Hayathtv
  • ಮುಖಪುಟ
  • ಸುದ್ದಿ
    • All
    • ಕರಾವಳಿ
    • ರಾಜ್ಯ
    • ರಾಷ್ಟ್ರೀಯ
    • ವಿದೇಶ
    ಸ್ಮಗ್ಲಿಂಗ್ ಪ್ರಕರಣ: ಸ್ಟಾರ್ ನಟ ದುಲ್ಕರ್ ಸಲ್ಮಾನ್, ಪೃಥ್ವಿರಾಜ್ ಮನೆ ಮೇಲೆ ದಾಳಿ

    ಸ್ಮಗ್ಲಿಂಗ್ ಪ್ರಕರಣ: ಸ್ಟಾರ್ ನಟ ದುಲ್ಕರ್ ಸಲ್ಮಾನ್, ಪೃಥ್ವಿರಾಜ್ ಮನೆ ಮೇಲೆ ದಾಳಿ

    ಗೋಮಾಂಸ ಸಾಗಾಟ ಆರೋಪ.. ಬೆಳಗಾವಿಯಲ್ಲಿ ಲಾರಿಗೆ ಬೆಂಕಿ ಹಚ್ಚಿ ಆಕ್ರೋಶ

    ವಿಮಾನದ ಲ್ಯಾಂಡಿಂಗ್ ಗೇರ್ ಬಳಿ ಅಡಗಿ 2 ಗಂಟೆ ಪ್ರಯಾಣಿಸಿ ಭಾರತಕ್ಕೆ ಬಂದ ಅಫ್ಘಾನ್‌ ಬಾಲಕ!

    ಧರ್ಮಸ್ಥಳ ಪ್ರಕರಣ: ತಿಮರೋಡಿ-ಚಿನ್ನಯ್ಯ ಸಂಭಾಷಣೆಯ 8ನೇ ವಿಡಿಯೋ ಬಿಡುಗಡೆ

    ಗಣೇಶನಿಗೆ ಚಪ್ಪಲಿ ಹಾರ: ಬೇಲೂರಿನಲ್ಲಿ ಕೋಲಾಹಲ ಎಬ್ಬಿಸಿದ್ದ ಮಹಿಳೆ ಲೀಲಮ್ಮ ಬಂಧನ

    ಗಣೇಶನಿಗೆ ಚಪ್ಪಲಿ ಹಾರ: ಬೇಲೂರಿನಲ್ಲಿ ಕೋಲಾಹಲ ಎಬ್ಬಿಸಿದ್ದ ಮಹಿಳೆ ಲೀಲಮ್ಮ ಬಂಧನ

    PM Modi on GST: ನಾಳೆಯಿಂದ ದೇಶದ ಜನರಿಗೆ ಉಳಿತಾಯ ಉತ್ಸವ: ಹೊಸ ಜಿಎಸ್​ಟಿ ಸುಧಾರಣೆ ಬಗ್ಗೆ ಮೋದಿ

    PM Modi on GST: ನಾಳೆಯಿಂದ ದೇಶದ ಜನರಿಗೆ ಉಳಿತಾಯ ಉತ್ಸವ: ಹೊಸ ಜಿಎಸ್​ಟಿ ಸುಧಾರಣೆ ಬಗ್ಗೆ ಮೋದಿ

    Breaking: ಸಂಜೆ 5 ಗಂಟೆಗೆ ಪ್ರಧಾನಿ ಮೋದಿ ಭಾಷಣ.. ಬಿಗ್​​ ಅನೌನ್ಸ್​ಮೆಂಟ್​ ನಿರೀಕ್ಷೆ

    ಹಿಂದೂ ಕ್ರೈಸ್ತಗೆ ಕೊಕ್ – ಮತಾಂತರ ಆದವರಿಗೆ ಮೂಲ ಜಾತಿ ಅನ್ವಯ ಆಗಲ್ಲ

    ನಾಳೆಯಿಂದಲೇ ಹಿಂದುಳಿದ ಆಯೋಗದಿಂದ ಸಮೀಕ್ಷೆ – 60 ಪ್ರಶ್ನೆಗಳಿಗೆ ಉತ್ತರ ಪಡೆಯಲಿರೋ ಸರ್ವೇಯರ್ಸ್

    • ರಾಜ್ಯ
    • ರಾಷ್ಟ್ರೀಯ
    • ವಿದೇಶ
    • ಚುನಾವಣೆ
  • ಕರಾವಳಿ
  • ಕ್ರೈಮ್
  • ವಿಶೇಷ ಸುದ್ದಿ
  • ಕ್ರೀಡೆ
  • ಮನೋರಂಜನೆ
  • ವೀಡಿಯೋ ಗ್ಯಾಲರೀ
No Result
View All Result

Home ಸುದ್ದಿ ರಾಜ್ಯ

ಸಾಲದ ಹಣಕ್ಕಾಗಿ ಚಿತ್ರಹಿಂಸೆ, ಕಿಡ್ನಾಪ್, ಕೊಲೆ – 9 ತಿಂಗಳ ಬಳಿಕ ಚಾರ್ಮಾಡಿಯಲ್ಲಿ ಯುವಕನ ಶವಕ್ಕಾಗಿ ಶೋಧ

editor tv by editor tv
January 4, 2023
in ರಾಜ್ಯ, ಸುದ್ದಿ
0
ಸಾಲದ ಹಣಕ್ಕಾಗಿ ಚಿತ್ರಹಿಂಸೆ, ಕಿಡ್ನಾಪ್, ಕೊಲೆ – 9 ತಿಂಗಳ ಬಳಿಕ ಚಾರ್ಮಾಡಿಯಲ್ಲಿ ಯುವಕನ ಶವಕ್ಕಾಗಿ ಶೋಧ
1.9k
VIEWS
Share on FacebookShare on TwitterShare on Whatsapp

ಬೆಂಗಳೂರು: ಕೋಣನ ಕುಂಟೆ ನಿವಾಸಿ ಶರತ್ (Sharat Murder Case) ಕೊಲೆ ಪ್ರಕರಣವು ಕಬ್ಬನ್ ಪಾರ್ಕ್ ಪೊಲೀಸರಿಗೆ ತಲೆನೋವಾಗಿ ಪರಿಣಮಿಸಿದೆ. ಕಳೆದ ಎರಡು ದಿನಗಳಿಂದ ಚಾರ್ಮಾಡಿ ಘಾಟ್‍ (Charmadi Ghat) ನಲ್ಲಿ ಶರತ್ ಮೃತದೇಹಕ್ಕಾಗಿ ತೀವ್ರ ಹುಡುಕಾಟ ನಡೆಯುತ್ತಿದೆ. ಕಬ್ಬನ್ ಪಾರ್ಕ್ ಪೊಲೀಸರು ಪ್ರಮುಖ ಆರೋಪಿಗಳಾದ ಛಲಪತಿ, ಶರತ್, ಜೊತೆಗೆ ಕರೆದುಕೊಂಡು ಸ್ಥಳಕ್ಕೆ ಹೋಗಿದ್ದಾರೆ.

ಕೊಲೆ ಆರೋಪಿಗಳು ದಿನಕ್ಕೊಂದು ಜಾಗ ತೋರಿಸುತ್ತಿದ್ದಾರೆ. ಚಾರ್ಮಾಡಿ ಘಾಟ್ ನಲ್ಲಿ ಆಳವಾದ ಕಂದಕಗಳು, ದಟ್ಟವಾದ ಪೂದೆಗಳ ಜಾಗಗಳನ್ನು ತೋರಿಸಿದ್ದಾರೆ. ಹೀಗಾಗಿ ಎಲ್ಲಾ ಕಡೆಗಳಲ್ಲಿ ಹುಡುಕಾಟ ನಡೆಸಿದರೂ ಶರತ್ ಮೃತದೇಹ ಮಾತ್ರ ಸಿಗುತ್ತಿಲ್ಲ. ತಾವು ತೋರಿಸಿದ ಕಡೆ ಶವ ಸಿಗದೇ ಇದ್ದಾಗ, ಮತ್ತೊಂದು ಜಾಗ ಇರಬಹುದು ಎನ್ನುತ್ತಿದ್ದಾರೆ. ಹೀಗಾಗಿ ಆರೋಪಿಗಳು ಹೇಳಿದ ಜಾಗಗಳಲ್ಲಿ ಪೊಲೀಸರ ತಂಡಗಳು ತೀವ್ರ ಹುಡುಕಾಟ ನಡೆಸುತ್ತಿವೆ. ಎಷ್ಟೇ ಹುಡುಕಾಟ ನಡೆಸಿದರೂ ಮೃತದೇಹದ ಸಣ್ಣ ಕುರುಹು ಸಹ ಸಿಗದಿರುವುದರಿಂದ ಪೊಲೀಸರು ಕಂಗಾಲಾಗಿದ್ದಾರೆ.

ಏನಿದು ಘಟನೆ..?: ಹಣದ ವಿಚಾರಕ್ಕೆ ಕಳೆದ ಒಂಬತ್ತು ತಿಂಗಳ ಹಿಂದೆ ಆರೋಪಿಗಳು ಶರತ್ ನನ್ನ ಕಿಡ್ನ್ಯಾಪ್ ಮಾಡಿ ಕೊಲೆ ಮಾಡಿದ್ದರು. ನಂತರ ಚಾರ್ಮಾಡಿ ಘಾಟ್ ನಲ್ಲಿ ಮೃತದೇಹ ಎಸೆದಿದ್ದರು. ಇದೀಗ ಕೊಲೆ ನಡೆದು 6 ತಿಂಗಳ ನಂತ್ರ ಪ್ರಕರಣ ಬೆಳಕಿಗೆ ಬಂದಿದೆ. ಸಾಲ ಪಡೆದು ಹಿಂದಿರುಗಿಸದೆ ಶರತ್ ಓಡಾಡುತ್ತಿದ್ದರು. ಸಾಲ ಕೊಟ್ಟಿಲ್ಲ ಅನ್ನೋ ಕಾರಣಕ್ಕೆ ಶರತ್ ನನ್ನ 6 ತಿಂಗಳ ಹಿಂದೆಯೇ ಕಿಡ್ನಾಪ್ ಮಾಡಿದ್ದರು. ಬಳಿಕ ಚಿಕ್ಕಬಳ್ಳಾಪುರಕ್ಕೆ ಕರೆದುಕೊಂಡು ಹೋಗಿ ಚಿತ್ರಹಿಂಸೆ ಕೊಟ್ಟು ಕೊಂದಿರುವುದು ಬೆಳಕಿಗೆ ಬಂದಿದೆ. ಶರತ್‍ನನ್ನ ಅರೆ ನಗ್ನಗೊಳಿಸಿ ಕಟ್ಟಿಹಾಕಿ ಮನಸ್ಸೋ ಇಚ್ಛೆ ಥಳಿಸಿರೋ ವೀಡಿಯೋಗಳು ಕೂಡ ಲಭ್ಯವಾಗಿದೆ.

ಕೊಲೆಯಾಗಿ ತಿಂಗಳು ಕಳೆದ್ರೂ ಯಾರಿಗೂ ಗೊತ್ತಿರಲಿಲ್ಲ. ಅಲ್ಲದೆ ಕೊಲೆಯಾದವನ ಮೊಬೈಲ್‍ (Mobile) ನಿಂದಲೇ ಪೋಷಕರಿಗೆ ಸಂದೇಶ ರವಾನಿಸಲಾಗಿದೆ. ನಾನು ದುಡಿಯಲು ಹೋಗುತ್ತಿದ್ದೇನೆ ಹುಡುಕಬೇಡಿ ಎಂದು ಆರೋಪಿಗಳೇ ಶರತ್ ಪೋಷಕರಿಗೆ ಮೆಸೇಜ್ ಮಾಡಿದ್ದರು. ಬಳಿಕ ಮೊಬೈಲ್ ಅನ್ನು ಲಾರಿ (Lorry) ಮೇಲೆ ಎಸೆದಿದ್ದರು. ಈ ಲಾರಿ ಮೈಸೂರು ಮಾರ್ಗವಾಗಿ ಸಾಗಿ ಹೊರರಾಜ್ಯಕ್ಕೆ ಪ್ರಯಾಣ ಬೆಳೆಸಿದೆ.

ಇತ್ತ ಮೊಬೈಲ್ ಸ್ವಿಚ್ ಆಫ್ ಆದ ನಂತರ ಪೋಷಕರಿಗೆ ಶರತ್ ಸಂಪರ್ಕವೇ ಇಲ್ಲ. ತನ್ನ ಮಗ ದುಡಿಮೆಗಾಗಿ ಹೊರರಾಜ್ಯದಲ್ಲಿದ್ದಾನೆಂಬ ನಂಬಿಕೆಯಲ್ಲಿದ್ದ ಪೋಷಕರಿಗೆ ವೀಡಿಯೋಗಳು ದೊರೆತಾಗ ಆಕಾಶವೇ ಕಳಚಿ ಬಿದ್ದಂತಾಗಿದೆ. ಕೂಡಲೇ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆ (Cubbon Park Police Station) ಯಲ್ಲಿ ದೂರು ನೀಡಿದ್ದರು. ಈ ಸಂಬಂಧ ಕೇಸ್ ದಾಖಲಿಸಿಕೊಂಡು ತನಿಖೆ ಮಾಡಿದಾಗ ಕೊಲೆ ಆಗಿರೋದು ಬೆಳಕಿಗೆ ಬಂದಿದೆ.

ಚಿಕ್ಕಬಳ್ಳಾಪುರ (Chikkaballapur) ಮೂಲದ ಶ್ರವಣ್ ಈ ಕೊಲೆ ಮಾಡಿದ ಆರೋಪಿಯಾಗಿದ್ದು, ಈತ ಕನ್ನಡಪರ ಸಂಘಟನೆಯೊಂದರ ಮುಖಂಡನ ಮಗ. ಆನಂತರ ಕೊಲೆ ತನಿಖೆಯ ಆಳಕ್ಕಿಳಿದ ಪೊಲೀಸರಿಗೆ ಶಾಕ್ ಆಗಿದೆ. ಈ ಕೊಲೆ ರಹಸ್ಯ ದೃಶ್ಯ ಸಿನಿಮಾವನ್ನೂ ಮೀರಿಸುವಂತಿದೆ. ತನಿಖೆಗೆ ಮುಂದಾದ ಪೊಲೀಸರಿಗೆ ಸಿಕ್ಕ ವಿವರಗಳೇ ರೋಚಕವಾಗಿದೆ. ಕೊಲೆಯಾದ ವಿಷಯ ತಿಳಿಯುತ್ತಿದಂತೆ 5 ಮಂದಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಯಿತು.

ಕಬ್ಬನ್ ಪಾರ್ಕ್ ಪೊಲೀಸರು ವಿಚಾರಣೆ ನಡೆಸಿದಾಗ ಸರ್ಕಾರಿ ಯೋಜನೆಗಳಲ್ಲಿ ಕಾರು ಕೊಡಿಸೋದಾಗಿ ವಂಚನೆ ಮಾಡಿದ್ದ ಆರೋಪ ಕೊಲೆಯಾದ ಶರತ್ ಮೇಲಿದೆ. ಹಲವು ಮಂದಿಯಿಂದ ಹಣ ಪಡೆದು ವಂಚಿಸಿದ್ದ ಆರೋಪವೂ ಕೇಳಿ ಬಂದಿದೆ. ಆರೋಪದ ಮೇಲೆ ಕಿಡ್ನಾಪ್ ಮಾಡಿ ಆರೋಪಿಗಳು ಹತ್ಯೆ ಮಾಡಿರುವುದಾಗಿ ಬಯಲಾಗಿದೆ. ಸದ್ಯ ಪ್ರಕರಣ ಸಂಬಂಧ ಪೊಲೀಸರು ಇದುವರೆಗೆ ಒಟ್ಟು 8 ಮಂದಿಯನ್ನು ಬಂಧಿಸಿದ್ದಾರೆ. ಇಂದು ಒಬಳೇಶ್, ನವೀನ್ ಸಂಕೇತ್ , ಗೋವಿಂದ್ ಮತ್ತು ಉದಯ್ ರಾಜ್ ಎಂಬ ಐವರನ್ನು ಬಂಧಿಸಲಾಗಿದೆ.

Previous Post

ವಿಧಾನಸೌಧ ಗೋಡೆಗಳು ಪಿಸುಗುಡುತ್ತಿವೆ ಬಿಜೆಪಿ 40 ಪೆರ್ಸೆಂಟ್ ಸರ್ಕಾರ ಎಂದು, ಈಶ್ವರಪ್ಪಗೆ ಕ್ಲಿನ್‌ಚಿಟ್ ಸಿಕ್ಕಂತೆ ಲಿಂಬಾವಳಿಗೆ ಸಿಗಬಾರದು -ಸಿದ್ದರಾಮಯ್ಯ

Next Post

ಉತ್ತರಾಖಂಡದಲ್ಲಿ 4,000 ಮನೆಗಳ ತೆರವು ವಿರುದ್ಧ ಅರ್ಜಿ: ನಾಳೆ ಸುಪ್ರೀಂ ಕೋರ್ಟ್‌ನಲ್ಲಿ ವಿಚಾರಣೆ

Next Post
ಉತ್ತರಾಖಂಡದಲ್ಲಿ 4,000 ಮನೆಗಳ ತೆರವು ವಿರುದ್ಧ ಅರ್ಜಿ: ನಾಳೆ ಸುಪ್ರೀಂ ಕೋರ್ಟ್‌ನಲ್ಲಿ ವಿಚಾರಣೆ

ಉತ್ತರಾಖಂಡದಲ್ಲಿ 4,000 ಮನೆಗಳ ತೆರವು ವಿರುದ್ಧ ಅರ್ಜಿ: ನಾಳೆ ಸುಪ್ರೀಂ ಕೋರ್ಟ್‌ನಲ್ಲಿ ವಿಚಾರಣೆ

ನಮ್ಮ ಬಗ್ಗೆ

ಹಯಾತ್ TV ರಾಜ್ಯದ ಹೆಸರಾಂತ ವಾರ್ತಾ ವೇದಿಕೆಗಳಲ್ಲಿ ಒಂದಾಗಿದೆ. ಇದರಲ್ಲಿ ರಾಜ್ಯ, ದೇಶ, ವಿದೇಶ, ಕ್ರೀಡೆ, ಸಿನಿಮಾ, ಮನರಂಜನೆ ಸೇರಿ ಹತ್ತಾರು ಸುದ್ದಿ ಗಳನ್ನು ಪ್ರತಿದಿನ ಹಾಕಲಾಗುತ್ತದೆ. ದೇಶ ಬದಲಾಗುತ್ತಿದೆ, ನ್ಯೂಸ್ ಅನ್ನು ಓದುವ ವಿಧಾನ ವೂ ಬದಲಾಗಲಿದೆ. ಈ ಬದಲಾವಣೆಯ ಬೆನ್ನಲ್ಲೇ ನಾವಿದ್ದೇವೆ.

ಜಾಹೀರಾತು ಮತ್ತು ಸುದ್ದಿಗಾಗಿ ಸಂಪರ್ಕಿಸಿ

Hayath Tv Media network
Mangalore
Chief Editor Ashraf Kammaje – 8861948115

Print Media

9483267000

  • Contact Us
  • HayathTV
  • Privacy Policy
  • Terms and Conditions

© 2025 HAYATH TV NEWS.

No Result
View All Result
  • Contact Us
  • HayathTV
  • Privacy Policy
  • Terms and Conditions

© 2025 HAYATH TV NEWS.