
ದಣಿವರಿಯದ ಸಮುದಾಯ ಸೇವಕ ನೌಶಾದ್ ಸೂರಲ್ಪಾಡಿ ನಿದನಕ್ಕೆ SDPI ಸಂತಾಪ
ಮಂಗಳೂರು ಜ 01: ಸಮುದಾಯದ ಬಡ ಜನರ ಸೇವೆಗಾಗಿ ತನ್ನ ಬದುಕನ್ನು ಮುಡಿಪಾಗಿಟ್ಟ , ಹಲವಾರು ಧಾರ್ಮಿಕ ಸಂಘ ಸಂಸ್ಥೆಗಳಲ್ಲಿ ತನ್ನನ್ನು ಸಂಪೂರ್ಣವಾಗಿ ತೊಡಗಿಸಿಕೊಂಡ ದಣಿವರಿಯದ ಸಮುದಾಯ ಸೇವಕ , ಸಾಮಾಜಿಕ ಮುಂದಾಳು , ಸದಾ ಹಸನ್ಮುಕಿ ವ್ಯಕ್ತಿತ್ವದ ನೌಶಾದ್ ಹಾಜಿ ಸೂರಲ್ಪಾಡಿ ಯವರ ನಿದನವು ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಮುಸ್ಲಿಂ ಸಮುದಾಯಕ್ಕೆ ತುಂಬಲಾರದ ನಷ್ಟವಾಗಿದೆ , ಸಮುದಾಯದ ಸಬಲೀಕರಣಕ್ಕಾಗಿ ತನ್ನ ಬದುಕನ್ನು ಮುಡಿಪಾಗಿಟ್ಟ ನೌಶಾದ್ ಹಾಜಿಯವರು ನಂಡೆ ಪೆಂಙಳ್ ಎಂಬ ಮಹತ್ವಾಕಾಂಕ್ಷಿ ಅಭಿಯಾನಕ್ಕೆ ಸಮರ್ಥ ನೇತ್ರತ್ವ ನೀಡಿ ಅದೆಷ್ಟೋ ಬಡ ಕುಟುಂಬಕ್ಕೆ ಬೆಳಕಾಗಿದ್ದರು , ಇಂತಹ ಧೀಮಂತ ವ್ಯಕ್ತಿತ್ವ ವನ್ನ ಕಳೆದುಕೊಂಡ ಸಮುದಾಯವು ಇಂದು ಬಡವಾಗಿದೆ ಎಂದು SDPI ದಕ್ಷಿಣ ಕನ್ನಡ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅನ್ವರ್ ಸಾದತ್ ಬಜತ್ತೂರು ಸಂತಾಪ ಪ್ರಕಟಣೆಯಲ್ಲಿ ಶೋಕ ವ್ಯಕ್ತಪಡಿಸಿದ್ದಾರೆ ,
ನೌಶಾದ್ ರವರ ಮರಣದ ನೋವನ್ನು ಸಹಿಸುವ ಶಕ್ತಿಯನ್ನು ಜಗದೊಡೆಯ ಅವರ ಕುಟುಂಬಕ್ಕೆ ಮತ್ತು ಅವರ ಹಿತೈಷಿಗಳಿಗೆ ನೀಡಲಿ,ಅವರು ಮಾಡಿದ ಸತ್ಕರ್ಮಗಳು ಪರಲೋಕದ ಬದುಕಿನಲ್ಲಿ ಅವರಿಗೆ ಉನ್ನತ ದರ್ಜೆಯನ್ನು ಅಲ್ಲಾಹನು ನೀಡಿ ಅನುಗ್ರಹಿಸಲಿ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ