Hayathtv
  • ಮುಖಪುಟ
  • ಸುದ್ದಿ
    • All
    • ಕರಾವಳಿ
    • ರಾಜ್ಯ
    • ರಾಷ್ಟ್ರೀಯ
    • ವಿದೇಶ

    ಮರು ಎಣಿಕೆಯಲ್ಲಿ ಮಂಜುನಾಥ್ ಗೌಡ ಗೆದ್ರೆ ರಾಜಕೀಯ ಬಿಡುವೆ: ಶಾಸಕ ಕೆವೈ ನಂಜೇಗೌಡ

    ಲಂಚ ತಗೊಂಡಾದ್ಮೇಲೆ ಡಾಕ್ಟ್ರು ನಿನ್ ಹೆಂಡ್ತಿ ಸತ್ತೋದ್ಲು ಅಂದ್ರು: ಪತಿ ಗೋಳಾಟ

    ಲಂಚ ತಗೊಂಡಾದ್ಮೇಲೆ ಡಾಕ್ಟ್ರು ನಿನ್ ಹೆಂಡ್ತಿ ಸತ್ತೋದ್ಲು ಅಂದ್ರು: ಪತಿ ಗೋಳಾಟ

    ಸೌಜನ್ಯ ಮಾವ ವಿಠಲ್‌ಗೌಡ ತೋರಿಸಿದ ಬಂಗ್ಲೆಗುಡ್ಡೆ ಕಾಡಿನಲ್ಲಿ 5 ಅಸ್ಥಿಪಂಜರ ಮೂಳೆ ಪತ್ತೆ!

    ಸೌಜನ್ಯ ಮಾವ ವಿಠಲ್‌ಗೌಡ ತೋರಿಸಿದ ಬಂಗ್ಲೆಗುಡ್ಡೆ ಕಾಡಿನಲ್ಲಿ 5 ಅಸ್ಥಿಪಂಜರ ಮೂಳೆ ಪತ್ತೆ!

    ಯುವತಿ ದೇಹದ ಮೇಲಿನ ಕಪ್ಪು ಚುಕ್ಕೆ ಗುರುತಿಸಿದ AI.. ಫೋಟೋ ಅಪ್​ಲೋಡ್​ ಮಾಡುವಾಗ ಹುಷಾರ್​!

    ವಿಜಯಪುರ| SBI ಬ್ಯಾಂಕ್‌ ದರೋಡೆ – ಪಿಸ್ತೂಲ್‌ ತೋರಿಸಿ 8 ಕೋಟಿ ನಗದು, 50 ಕೆಜಿ ಚಿನ್ನದೊಂದಿಗೆ ಪರಾರಿ

    ಕೆಂಪು ಕಲ್ಲು ಬಗ್ಗೆ ನಿಯಮ ಸಡಿಲಿಕೆ, 25 ಗುತ್ತಿಗೆದಾರರಿಗೆ ಪರವಾನಗಿ, ಕಲ್ಲಿನ ದರ ಇಳಿಯಲಿದೆ ; ಯುಟಿ ಖಾದರ್

    ಕೆಂಪು ಕಲ್ಲು ಬಗ್ಗೆ ನಿಯಮ ಸಡಿಲಿಕೆ, 25 ಗುತ್ತಿಗೆದಾರರಿಗೆ ಪರವಾನಗಿ, ಕಲ್ಲಿನ ದರ ಇಳಿಯಲಿದೆ ; ಯುಟಿ ಖಾದರ್

    ಮಾಲೂರು ಶಾಸಕ ನಂಜೇಗೌಡ ಆಯ್ಕೆ ಅಸಿಂಧು – ಮರು ಮತ ಎಣಿಕೆಗೆ ಹೈಕೋರ್ಟ್ ಆದೇಶ

    ಸ್ವಾತಂತ್ರ್ಯೋತ್ಸವ ಪ್ರಯುಕ್ತ SDPI ಯಿಂದ ಬಿಸಿ ರೋಡ್ ನಲ್ಲಿ ತಿರಂಗಾ ರ್‍ಯಾಲಿ ಹಾಗೂ ಸಾರ್ವಜನಿಕ ಸಭೆ

    ಬಿಜೆಪಿ ಮಾಡಿದ 40% ಕಮಿಷನ್ ಹಗರಣ ಮತ್ತು ಕೋವಿಡ್ ಹಗರಣದ ವಿರುದ್ಧ ಕ್ರಮಕ್ಕೆ ಮುಂದಾಗದ ಕಾಂಗ್ರೆಸ್‌ ಸರಕಾರ ಹೊಂದಾಣಿಕೆ ರಾಜಕಾರಣ ಮಾಡುತ್ತಿದೆ – ಎಸ್‌ಡಿಪಿಐ:

    15 ವರ್ಷಕ್ಕಿಂತ ಹಳೇ ಸರ್ಕಾರಿ ವಾಹನಗಳನ್ನ ಗುಜರಿಗೆ ಹಾಕಿ: ಸರ್ಕಾರ ಆದೇಶ

    • ರಾಜ್ಯ
    • ರಾಷ್ಟ್ರೀಯ
    • ವಿದೇಶ
    • ಚುನಾವಣೆ
  • ಕರಾವಳಿ
  • ಕ್ರೈಮ್
  • ವಿಶೇಷ ಸುದ್ದಿ
  • ಕ್ರೀಡೆ
  • ಮನೋರಂಜನೆ
  • ವೀಡಿಯೋ ಗ್ಯಾಲರೀ
No Result
View All Result

Home ಸುದ್ದಿ ರಾಷ್ಟ್ರೀಯ

ಹಿಜಾಬ್ ಬೇಕೆಂದು ಸಿನಿಮಾ ಬಿಟ್ಟ ನಟಿ; ಅವಮಾನ ಮಾಡುತ್ತಿದ್ದವರಿಗೆ ಉತ್ತರ ಕೊಟ್ಟ ಸನಾ ಖಾನ್

editor tv by editor tv
January 16, 2023
in ರಾಷ್ಟ್ರೀಯ, ಸುದ್ದಿ
0
ಹಿಜಾಬ್ ಬೇಕೆಂದು ಸಿನಿಮಾ ಬಿಟ್ಟ ನಟಿ; ಅವಮಾನ ಮಾಡುತ್ತಿದ್ದವರಿಗೆ ಉತ್ತರ ಕೊಟ್ಟ ಸನಾ ಖಾನ್
1.9k
VIEWS
Share on FacebookShare on TwitterShare on Whatsapp

ಬಿಗ್ ಬಾಸ್ ಫೇಮ್ ಸನಾ ಖಾನ್ 2020ರಲ್ಲಿ ಸಿನಿಮಾರಂಗಕ್ಕೆ ಗುಡ್‌ ಬೈ ಹೇಳಿ ಮನೆ ಮಠ ಜೀವನ ಅಂತ ಮತ್ತೊಂದು ಹಾದಿ ಹಿಡಿದರು. ‘ಮಾನವೀಯತೆಗೆ ಸೇವೆ ಮಾಡಿ ಮತ್ತು ನನ್ನ ಸೃಷ್ಟಿಕರ್ತನ ಆದೇಶವನ್ನು ಅನುಸರಿಸಿ’ ಎಂದು ಹೇಳುವ ಮೂಲಕ ಬಣ್ಣದ ಜಗತ್ತಿನಿಂದ ಹೊರ ನಡೆದರು. ಇತ್ತೀಚಿಗೆ ನಡೆದ ಸಂದರ್ಶನದಲ್ಲಿ ಸನಾ ಖಾನ್ ಈ ನಿರ್ಧಾರ ತೆಗೆದುಕೊಳ್ಳಲು ಕಾರಣವೇನು ಎಂದು ರಿವೀಲ್ ಮಾಡಿದ್ದಾರೆ. ಹಿಜಾಬ್ ಧರಿಸಲು ಚಿತ್ರರಂಗ ಬಿಟ್ಟಿದ್ದು ಸರಿಯೇ ಎಂದು ಅನೇಕರು ಪ್ರಶ್ನೆ ಮಾಡಿದ್ದರು.

‘ನನ್ನ ಹಳೆ ಜೀವನದಲ್ಲಿ ನನ್ನ ಬಳಿ ಹೆಸರಿತ್ತು, ಫೇಮ್‌ ಇತ್ತು ಮತ್ತು ಹಣವಿತ್ತು. ಏನು ಬೇಕಿದ್ದರೂ ಹೇಗೆ ಬೇಕಿದ್ದರೂ ನಾನು ಜೀವನ ರೂಪಿಸಿಕೊಳ್ಳುವ ಅವಕಾಶವಿತ್ತು ಆದರೆ ಒಂದು ವಿಚಾರ ಮಿಸ್ ಮಾಡಿಕೊಂಡಿದ್ದು ಅಂದ್ರೆ ಮನಸ್ಸಿನ ನೆಮ್ಮದಿ. ಯಾಕೆ ನಾನು ಖುಷಿಯಾಗಿಲ್ಲ ಎಂದು ಯೋಚನೆ ಮಾಡಿದಾಗ ಸಿಕ್ಕ ಉತ್ತರವೇ ಇದು. ಈ ಸಮಯ ಎದುರಿಸಲು ತುಂಬಾ ಕಷ್ಟ ಆಗುತ್ತಿತ್ತು ಆದರೆ ಖಿನ್ನತೆಗೆ ಜಾರಿದ ದಿನಗಳಿದೆ. ಆ ನಂತರ ದೇವರೇ ನನಗೆ ಸಣ್ಣ ಸನ್ನೆ ಕೊಟ್ಟರು ಅದನ್ನು ಪಾಲಿಸುತ್ತಿರುವೆ’ ಎಂದು ಸನಾ ಖಾನ್ ಸಂದರ್ಶನದಲ್ಲಿ ಮಾತನಾಡಿದ್ದಾರೆ.

‘2019ರಲ್ಲಿ ರಂಜಾನ್ ಸಮಯದಲ್ಲಿ ನನ್ನ ಕನಸಿನಲ್ಲಿ ಪದೇ ಪದೇ ಸಮಾಧಿ ಬರುತ್ತಿತ್ತು. ನಾನು ಸುಡುವ, ಉರಿಯುತ್ತಿರುವ ಸಮಾಧಿಯನ್ನು ನೋಡುತ್ತೇನೆ ಆ ಸಮಾಧಿಯಲ್ಲಿ ನಾನೇ ಮಲಗಿರುತ್ತಿದ್ದೆ. ಖಾಲಿ ಸಮಾಧಿ ನೋಡಿದ್ದರೂ ಅದರಲ್ಲೂ ನಾನೇ ಇರುತ್ತಿದ್ದೆ. ಇದೆಲ್ಲಾ ಆ ದೇವರೆ ನನಗೆ ಕೊಡುತ್ತಿರುವ ಸನ್ನೆಗಳು ಎಂದು ನಾನು ಬದಲಾಗಿರುವೆ. ಈ ವಿಚಾರಗಳ ಬಗ್ಗೆ ನನ್ನಲ್ಲಿ ತುಂಬಾ ಆತಂಕಗಳಿತ್ತು. ನನ್ನಲ್ಲಿ ಆಗುತ್ತಿದ್ದ ಬದಲಾವಣೆಗಳು ನನಗೆ ತಿಳಿದು ಬರುತ್ತಿತ್ತು ನಾನೇ ಗಮನಿಸುತ್ತಿದ್ದೆ. ಅದೆಷ್ಟೋ ಯೂಟ್ಯೂಬ್‌ ಪ್ರೇರಣೆ ಭಾಷಣಗಳನ್ನು ಕೇಳಿಸಿಕೊಳ್ಳುತ್ತಿದ್ದೆ. ಒಂದು ರಾತ್ರಿ ತುಂಬಾ ಸುಂದರವಾಗಿರುವ ಪುಸ್ತಕವನ್ನು ಓದುತ್ತಿದ್ದೆ ಇದೆಲ್ಲಾ ಸೇರಿಕೊಂಡು ನನ್ನಲ್ಲಿ ಬದಲಾವಣೆ ಆಗಿದ್ದು’ ಎಂದಿದ್ದಾರೆ.

‘ಒಂದು ಪುಸ್ತಕದಲ್ಲಿ ಮೆಸೇಜ್ ಇತ್ತು… you don’t want your last day to be your first day of wearing hijab ಎಂದು. ಈ ಸಲುಗಳು ನನ್ನ ಮನಸ್ಸಿ ಮುಟ್ಟಿತ್ತು. ಮರು ದಿನ ನಾನು ಎದ್ದು ನನ್ನ ಹುಟ್ಟುಹಬ್ಬವನ್ನು ಆಚರಿಸಿಕೊಂಡೆ. ನಾನು ಮನೆಯಲ್ಲಿ ಬಹಳಷ್ಟು ಸ್ಕಾರ್ಫ್‌ಗಳನ್ನು ಹೊಂದಿದ್ದೆ. ಮೊದಲೇ ತಂದು ಇಟ್ಟಿದ್ದೆ. ಕ್ಯಾಪ್ ಒಳಗೆ ಧರಿಸಿ ಸ್ಕಾರ್ಫ್‌ ಧರಿಸಿ ಇನ್ನು ಮುಂದೆ ಇದನ್ನು ನಾನು ತೆಗೆಯುವುದಿಲ್ಲ ಎಂದು ತೀರ್ಮಾನ ಮಾಡಿದೆ’ ಎಂದು ಸನಾ ಹೇಳಿದ್ದಾರೆ.

ಬಣ್ಣದ ಪ್ರಪಂಚದಿಂದ ದೂರ ಉಳಿದ ಮೇಲೆ ಸನಾ ಖಾನ್ ಬ್ರೇಕಪ್‌ ಎದುರಿಸುತ್ತಾರೆ. ಆನಂತರ ಅನಸ್ ಸೈಯದ್ ಜೊತೆ ವೈವಾಹಿಕ ಜೀವನಕ್ಕೆ ಕಾಲಿಟ್ಟರು. ಬ್ಯೂಟಿ ಪ್ರಾಡೆಕ್ಟ್‌ ಮಾಲೀಕರು ಅನಸ್ ಸೈಯದ್.  

Previous Post

ಉಡುಪಿ: ಬುದ್ದಿವಂತರ ಜಿಲ್ಲೆಯಲ್ಲಿಯೇ ಶಿಕ್ಷಕರ ಕೊರತೆ; ಬಾಗಿಲು ಮುಚ್ಚಿವೆ ಅನೇಕ ಶಾಲೆಗಳು

Next Post

ಮಹಿಳೆಯರಿಗೆ ಕಾಂಗ್ರೆಸ್‌ ಬಂಪರ್‌ ಗಿಫ್ಟ್‌: ಮಾಸಿಕ 2 ಸಾವಿರ ರೂ. ಸಹಾಯಧನ

Next Post
ಮಹಿಳೆಯರಿಗೆ ಕಾಂಗ್ರೆಸ್‌ ಬಂಪರ್‌ ಗಿಫ್ಟ್‌: ಮಾಸಿಕ 2 ಸಾವಿರ ರೂ. ಸಹಾಯಧನ

ಮಹಿಳೆಯರಿಗೆ ಕಾಂಗ್ರೆಸ್‌ ಬಂಪರ್‌ ಗಿಫ್ಟ್‌: ಮಾಸಿಕ 2 ಸಾವಿರ ರೂ. ಸಹಾಯಧನ

ನಮ್ಮ ಬಗ್ಗೆ

ಹಯಾತ್ TV ರಾಜ್ಯದ ಹೆಸರಾಂತ ವಾರ್ತಾ ವೇದಿಕೆಗಳಲ್ಲಿ ಒಂದಾಗಿದೆ. ಇದರಲ್ಲಿ ರಾಜ್ಯ, ದೇಶ, ವಿದೇಶ, ಕ್ರೀಡೆ, ಸಿನಿಮಾ, ಮನರಂಜನೆ ಸೇರಿ ಹತ್ತಾರು ಸುದ್ದಿ ಗಳನ್ನು ಪ್ರತಿದಿನ ಹಾಕಲಾಗುತ್ತದೆ. ದೇಶ ಬದಲಾಗುತ್ತಿದೆ, ನ್ಯೂಸ್ ಅನ್ನು ಓದುವ ವಿಧಾನ ವೂ ಬದಲಾಗಲಿದೆ. ಈ ಬದಲಾವಣೆಯ ಬೆನ್ನಲ್ಲೇ ನಾವಿದ್ದೇವೆ.

ಜಾಹೀರಾತು ಮತ್ತು ಸುದ್ದಿಗಾಗಿ ಸಂಪರ್ಕಿಸಿ

Hayath Tv Media network
Mangalore
Chief Editor Ashraf Kammaje – 8861948115

Print Media

9483267000

  • Contact Us
  • HayathTV
  • Privacy Policy
  • Terms and Conditions

© 2025 HAYATH TV NEWS.

No Result
View All Result
  • Contact Us
  • HayathTV
  • Privacy Policy
  • Terms and Conditions

© 2025 HAYATH TV NEWS.