

ಬೆಂಗಳೂರು: ಸಾಮಾನ್ಯವಾಗಿ ಕಳ್ಳರು ತಮ್ಮ ಉಪಯೋಗಕ್ಕೆ ಕಳ್ಳತನ ಮಾಡುತ್ತಾರೆ. ಆದರೆ ಸಿಲಿಕಾನ್ ಸಿಟಿಯಲ್ಲೊಬ್ಬ (Bengaluru) ಡಿಫರೆಂಟ್ ಕಳ್ಳ (Thief) ಇದ್ದಾನೆ. ಈತ ತಾನು ಕದ್ದ ಹಣವನ್ನು ಭಿಕ್ಷುಕರಿಗೆ ನೀಡುವ ಮೂಲಕ ಗಮನ ಸೆಳೆದಿದ್ದಾನೆ.

ಹೌದು. ಕದ್ದ (Stolen) ಹಣವನ್ನು ತಾನೊಬ್ಬನೇ ಬಳಸದೆ ದಾನ ಧರ್ಮ ಮಾಡುತ್ತಿದ್ದ ವಿಚಿತ್ರ ಕಳ್ಳನನ್ನು ಇದೀಗ ಅಶೋಕ ನಗರದ ಪೊಲೀಸರು ಬಂಧಿಸಿದ್ದಾರೆ. ಬಂಧಿತನನ್ನು ಜಾನ್ ಅಲಿಯಾಸ್ ಮಂಜುನಾಥ ಎಂದು ಗುರುತಿಸಲಾಗಿದೆ. ಈತ ತಾನು ಕದ್ದ ಬೆಲೆಬಾಳುವ ವಸ್ತು ಹಾಗೂ ಹಣದ (Money) ಅರ್ಧ ಭಾಗ ದಾನವಾಗಿ ಹಂಚುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ಕದ್ದ ಹಣ-ಒಡವೆಗಳಲ್ಲಿ ಆರೋಪಿ ದೇವಸ್ಥಾನ ಹಾಗೂ ಚರ್ಚ್‍ಗಳಿಗೆ ಕಾಣಿಕೆ ಸಲ್ಲಿಸಿ ತನ್ನ ತಪ್ಪಿಗೆ ದೇವರ ಬಳಿ ಕ್ಷಮೆಯಾಚಿಸಿ ಬರುತ್ತಿದ್ದ. ಅಲ್ಲದೆ ಭಿಕ್ಷುಕರಿಗೆ ಕೈಲಾದಷ್ಟು ಹಣ ಕೊಟ್ಟು ಬರುತ್ತಿದ್ದನು.
ಆರೋಪಿ ಈ ಹಿಂದೆ ಸಂಬಳ ಜಾಸ್ತಿ ಮಾಡಿಲ್ಲ ಎಂದು ತಾನು ಕೆಲಸ ಮಾಡಿಕೊಂಡಿದ್ದ ಮಾಲೀಕನ ಮನೆಯಲ್ಲಿಯೇ 2 ಲಕ್ಷ ರೂ.ಗಳನ್ನು ಕದ್ದಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
