

ಬೆಂಗಳೂರು: ಕರ್ನಾಟಕದ ಕರಾವಳಿ ಭಾಗದಲ್ಲಿ ಹಿಜಾಬ್ನಿಂದ(Hijab) ಶುರುವಾದ ಧರ್ಮ ದಂಗಲ್ ನಿಲ್ಲುವ ಸೂಚನೆಯೇ ನೀಡುತ್ತಿಲ್ಲ. ಒಂದಿಲೊಂದು ವಿಚಾರದಲ್ಲಿ ರಾಜ್ಯ ಸದ್ದು ಮಾಡುತ್ತಿದೆ. ಸದ್ಯ ಶಾಲೆಗಳಲ್ಲಿ ಸಾವರ್ಕರ್ V/S ಟಿಪ್ಪು ಸುಲ್ತಾನ್(Savarkar Vs Tipu Sultan) ಎಂಬ ಧರ್ಮ ದಂಗಲ್ ಶುರುವಾಗಿದೆ. ಶಾಲೆಗಳಲ್ಲಿ ಸಾವರ್ಕರ್ ಫೋಟೋ ಇಡುವ ಬಗ್ಗೆ ಶಿಕ್ಷಣ ಸಚಿವರು ನೀಡಿದ ಹೇಳಿಕೆ ಬಳಿಕ ಹೇಡಿ ಸಾರ್ವಕರ್ ಸ್ವಾಂತತ್ರ್ಯ ಹೋರಾಟಗಾರನೇ?ಟಿಪ್ಪು ಸುಲ್ತಾನ್ ಸ್ವಾತಂತ್ರ್ಯ ಹೋರಾಟಗಾರ ಅಲ್ವಾ? ಎಂಬ ಕೂಗು ಕೇಳಿ ಬರುತ್ತಿದೆ.
ಇತ್ತೀಚೆಗೆ ಬೆಳಗಾವಿಯ ಜೈಲಿನಲ್ಲಿ ಸಾವರ್ಕರ್ ಫೋಟೋ ಉದ್ಘಾಟಿಸಿದ ಶಿಕ್ಷಣ ಸಚಿವ ಬಿಸಿ ನಾಗೇಶ್ ಶಾಲೆಗಳಲ್ಲಿ ಸ್ವಾತಂತ್ರ್ಯ ಹೋರಾಟಗಾರರ ಫೋಟೋ ಮಾತ್ರ ಇಡಬೇಕು ಎಂದು ಪ್ರತಿಕ್ರಿಯಿಸಿದ್ದರು.
ಶಾಲೆಗಳಲ್ಲಿ ಟಿಪ್ಪು ಫೋಟೋ ಅಳವಡಿಕೆಗೆ ಮುಸ್ಲಿಂ ಮುಖಂಡರ ಡಿಮ್ಯಾಂಡ್
ಮುಸ್ಲಿಂ ಮುಖಂಡರು ಶಾಲೆಗಳಲ್ಲಿ ಟಿಪ್ಪು ಸುಲ್ತಾನ್ ಫೋಟೋ ಕೂಡಾ ಹಾಕುವಂತೆ ಮನವಿ ಮಾಡಿದ್ದಾರೆ. . ಶಾಲೆಗಳಲ್ಲಿ ಎಸ್ಡಿಎಮ್ಸಿ ಹಾಗೂ ಶಿಕ್ಷಕರು ನಿಶ್ಚಯ ಮಾಡಿ ಸ್ವಾತಂತ್ರ್ಯ ಹೋರಾಟಗಾರರ ಫೋಟೋ ಹಾಕಿದ್ರೆ ತುಂಬಾ ಸಂತೋಷ.
ಶಿಕ್ಷಣ ಸಚಿವ ಬಿಸಿ ನಾಗೇಶ್ ಹೇಳಿಕೆ ವಿರುದ್ಧ ಮುಸ್ಲಿಂ ನಾಯಕರು ಗರಂ
ಶಿಕ್ಷಣ ಸಚಿವ ಬಿಸಿ ನಾಗೇಶ್ ಶಾಲೆಗಳಲ್ಲಿ ಟಿಪ್ಪು ಪೋಟೋ ಅಳವಡಿಕೆ ಬೇಡ ಎಂಬ ಹೇಳಿಕೆಗೆ ಮುಸ್ಲಿಂ ನಾಯಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮುಸ್ಲಿಂ ನಾಯಕ ಅಬ್ದುಲ್ ರಜಾಕ್ ಸಚಿವರ ವಿರುದ್ಧ ಆಕ್ರೋಶ ಹೊರ ಹಾಕಿದ್ದಾರೆ. ಟಿಪ್ಪು ಅಪ್ಪಟ ಸ್ವಾತಂತ್ರ್ಯ ಹೋರಾಟಗಾರ. ಸಾರ್ವಕರ್ ಒಬ್ಬ ಗುಲಾಮ. ಬ್ರಿಟಿಷರಿಗೆ ಕ್ಷಮಾರ್ಪಣೆ ಪತ್ರ ಬರೆದ ಗುಲಾಮ. ಟಿಪ್ಪು ಸ್ವಾಂತತ್ರ್ಯಕ್ಕಾಗಿ ಹೋರಾಟ ಮಾಡಿದವರು. ಶಾಲೆಗಳಲ್ಲಿ ಟಿಪ್ಪು ಪೋಟೋ ಹಾಕಬೇಕು ಸಾರ್ವಕರ್ ಪೋಟೋ ಅಲ್ಲ. ಶಾಲೆಗಳಲ್ಲಿ ಸಾರ್ವಕರ್ ಪೋಟೋ ಹಾಕಿದ್ರೆ ಬಿಡ್ತೀವಾ? ಪೋಟೋ ಕಿತ್ತು ಹಾಕುತ್ತೇವೆ ಎಂದು ಅಬ್ದುಲ್ ರಜಾಕ್ ಎಚ್ಚರಿಕೆ ನೀಡಿದ್ದಾರೆ.
