
ಕಾಟಿಪಳ್ಳದ ಜಲೀಲ್ ನಿವಾಸಕ್ಕೆ ಎಸ್ಡಿಪಿಐ ರಾಜ್ಯ ಪ್ರಧಾನ ಕಾರ್ಯದರ್ಶಿ ಬಿ ಆರ್ ಭಾಸ್ಕರ್ ಪ್ರಸಾದ್ ನೇತೃತ್ವದ ನಾಯಕರ ನಿಯೋಗ ಬೇಟಿ
ಸುರತ್ಕಲ್ ಡಿ 30 :ಇತ್ತೀಚೆಗೆ ಸಂಘಪರಿವಾರದ ಕಾರ್ಯಕರ್ತರಿಂದ ಹತ್ಯೆಗೀಡಾದ ಸುರತ್ಕಲ್ ಸಮೀಪದ ಕಾಟಿಪಳ್ಳದ ನಿವಾಸಿ ಜಲೀಲ್ ಅವರ ನಿವಾಸಕ್ಕೆ SDPI ರಾಜ್ಯ ಪ್ರಧಾನ ಕಾರ್ಯದರ್ಶಿ ಶ್ರೀ ಭಾಸ್ಕರ್ ಪ್ರಸಾದ್ ಬಿ ಆರ್ ನೇತೃತ್ವದ ನಾಯಕರ ನಿಯೋಗ ಇಂದು ಭೇಟಿ ನೀಡಿ ಕುಟುಂಬ ಸದಸ್ಯರಿಗೆ ಸಾಂತ್ವನ ಹೇಳಿದರು.
ಕುಟುಂಬದ ಸದಸ್ಯರನ್ನು ಭೇಟಿ ಮಾಡಿದ ನಿಯೋಗ, ಜಲೀಲ್ ಅವರ ಮರಣದಿಂದ ನಮಗೂ ದುಃಖವಾಗಿದೆ. ಆರೋಪಿಗಳ ವಿರುದ್ಧ ಕುಟುಂಬ ನಡೆಸುತ್ತಿರುವ ಕಾನೂನು ಹೋರಾಟಕ್ಕೆ ಪಕ್ಷ ಕೂಡ ಬೆಂಬಲ ನೀಡಲಿದೆ, ಯಾವುದೇ ಕಾರಣಕ್ಕೂ ಎದೆಗುಂದದೆ ಹೋರಾಟ ಮುಂದುವರಿಸಬೇಕು. ಈ ಕುಟುಂಬದೊಂದಿಗೆ ಎಸ್’ಡಿಪಿಐ ಯಾವತ್ತೂ ಇರಲಿದೆ ಎಂದು ಭರವಸೆ ನೀಡಿದೆ.
ನಿಯೋಗದಲ್ಲಿ ಎಸ್’ಡಿಪಿಐ ರಾಜ್ಯ ಕಾರ್ಯದರ್ಶಿ ಅಶ್ರಫ್ ಮಾಚಾರ್,
ರಾಜ್ಯ ಸನಿತಿ ಸದಸ್ಯ ರಿಯಾಜ್ ಕಡಂಬು, ದ.ಕ.ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅನ್ವರ್ ಸಾದಾತ್ ಬಜತ್ತೂರು, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜಮಾಲ್ ಜೊಕಟ್ಟೆ, ಮಂಗಳೂರು ದಕ್ಷಿಣ ವಿಧಾಸಸಭಾ ಕ್ಷೇತ ಸಮಿತಿಯ ಅಧ್ಯಕ್ಷರಾದ ಅಕ್ಬರ್ ಕುದ್ರೋಳಿ, ಸುರತ್ಕಲ್ ಬ್ಳಾಕ್ ಅಧ್ಯಕ್ಷರಾದ ಸಲಾಂ ಕಾನ,ಮಂಗಳೂರು ಉತ್ತರ ವಿಧಾನ ಸಭಾ ಕ್ಷೇತ್ರದ ಜೊತೆ ಕಾರ್ಯದರ್ಶಿಅಝರ್ ಚೊಕ್ಕಬೆಟ್ಟು ಹಾಗೂ ಪಕ್ಷದ ಸ್ಥಳೀಯರು ಮುಖಂಡರು,ಕಾರ್ಯಕರ್ತರು ,ಸ್ಥಳೀಯರು ಉಪಸ್ಥಿತರಿದ್ದರು