
ಕಲಬುರಗಿ: ಪಿಎಸ್ಐ ನೇಮಕಾತಿ ಹಗರಣದ (PSI Recruitment Scam) ಪ್ರಮುಖ ಕಿಂಗ್ ಪಿನ್ ರುದ್ರಗೌಡ ಪಾಟೀಲ್ (Rudragowda Patil) ಸಿಐಡಿ ಅಧಿಕಾರಿಗಳನ್ನು ನೂಕಿ ಪರಾರಿಯಾಗಿದ್ದಾನೆ.
ಜಾಮೀನು ಸಿಕ್ಕ ಮೇಲೆ ಸಿಐಡಿ (CID) ವಿಚಾರಣೆಗೆ ರುದ್ರಗೌಡ ಪಾಟೀಲ್ ನಿರಂತರ ಗೈರಾಗಿದ್ದ. ತುಮಕೂರು ಪೊಲೀಸ್ ಠಾಣೆಯಲ್ಲಿ ದಾಖಲಾದ ಪ್ರಕರಣದ ವಿಚಾರಣೆಗಾಗಿ ವಶಕ್ಕೆ ಪಡೆಯಲು ಸಿಐಡಿ ಪೊಲೀಸರು ಮುಂದಾಗಿದ್ದರು.
ಗುರುವಾರ ರಾತ್ರಿ ಕಲಬುರಗಿ ನಗರದ ಅಕ್ಕಮಹಾದೇವಿ ಕಾಲೋನಿಯಲ್ಲಿರುವ ನಿವಾಸಕ್ಕೆ ತೆಳಿದ್ದಾಗ ಸಿಐಡಿ ಪಿಎಸ್ಐ ಆನಂದ್ ಅವರನ್ನು ತಳ್ಳಿ ರುದ್ರಗೌಡ ಪಾಟೀಲ್ ಓಡಿ ಹೋಗಿದ್ದಾನೆ. ಈ ಬಗ್ಗೆ ಅಶೋಕ ನಗರ ಠಾಣೆಯಲ್ಲಿ ಸಿಐಡಿ ಪಿಎಸ್ಆ ಆನಂದ್ ದೂರು ದಾಖಲಿಸಿದ್ದಾರೆ.
ಗುರುವಾರ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ರುದ್ರಗೌಡ ಪಾಟೀಲ್ ಮನೆ ಮೇಲೆ ದಾಳಿ ನಡೆಸಿದ್ದರು. ದಾಳಿ ನಂತರ ಸಿಐಡಿ ಅಧಿಕಾರಿಗಳು ಆತನನ್ನು ವಶಕ್ಕೆ ಪಡೆಯಲು ಮುಂದಾಗಿದ್ದರು.