Hayathtv
  • ಮುಖಪುಟ
  • ಸುದ್ದಿ
    • All
    • ಕರಾವಳಿ
    • ರಾಜ್ಯ
    • ರಾಷ್ಟ್ರೀಯ
    • ವಿದೇಶ

    ಧರ್ಮಸ್ಥಳ ಪ್ರಕರಣ: ತಿಮರೋಡಿ-ಚಿನ್ನಯ್ಯ ಸಂಭಾಷಣೆಯ 8ನೇ ವಿಡಿಯೋ ಬಿಡುಗಡೆ

    ಗಣೇಶನಿಗೆ ಚಪ್ಪಲಿ ಹಾರ: ಬೇಲೂರಿನಲ್ಲಿ ಕೋಲಾಹಲ ಎಬ್ಬಿಸಿದ್ದ ಮಹಿಳೆ ಲೀಲಮ್ಮ ಬಂಧನ

    ಗಣೇಶನಿಗೆ ಚಪ್ಪಲಿ ಹಾರ: ಬೇಲೂರಿನಲ್ಲಿ ಕೋಲಾಹಲ ಎಬ್ಬಿಸಿದ್ದ ಮಹಿಳೆ ಲೀಲಮ್ಮ ಬಂಧನ

    PM Modi on GST: ನಾಳೆಯಿಂದ ದೇಶದ ಜನರಿಗೆ ಉಳಿತಾಯ ಉತ್ಸವ: ಹೊಸ ಜಿಎಸ್​ಟಿ ಸುಧಾರಣೆ ಬಗ್ಗೆ ಮೋದಿ

    PM Modi on GST: ನಾಳೆಯಿಂದ ದೇಶದ ಜನರಿಗೆ ಉಳಿತಾಯ ಉತ್ಸವ: ಹೊಸ ಜಿಎಸ್​ಟಿ ಸುಧಾರಣೆ ಬಗ್ಗೆ ಮೋದಿ

    Breaking: ಸಂಜೆ 5 ಗಂಟೆಗೆ ಪ್ರಧಾನಿ ಮೋದಿ ಭಾಷಣ.. ಬಿಗ್​​ ಅನೌನ್ಸ್​ಮೆಂಟ್​ ನಿರೀಕ್ಷೆ

    ಹಿಂದೂ ಕ್ರೈಸ್ತಗೆ ಕೊಕ್ – ಮತಾಂತರ ಆದವರಿಗೆ ಮೂಲ ಜಾತಿ ಅನ್ವಯ ಆಗಲ್ಲ

    ನಾಳೆಯಿಂದಲೇ ಹಿಂದುಳಿದ ಆಯೋಗದಿಂದ ಸಮೀಕ್ಷೆ – 60 ಪ್ರಶ್ನೆಗಳಿಗೆ ಉತ್ತರ ಪಡೆಯಲಿರೋ ಸರ್ವೇಯರ್ಸ್

    ಧರ್ಮಸ್ಥಳ ಪ್ರಕರಣ: ಚಿನ್ನಯ್ಯ-ತಿಮರೋಡಿ ಮತ್ತೆರಡು ವಿಡಿಯೋ ವೈರಲ್‌

    ಧರ್ಮಸ್ಥಳ ಪ್ರಕರಣ: ಚಿನ್ನಯ್ಯ-ತಿಮರೋಡಿ ಮತ್ತೆರಡು ವಿಡಿಯೋ ವೈರಲ್‌

    ಮಾಹಿತಿ ಹಕ್ಕು ಕಾಯ್ದೆ | ತುಮಕೂರು ಜಿಲ್ಲೆಯಲ್ಲಿ 1,323 ಮೇಲ್ಮನವಿ ಬಾಕಿ: ಬದ್ರುದ್ದೀನ್ ಕೆ.ಮಾಣಿ

    ಜಮ್ಮು ಕಾಶ್ಮೀರದಲ್ಲಿ ಎನ್‌ಕೌಂಟರ್ – ಓರ್ವ ಯೋಧ ಹುತಾತ್ಮ, ನಾಲ್ವರು ಶಂಕಿತ ಉಗ್ರರು ವಶಕ್ಕೆ 

    • ರಾಜ್ಯ
    • ರಾಷ್ಟ್ರೀಯ
    • ವಿದೇಶ
    • ಚುನಾವಣೆ
  • ಕರಾವಳಿ
  • ಕ್ರೈಮ್
  • ವಿಶೇಷ ಸುದ್ದಿ
  • ಕ್ರೀಡೆ
  • ಮನೋರಂಜನೆ
  • ವೀಡಿಯೋ ಗ್ಯಾಲರೀ
No Result
View All Result

Home ಸುದ್ದಿ ರಾಷ್ಟ್ರೀಯ

2024ರಲ್ಲೂ ಮೋದಿ ವಿರುದ್ಧ ಕಾಂಗ್ರೆಸ್‌ ಮೈತ್ರಿ ರಚನೆ: ಖರ್ಗೆ; ಸೋನಿಯಾ ರಾಜಕೀಯ ವಿದಾಯ..?

editor tv by editor tv
February 26, 2023
in ರಾಷ್ಟ್ರೀಯ, ಸುದ್ದಿ
0
2024ರಲ್ಲೂ ಮೋದಿ ವಿರುದ್ಧ ಕಾಂಗ್ರೆಸ್‌ ಮೈತ್ರಿ ರಚನೆ: ಖರ್ಗೆ; ಸೋನಿಯಾ ರಾಜಕೀಯ ವಿದಾಯ..?
1.9k
VIEWS
Share on FacebookShare on TwitterShare on Whatsapp

ನಯಾ ರಾಯ್‌ಪುರ (ಛತ್ತೀಸ್‌ಗಢ) (ಫೆಬ್ರವರಿ 26, 2023): ‘2024ರ ಲೋಕಸಭೆ ಚುನಾವಣೆಯಲ್ಲಿ ಜನವಿರೋಧಿ ಬಿಜೆಪಿಯನ್ನು ಸೋಲಿಸಲು ಸಮಾನ ಮನಸ್ಕ ಪಕ್ಷಗಳ ಜತೆ ಹೊಂದಾಣಿಕೆಗೆ ಸಿದ್ಧ’ ಎಂದು ಕಾಂಗ್ರೆಸ್‌ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿದರು. 85ನೇ ಕಾಂಗ್ರೆಸ್‌ ಮಹಾಧಿವೇಶನದಲ್ಲಿ ಶನಿವಾರ ಮಾತನಾಡಿದ ಅವರು, ‘2004ರಿಂದ 2014ರವರೆಗೆ ಕಾಂಗ್ರೆಸ್‌ ಸಮಾನ ಮನಸ್ಕ ಪಕ್ಷಗಳ ಜತೆ ಸೇರಿ ಸಮರ್ಥ ದೇಶ ಸೇವೆ ಮಾಡಿತು. ಈಗಲೂ ಸಮಾನ ಮನಸ್ಕ ಪಕ್ಷಗಳ ಜತೆ ಮೈತ್ರಿ ಮಾಡಿಕೊಂಡು ಜನವಿರೋಧಿ ಬಿಜೆಪಿ ಸೋಲಿಸಲು ಸಿದ್ಧರಿದ್ದೇವೆ’ ಎಂದರು.ಪ್ರಧಾನಿ ಮೋದಿ (PM Narendra Modi) ಅವರನ್ನೂ ತರಾಟೆಗೆ ತೆಗೆದುಕೊಂಡು, ‘ದಿಲ್ಲಿಯಲ್ಲಿ (Delhi) ಕುಳಿತ ಪ್ರಧಾನ ಸೇವಕರು ತಮ್ಮದೇ ಆದ ಜಾಹೀರಾತನ್ನು ದಿನಪತ್ರಿಕೆಗಳಲ್ಲಿ ಪ್ರಕಟಿಸಿಕೊಳ್ಳುತ್ತಿದ್ದಾರೆ. ಇಂಥವರು ತಮ್ಮ ಸ್ನೇಹಿತನಿಗೆ (Friend) ಮಾತ್ರ ಸಹಾಯ ಮಾಡುತ್ತಾರೆ’ ಎಂದು ಕುಟಕಿದರು.

‘ದಿಲ್ಲಿಯಲ್ಲಿ ಕುಳಿತವರ ಡಿಎನ್‌ಎ ಬಡವರ (Poor) ವಿರೋಧಿ ಆಗಿದೆ. ಪ್ರಜಾಸತ್ತೆಯನ್ನು ನಾಶಪಡಿಸುವುದಾಗಿದೆ. ಪ್ರಸಕ್ತ ಪರಿಸ್ಥಿತಿಯಲ್ಲಿ ಜನಾಂದೋಲನ ಅಗತ್ಯವಾಗಿದೆ’ ಎಂದರು.‘ಇತ್ತೀಚೆಗೆ ಕಾಂಗ್ರೆಸ್‌ (Congress) ಮುಖಂಡ ರಾಹುಲ್‌ ಗಾಂಧಿ (Rahul Gandhi) ನಡೆಸಿದ ಭಾರತ್‌ ಜೋಡೋ ಯಾತ್ರೆ (Bharat Jodo Yatra) ಅಭೂತಪೂರ್ವವಾಗಿತ್ತು. ಜನರು ಎದುರಿಸುತ್ತಿರುವ ಸವಾಲುಗಳ, ಸಮಸ್ಯೆಗಳ ದನಿಯಾಗಿ ಈ ಯಾತ್ರೆ ಹೊರಹೊಮ್ಮಿದೆ. ದೇಶದಲ್ಲಿ ಸಾಂವಿಧಾನಕ ಮೌಲ್ಯ, ಪ್ರಜಾಸತ್ತೆ ಮೇಲೆ ದೌರ್ಜನ್ಯ ನಡೆದಿದೆ. ಇನ್ನೊಂದು ಕಡೆ ಚೀನಾ ಗಡಿಯಲ್ಲಿ ದೇಶ ಅಭದ್ರತೆ ಎದುರಿಸುತ್ತಿದೆ. ದೇಶದ ಜನರು ಹಣದುಬ್ಬರ, ನಿರುದ್ಯೋಗ, ಆರ್ಥಿಕ ಅಸಮಾನತೆ ಹಾಗೂ ದ್ವೇಷದ ಭಯದಿಂದ ತತ್ತರಿಸಿದ್ದಾರೆ. ಇಂಥ ಸಂದರ್ಭದಲ್ಲಿ ಕಾಂಗ್ರೆಸ್‌ ಮಾತ್ರ ದೇಶದಲ್ಲಿ ಸಮರ್ಥ ಹಾಗೂ ನಿರ್ಣಾಯಕ ನಾಯಕತ್ವ ನೀಡಬಲ್ಲದು’ ಎಂದರು.

ಸೋನಿಯಾ ವಿದಾಯ ಭಾಷಣ?ಕಳೆದ 25 ವರ್ಷಗಳಿಂದ ಕಾಂಗ್ರೆಸ್ಸಿಗೆ ಬೆನ್ನೆಲುಬಾಗಿದ್ದ ಮಾಜಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಅಧಿಕೃತವಾಗಿ ತೆರೆಯ ಹಿಂದಕ್ಕೆ ಸರಿಯುವ ಇಂಗಿತ ವ್ಯಕ್ತಪಡಿಸಿದ್ದಾರೆ. ಛತ್ತೀಸ್‌ಗಢದ ನಯಾ ರಾಯಪುರದಲ್ಲಿ ನಡೆಯುತ್ತಿರುವ ಪಕ್ಷದ 85ನೇ ಮಹಾಧಿವೇಶನದಲ್ಲಿ ಶನಿವಾರ ಭಾಷಣ ಮಾಡಿದ ಅವರು, ರಾಜಕಾರಣಕ್ಕೆ ವಿದಾಯ ಹೇಳುವ ಧಾಟಿಯಲ್ಲಿ ಮಾತುಗಳನ್ನು ಆಡಿರುವುದು ಚರ್ಚೆಗೆ ಕಾರಣವಾಗಿದೆ.

2004 ಹಾಗೂ 2009ರಲ್ಲಿ ಪಕ್ಷ ಸಾಧಿಸಿದ ಗೆಲುವುಗಳು, ಡಾ. ಮನಮೋಹನಸಿಂಗ್‌ ಅವರ ಸಮರ್ಥ ನಾಯಕತ್ವ ನನಗೆ ವೈಯಕ್ತಿಕ ತೃಪ್ತಿ ನೀಡಿದೆ. ನನಗೆ ಹೆಚ್ಚು ತೃಪ್ತಿ ನೀಡುವ ಸಂಗತಿ ಯಾವುದೆಂದರೆ, ಕಾಂಗ್ರೆಸ್ಸಿಗೆ ಮಹತ್ತರ ತಿರುವಿನಂತಾಗಿರುವ ಭಾರತ್‌ ಜೋಡೋ ಯಾತ್ರೆಯೊಂದಿಗೆ ನನ್ನ ಇನ್ನಿಂಗ್‌್ಸ ಮುಕ್ತಾಯಗೊಳ್ಳಬಹುದು ಎಂಬ ಸಂಗತಿ ಎಂದು ಹೇಳಿದ್ದಾರೆ.ಸೋನಿಯಾ ಅವರು ಕಾಂಗ್ರೆಸ್ಸಿಗೆ ನೀಡಿದ ಕೊಡುಗೆಗಳನ್ನು ಕಾರ್ಯಕ್ರಮದಲ್ಲಿ ವಿಡಿಯೋ ಮೂಲಕ ಬಿತ್ತರಿಸಲಾಯಿತು. ಅದನ್ನು ಪ್ರಸ್ತಾಪಿಸಿ ಮಾತನಾಡಿದ ಅವರು, ಈ ವಿಡಿಯೋ ನನಗೆ ಎಷ್ಟು ವಯಸ್ಸಾಗಿ ಬಿಟ್ಟಿದೆ ಎಂಬುದನ್ನು ತೋರಿಸುತ್ತಿದೆ. ಮಲ್ಲಿಕಾರ್ಜುನ ಖರ್ಗೆ ಅವರ ನಾಯಕತ್ವದಲ್ಲಿ ಈಗ ಯುವಕರು ಮುಂದೆ ಬರಬೇಕು. 1998ರಲ್ಲಿ ಮೊದಲ ಬಾರಿಗೆ ನಾನು ಪಕ್ಷದ ಅಧ್ಯಕ್ಷೆಯಾಗಿ ಅಧಿಕಾರ ವಹಿಸಿಕೊಂಡೆ. ಈ 25 ವರ್ಷಗಳಲ್ಲಿ ಪಕ್ಷ ಹಲವು ಸಾಧನೆ ಹಾಗೂ ಮುಖಭಂಗಗಳನ್ನು ಅನುಭವಿಸಿದೆ. ಇದಕ್ಕೆಲ್ಲಾ ನಾನು ಕೃತಜ್ಞಳು ಎಂದು ಹೇಳಿದರು.

ಇದೇ ವೇಳೆ, 2024ರ ಚುನಾವಣೆಯಲ್ಲಿ ಪಕ್ಷದ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ನಾಯಕತ್ವದಲ್ಲಿ ಭಾರತೀಯ ಜನತಾ ಪಕ್ಷವನ್ನು ಮಣಿಸುವ ಗುರಿಯನ್ನು ತಲುಪಲು ಕಾಂಗ್ರೆಸ್‌ ಕಾರ್ಯಕರ್ತರು ತಲುಪಬೆಕು ಎಂದು ಕರೆ ನೀಡಿದರು.

Previous Post

ಉತ್ತರಪ್ರದೇಶ: ಕೊಲೆ ಪ್ರಕರಣದ ಪ್ರಮುಖ ಸಾಕ್ಷಿಯ ಕೊಲೆ; ಯೋಗಿ ಸರಕಾರದ ವಿರುದ್ಧ ಮುಗಿಬಿದ್ದ ಪ್ರತಿಪಕ್ಷ

Next Post

ಹಾಸನ: ಭೀಕರ ಅಪಘಾತ, ತಡರಾತ್ರಿ ಒಂದೇ ಬೈಕ್​ನಲ್ಲಿ ಹೊರಟಿದ್ದ ಕುಟುಂಬದ ನಾಲ್ವರ ದುರ್ಮರಣ

Next Post
ಹಾಸನ: ಭೀಕರ ಅಪಘಾತ, ತಡರಾತ್ರಿ ಒಂದೇ ಬೈಕ್​ನಲ್ಲಿ ಹೊರಟಿದ್ದ ಕುಟುಂಬದ ನಾಲ್ವರ ದುರ್ಮರಣ

ಹಾಸನ: ಭೀಕರ ಅಪಘಾತ, ತಡರಾತ್ರಿ ಒಂದೇ ಬೈಕ್​ನಲ್ಲಿ ಹೊರಟಿದ್ದ ಕುಟುಂಬದ ನಾಲ್ವರ ದುರ್ಮರಣ

ನಮ್ಮ ಬಗ್ಗೆ

ಹಯಾತ್ TV ರಾಜ್ಯದ ಹೆಸರಾಂತ ವಾರ್ತಾ ವೇದಿಕೆಗಳಲ್ಲಿ ಒಂದಾಗಿದೆ. ಇದರಲ್ಲಿ ರಾಜ್ಯ, ದೇಶ, ವಿದೇಶ, ಕ್ರೀಡೆ, ಸಿನಿಮಾ, ಮನರಂಜನೆ ಸೇರಿ ಹತ್ತಾರು ಸುದ್ದಿ ಗಳನ್ನು ಪ್ರತಿದಿನ ಹಾಕಲಾಗುತ್ತದೆ. ದೇಶ ಬದಲಾಗುತ್ತಿದೆ, ನ್ಯೂಸ್ ಅನ್ನು ಓದುವ ವಿಧಾನ ವೂ ಬದಲಾಗಲಿದೆ. ಈ ಬದಲಾವಣೆಯ ಬೆನ್ನಲ್ಲೇ ನಾವಿದ್ದೇವೆ.

ಜಾಹೀರಾತು ಮತ್ತು ಸುದ್ದಿಗಾಗಿ ಸಂಪರ್ಕಿಸಿ

Hayath Tv Media network
Mangalore
Chief Editor Ashraf Kammaje – 8861948115

Print Media

9483267000

  • Contact Us
  • HayathTV
  • Privacy Policy
  • Terms and Conditions

© 2025 HAYATH TV NEWS.

No Result
View All Result
  • Contact Us
  • HayathTV
  • Privacy Policy
  • Terms and Conditions

© 2025 HAYATH TV NEWS.