

ಕೇರಳ ಸರ್ಕಾರ ಡ್ರಗ್ಸ್ ಮತ್ತು ಸೆಕ್ಸ್ಗೆ ಕೇರಳದ ಅಪ್ರಾಪ್ತ ಬಾಲಕಿಯರನ್ನು ಬಲಿ ನೀಡಲಾಗುತ್ತಿದೆ ಎಂಬ ಸುಳ್ಳು ಸುದ್ದಿ ಪ್ರಸಾರ ಮಾಡುತ್ತಿದೆ ಎಂದು ಆರೋಪಿಸಿ ಕೇರಳದ ಎರ್ನಾಕುಲಂನ SFI ಕಾರ್ಯಕರ್ತರು ಮಲೆಯಾಳಂ ಏಷ್ಯಾನೆಟ್ ಚಾನೆಲ್ ಕಚೇರಿಗೆ ನುಗ್ಗಿ ಪ್ರತಿಭಟನೆ ನಡೆಸಿದ್ದಾರೆ. ಅತಿಕ್ರಮ ಪ್ರವೇಶ ಮತ್ತು ಸಿಬ್ಬಂದಿಗೆ ಬೆದರಿಕೆ ಆರೋಪದ ಮೇಲೆ 30 ವಿದ್ಯಾರ್ಥಿ ಕಾರ್ಯಕರ್ತರ ಮೇಲೆ ಪ್ರಕರಣ ದಾಖಲಾಗಿದೆ.

ಶುಕ್ರವಾರ ರಾತ್ರಿ 8 ಗಂಟೆ ಸುಮಾರಿಗೆ 30ರಷ್ಟು ಎಸ್ಎಫ್ಐ ಕಾರ್ಯಕರ್ತರು ಚಾನೆಲ್ನ ಭದ್ರತಾ ಸಿಬ್ಬಂದಿಯನ್ನು ಪಕ್ಕಕ್ಕೆ ತಳ್ಳಿ, ಸುದ್ದಿವಾಹಿನಿಯ ವಿರುದ್ಧ ಘೋಷಣೆಗಳನ್ನು ಕೂಗುವ ಮೂಲಕ ಕಚೇರಿಗೆ ನುಗ್ಗಿ ನೌಕರರನ್ನು ಬೆದರಿಸಿದ್ದರು ಎಂದು ದೂರು ನೀಡಲಾಗಿದೆ. ಅದರ ಆಧಾರದಲ್ಲಿ ಐಪಿಸಿ ಸೆಕ್ಷನ್ 143. 147 ಮತ್ತು 149 ರ ಅಡಿಯಲ್ಲಿ ಪ್ರಕರಣ ದಾಖಲಾಗಿದೆ.

ಸುಳ್ಳು ಸುದ್ದಿ ವಿರುದ್ಧ ಪ್ರತಿಭಟನೆ- ಎಸ್ಎಫ್ಐ ವಾದ
ಉತ್ತರ ಕೇರಳದ ಶಾಲೆಯೊಂದರಲ್ಲಿ 10ಕ್ಕೂ ಹೆಚ್ಚು ವಿದ್ಯಾರ್ಥಿನಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಲಾಗುತ್ತಿದೆ, ಅ ಮಕ್ಕಳನ್ನು ಡ್ರಗ್ಸ್ ಜಾಲಕ್ಕೆ ದೂಡಲಾಗುತ್ತಿದೆ ಎಂದು ಏಷ್ಯಾನೆಟ್ ಸುದ್ದಿ ಪ್ರಸಾರ ಮಾಡಿತ್ತು. ಕಳೆದ ವರ್ಷದ ಸುದ್ದಿಗೆ ಫಾಲೋಅಪ್ ಸ್ಟೋರಿ ಮಾಡಿತ್ತು. ಆದರೆ ನೌಫಲ್ ಎಂಬ ಕಣ್ಣೂರಿನ ವರದಿಗಾರ ಏಷ್ಯಾನೆಟ್ನ ಉದ್ಯೋಗಿಯೊಬ್ಬರ ಮಗಳನ್ನೆ ಸಂದರ್ಶನ ಮಾಡಿ ನಿಜವಾಗಿ ಲೈಂಗಿಕ ದೌರ್ಜನ್ಯಕ್ಕೆ ಒಳಗಾದ ಬಾಲಕಿ ಎಂದು ನಿರೂಪಿಸಿದ್ದರು. ಈ ರೀತಿ ಹತ್ತಾರು ಮಕ್ಕಳು ಲೈಂಗಿಕ ದೌರ್ಜನ್ಯಕ್ಕೆ ಒಳಗಾಗಿದ್ದಾರೆ ಎಂದು ಸುಳ್ಳು ಸುದ್ದಿ ಪ್ರಸಾರ ಮಾಡಿದ್ದಾರೆ ಎಂದು ಎಸ್ಎಫ್ಐ ದೂರಿತ್ತು. ಹಾಗಾಗಿ ಏಷ್ಯಾನೆಟ್ ಕಚೇರಿಗೆ ನುಗ್ಗಿ ಪ್ರತಿಭಟಿಸಲಾಗಿದೆ ಎಂದಿದ್ದಾರೆ.
“ಎಸ್ಎಫ್ಐ ಕಾರ್ಯಕರ್ತರು ಎರ್ನಾಕುಲಂನಲ್ಲಿರುವ ಏಷ್ಯಾನೆಟ್ ಕಚೇರಿಗೆ ನುಗ್ಗಿ ಸಿಬ್ಬಂದಿಯನ್ನು ಬೆದರಿಸುತ್ತಿರುವ ಬಗ್ಗೆ ನಾವು ಕಳವಳ ವ್ಯಕ್ತಪಡಿಸುತ್ತೇವೆ ಮತ್ತು ನಮ್ಮ ಪ್ರತಿಭಟನೆಯನ್ನು ವ್ಯಕ್ತಪಡಿಸುತ್ತೇವೆ. ಈ ಪ್ರಬಲವಾದ ತಂತ್ರಗಳಿಗೆ ಪ್ರಜಾಪ್ರಭುತ್ವದಲ್ಲಿ ಸ್ಥಾನವಿಲ್ಲ. ಕೇರಳ ಸರ್ಕಾರವು ಈ ಘಟನೆಯನ್ನು ತ್ವರಿತವಾಗಿ ತನಿಖೆ ಮಾಡಬೇಕು” ಎಂದು ಪ್ರೆಸ್ ಕ್ಲಬ್ ಆಫ್ ಇಂಡಿಯಾ ಹೇಳಿಗೆ ಬಿಡುಗಡೆ ಮಾಡಿದೆ.