
ಕರಾಯ ಅಲ್ ಬಿರ್ರ್ ಸ್ಕೂಲ್ ನಲ್ಲಿ ನಡೆದ ದ.ಕ. ಜಿಲ್ಲೆಯ ಅಲ್ ಬಿರ್ರ್ ಶಾಲೆಗಳ ಕಿಡ್ಸ್ ಫೆಸ್ಟ್ ಫಲಿತಾಂಶ ಹೊರಬಿದ್ದಿದ್ದು
ಇದೇ ಮೊದಲ ಬಾರಿಗೆ ನಡೆದ ಪ್ರಾಥಮಿಕ ಶಾಲಾ ವಿಭಾಗದ ಕಿಡ್ಸ್ ಫೆಸ್ಟ್ ನಲ್ಲಿ ಕೈಕಂಬ ಶಾಲೆಯು ಚೊಚ್ಚಲ ಚಾಂಪಿಯನ್ ಪಟ್ಟ ಅಲಂಕರಿಸಿದೆ. ಅದೇ ರೀತಿ ಪೂರ್ವ ಪ್ರಾಥಮಿಕ ವಿಭಾಗ ದಲ್ಲಿ ಕೂಡ ರನ್ನರ್ ಅಪ್ ಪಡೆದು ಮಿಂಚಿದೆ

ಅದಲ್ಲದೇ ವೈವಕ್ತಿಕ ಚಾಂಪಿಯನ್ ನಲ್ಲಿ ಸಂಸ್ಥೆಯ ವಿದ್ಯಾರ್ಥಿನಿ ಫಾತಿಮಾ ಝಹ್ರಾ
ಕಲಾ ತಿಲಕ ಪಟ್ಟ ಅಲಂಕರಿಸಿದ್ದಾಳೆ.ವಿದ್ಯಾರ್ಥಿಗಳ ಸಾಧನೆಗೆ ಸಂಸ್ಥೆಯ ಆಡಳಿತ ಸಮಿತಿಯಾದ ಸಾಬೀಲ್ ಉಲ್ ಹುದಾ ಎಜುಕೇಷನ್ ಸೊಸೈಟಿ ವಿದ್ಯಾರ್ಥಿಗಳನ್ನು ಮತ್ತು ಶಿಕ್ಷಕಿಯರಿಗೆ ಅಭಿನಂದನೆ ಸಲ್ಲಿಸಿದೆ
ಹಾಗೂ ಜಮಿಯಾತುಲ್ ಮುಅಲ್ಲಿಮಿನ್ ಗುರುಪುರ ರೇಂಜ್ ಅಧ್ಯಕ್ಷರಾದ ಜಮಾಲುದ್ದೀನ್ ದಾರಿಮಿ ವಿದ್ಯಾರ್ಥಿಗಳ ಸಾಧನೆಗೆ ಪ್ರಶಂಸೆ ವ್ಯಕ್ತಪಡಿಸಿದ್ದಾರೆ
ಎಂದು ಪ್ರಕಟಣೆ ಯಲ್ಲಿ ತಿಳಿಸಿದ್ದಾರೆ.