ಬಗ್ಗೆ ನಮಗೆ ಸಂಬಂಧ ಇಲ್ಲ. ಸಿಎಂ ರಾಜೀನಾಮೆ ನೀಡಬೇಕು ಆಗ್ರಹಿಸಿದರು.
