
ಕೇರಳ, ತಮಿಳುನಾಡಿನ ಬಳಿಕ ಬೆಂಗಳೂರಿಗೆ ಟ್ರಿಬ್ಯೂನಲ್ ಟೀಂ
ಬೆಂಗಳೂರು: ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (PFI) ಈಗ ಬ್ಯಾನ್ (Ban) ಆಗಿದೆ. ಆದ್ರೆ, ಕೇಂದ್ರ ಸರ್ಕಾರದ ಈ ಆದೇಶಕ್ಕೆ ನ್ಯಾಯಾಲಯದ ಟ್ರಿಬ್ಯೂನಲ್ (Tribunal) ಇದೆ. ಇದೀಗ ಟ್ರಿಬ್ಯೂನಲ್ ಟೀಂ ಬೆಂಗಳೂರಿಗೆ (Bengaluru) ಆಗಮಿಸಲಿದೆ.
ಪಿಎಫ್‍ಐ ಒಂದು ಉಗ್ರ ಸಂಘಟನೆ ಇದರಿಂದ ಅಮಾಯಕರು ಜೀವ ಕಳೆದು ಕೊಳ್ಳುತ್ತಿದ್ದಾರೆ. ದೇಶದ ಶಾಂತಿಗೆ ಭಂಗ ಆಗುತ್ತಿದೆ ಅಂತ ಕೇಂದ್ರ ಸರ್ಕಾರ ಪಿಎಫ್‍ಐಗೆ ನಿಷೇಧ ಹೇರಿದೆ. ಆದ್ರೆ, ನಿಷೇಧದ ಬಳಿಕ ಸಂಘಟನೆ ನ್ಯಾಯಾಧೀಕರಣದ ಮೊರೆ ಹೋಗಿ ತಮ್ಮದು ಉಗ್ರ ಸಂಘಟನೆ ಅಲ್ಲ ಅನ್ನೋದಕ್ಕೂ ಅವಕಾಶ ಇದೆ. ಇದಕ್ಕಾಗಿಯೇ ಈಗ ದೇಶಾದ್ಯಂತ ಟ್ರಿಬ್ಯೂನಲ್ ಕೆಲಸ ಮಾಡುತ್ತಿದೆ. ಈಗಾಗಲೇ ಕೇರಳ, ತಮಿಳುನಾಡಿನಲ್ಲಿ ಟ್ರಿಬ್ಯೂನಲ್ ಟೀಂ ಕೆಲಸ ಮುಗಿಸಿ ಕರ್ನಾಟಕಕ್ಕೆ ಬರುತ್ತಿದೆ. ಜ.28ರಿಂದ ಮೂರು ದಿನ ಕರ್ನಾಟಕದಲ್ಲಿ ಕೆಲಸ ಮಾಡಲಿದೆ.

ಬೆಂಗಳೂರಿಗೆ ಟ್ರಿಬ್ಯೂನಲ್ ಟೀಂ:
2016ರಲ್ಲಿ ನಡೆದ ರುದ್ರೇಶ್ ಹತ್ಯೆ ಪ್ರಕರಣ., 2019ರಲ್ಲಿ ಸಂಸದರ ಹತ್ಯೆಗೆ ಸ್ಕೆಚ್, ಕಾರ್ಯಕರ್ತನ ಮೇಲೆ ದಾಳಿ., 2021ರಲ್ಲಿ ನಡೆದ ಡಿಜೆಹಳ್ಳಿ – ಕೆಜೆಹಳ್ಳಿ ಗಲಾಟೆ., 2022ರಲ್ಲಿ ನಡೆದ ಪ್ರವೀಣ್ ನೆಟ್ಟಾರು (Praveen Nettar) ಹತ್ಯೆ ಪ್ರಕರಣಗಳ ಬಗ್ಗೆ ಟ್ರಿಬ್ಯೂನಲ್ ಟೀಂ ಮಾಹಿತಿ ಸಂಗ್ರಹಿಸಲಿದೆ.
ಪಿಎಫ್‍ಐ ಬ್ಯಾನ್ ಆದ ಬಳಿಕ ಟ್ರಿಬ್ಯೂನಲ್ ಮುಂದೆ ಹೋಗಿದೆ. ಹೀಗಾಗಿ ಪರ ವಿರೋಧ ಎರಡಕ್ಕೂ ಅವಕಾಶ ಇದೆ. ಹೀಗಾಗಿ ಪಿಎಫ್‍ಐ ಪರವಾಗಿ ಅರ್ಜಿಯನ್ನು ನೀಡುವವರು ಮಾಹಿತಿಯನ್ನು ನೀಡುವವರು, ನ್ಯಾಯಾಧೀಕರಣ ಮುಂದೆ ಹೋಗಿ ಹೇಳಬಹುದಾಗಿದೆ. ಇದು ಸಾರ್ವಜನಿಕರಿಗೂ ಕೂಡ ಮುಕ್ತವಾಗಲಿದ್ದು ಜನವರಿ 28, 29 ಮತ್ತು 30 ರಂದು ಬೆಂಗಳೂರಿನಲ್ಲಿ ಟ್ರಿಬ್ಯೂನಲ್ ಟೀಂ ಇರಲಿದೆ.
