

ಉತ್ತರ ಕನ್ನಡ (ಫೆ.15): ಚುನಾವಣೆ ಹತ್ತಿರವಾಗುತ್ತಿದ್ದಂತೇ ಜಿಲ್ಲೆಯಲ್ಲಿ ಬಿಜೆಪಿಯಿಂದ ಸಮಾವೇಶ, ಜೆಡಿಎಸ್ ರಥಯಾತ್ರೆ ನಡೆಸಿದ ಬೆನ್ನಲ್ಲೇ ಕಾಂಗ್ರೆಸ್ ಪ್ರಜಾಪ್ರತಿಧ್ವನಿ ಯಾತ್ರೆಯನ್ನು ಪ್ರಾರಂಭಿಸಿದೆ. ಇಂದು ಶಿರಸಿ ಹಾಗೂ ಸಿದ್ಧಾಪುರದಲ್ಲಿ ಸಭೆಯ ಮೂಲಕ ಕಾಂಗ್ರೆಸ್ ಯಾತ್ರೆಯನ್ನು ನಡೆಸಿದೆ. ಕಾಂಗ್ರೆಸ್ ಮುಖಂಡರು ಬಿಜೆಪಿಯ ರಾಜ್ಯ ಹಾಗೂ ಕೇಂದ್ರ ಮುಖಂಡರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಈ ಕುರಿತ ಒಂದು ಸ್ಟೋರಿ ಇಲ್ಲಿದೆ ನೋಡಿ.

ಹೌದು! ಉತ್ತರಕನ್ನಡ ಜಿಲ್ಲೆಯಲ್ಲಿ ಬಿಜೆಪಿಯಿಂದ ಸಮಾವೇಶ, ಜೆಡಿಎಸ್ ರಥಯಾತ್ರೆ ನಡೆಸಿದ ಬೆನ್ನಲ್ಲೇ ಕಾಂಗ್ರೆಸ್ ಪ್ರಜಾಪ್ರತಿಧ್ವನಿ ಯಾತ್ರೆಯ ಮೂಲಕ ಜಿಲ್ಲೆಯಲ್ಲಿ ಮತಬೇಟೆಗೆ ಕಾಲಿರಿಸಿದೆ. ಕಾಂಗ್ರೆಸ್‌ನ ಘಟಾನುಘಟಿ ನಾಯಕರ ಬದಲು ವಿಧಾನ ಪರಿಷತ್ ಪ್ರತಿಪಕ್ಷದ ನಾಯಕ ಬಿ.ಕೆ.ಹರಿಪ್ರಸಾದ್, ಮಾಜಿ ಸಚಿವ, ಶಾಸಕ ಆರ್.ವಿ. ದೇಶ್‌ಪಾಂಡೆ ಹಾಗೂ ಸ್ಥಳೀಯ ಮುಖಂಡರು ಮಾತ್ರ ಭಾಗವಹಿಸಿ ಶಿರಸಿಯ ಅಕ್ಷಯ್ ಗಾರ್ಡನ್‌ನಲ್ಲಿ ನಡೆದ ಕಾರ್ಯಕ್ರಮವನ್ನು ದೀಪ ಬೆಳಗುವ ಮೂಲಕ ಉದ್ಘಾಟಿಸಿ ಯಾತ್ರೆಗೆ ಚಾಲನೆ ನೀಡಿದರು. ಬಳಿಕ ಮಾತನಾಡಿದ ಕಾಂಗ್ರೆಸ್ ಮುಖಂಡರು, ತಮ್ಮ ಭಾಷಣದುದ್ದಕ್ಕೂ ಬಿಜೆಪಿ ವಿರುದ್ಧ ವಾಕ್ ಪ್ರಹಾರ ನಡೆಸಿದರು.

ಪಾಪ ನಳಿನ್ಅವರಿಗೆ ಲವ್ವಲ್ಲಿ ಸ್ವಲ್ಪ ಹೆಚ್ಚು ಕಡಿಮೆ ಆಗಿರಬೇಕು, ಅದ್ಕೆ ಹೀಗೆಲ್ಲಾ ಮಾತನಾಡ್ತಾರೆ. ಕಾಂಗ್ರೆಸ್ ಜನಸಾಮಾನ್ಯರ ಕಷ್ಟಗಳ ಬಗ್ಗೆ ಸ್ಪಂದಿಸುವ ಬಗ್ಗೆ ಮಾತನಾಡಿದ್ರೆ, ಬಿಜೆಪಿ ಲವ್ ಜಿಹಾದ್ ಬಗ್ಗೆ ಮಾತ್ರ ಮಾತನಾಡುತ್ತೆ ಎಂದು ವ್ಯಂಗ್ಯವಾಡಿದರು. ಭೋಪಾಲದ ಲೋಕಸಭಾ ಸದಸ್ಯೆ ಪ್ರಗ್ಯಾ ಸಿಂಗ್ ಶಿವಮೊಗ್ಗಕ್ಕೆ ಬಂದು ಮನೆಯಲ್ಲಿ ತಲವಾರು, ಚಾಕು- ಚೂರಿ ಮೊಣಚು ಮಾಡಿಟ್ಟುಕೊಳ್ಳಿ ಅಂತಾಳೆ. ಮಕ್ಕಳನ್ನು ಭಯೋತ್ಪಾದಕರನ್ನಾಗಿ ಮಾಡ್ತೀರಾ.. ಅಥವಾ ಅವರಿಗೆ ಉತ್ತಮ ವಿದ್ಯಾಭ್ಯಾಸ ನೀಡ್ತೀರಾ ಎಂದು ಜನರು ನಿರ್ಧರಿಸಬೇಕಿದೆ. ಕರಾವಳಿ ಪ್ರದೇಶವನ್ನು ಹಿಂದುತ್ವದ ಲ್ಯಾಬೋರೇಟರಿ ಮಾಡಲಾಗಿದೆ.
ಸಾವರ್ಕರ್ ಕೂಡಾ ತಮ್ಮ ಆತ್ಮಕಥೆಯಲ್ಲಿ ಹಿಂದುತ್ವ ಹಾಗೂ ಹಿಂದು ಧರ್ಮಕ್ಕೆ ಯಾವುದೇ ಸಂಬಂಧವಿಲ್ಲ. ಹಿಂದುತ್ವ ರಾಜಕೀಯ ಘೋಷಣೆ ಎಂದು ಹೇಳಿದ್ದಾರೆ. ಮಹಾತ್ಮಾ ಗಾಂಧಿ, ವಿವೇಕಾನಂದ ಹಾಗೂ ನಾವು ಕಾಂಗ್ರೆಸ್ ಮುಖಂಡರು ಪಾಲಿಸ್ತಿರೋದು ನಿಜವಾದ ಹಿಂದೂ ಧರ್ಮ ಎಂದು ಬಿ.ಕೆ.ಹರಿಪ್ರಸಾದ್ ಹೇಳಿದರು. ಶಿರಸಿ ರಸ್ತೆಯಲ್ಲಿ ಸಾಕಷ್ಟು ಬಾರಿ ಸಾಗಿದ್ದೇನೆ. ಬಹಳಷ್ಟು ಜನರು ತಮ್ಮ ಭಾಷಣದಲ್ಲಿ ನರೇಂದ್ರ ಮೋದಿ ಅಧಿಕಾರಕ್ಕೆ ಬಂದ ಬಳಿಕ ಸ್ವಿಸ್ ಬ್ಯಾಂಕ್‌ನಿಂದ ಕಪ್ಪು ಹಣ ತರ್ತಾರೆ. ಇದರಿಂದ ರಸ್ತೆಗಳಿಗೆ ಚಿನ್ನದ ಲೇಪ ಹಾಕ್ತೇವೆ ಎಂದು ಹೇಳಿದ್ರು. ಅವರು ಹಾಕಿದ ಬಂಗಾರದ ಲೇಪವನ್ನು ಜನರು ಕಿತ್ತುಕೊಂಡು ಹೋಗಿರಬೇಕು.
ಶಾಸಕರಾಗಬೇಕಂದ್ರೂ ಕೋಟಿ ಕೋಟಿ ಸುರಿಬೇಕು ಅಂತಾರೆ. ಬಿಜೆಪಿಯವರು ಜನಸೇವೆ ಮಾಡಲು ಬಂದಿದ್ದಾರಾ ? ಅಥವಾ ವ್ಯಾಪಾರ ಮಾಡಲು ಬಂದಿದ್ದಾರಾ..? ಎಂದು ಟೀಕಿಸಿದರು. ಪಿಎಸ್‌ಐ ನೇಮಕಾತಿ ಹಗರಣ ವಿಚಾರದಲ್ಲಿ 60 ಜನರನ್ನು ಬಂಧಿಸಲಾಗಿತ್ತು. ಮಧ್ಯವರ್ತಿಗಳು 50ರಿಂದ 80 ಲಕ್ಷ ರೂ.ವರೆಗೆ ಲಂಚ ಪಡೆದಿದ್ರು. ಪ್ರಕರಣದಲ್ಲಿ ಜೈಲಿಗೆ ಹೋದವರು ಹೊರಗಡೆ ಬಂದಾಗಿ ಎರಡು ಬೆರಳು ತೋರಿಸಿ ಭ್ರಷ್ಟಾಚಾರದಲ್ಲೂ ಜಯಭೇರಿ ತೋರಿಸ್ತಾರೆ. ಪ್ರಧಾನಿ ನರೇಂದ್ರ ಮೋದಿಯವರು ಗುಜರಾತಿಗೆ ಮಾತ್ರ ಫೇವರ್. ಬ್ಯಾಂಕ್‌ಗಳಿಗೆ ಮೂರು ನಾಮ ಹಾಕಿದ ಶೇ. 99 ಜನರು ಗುಜರಾತಿಗಳು. ನೀವು ಬ್ಯಾಂಕ್ ಮಾಡ್ತೀರಾ, ದುಡ್ಡು ಕೊಡ್ತೀರಾ..
