Hayathtv
  • ಮುಖಪುಟ
  • ಸುದ್ದಿ
    • All
    • ಕರಾವಳಿ
    • ರಾಜ್ಯ
    • ರಾಷ್ಟ್ರೀಯ
    • ವಿದೇಶ

    ಮರು ಎಣಿಕೆಯಲ್ಲಿ ಮಂಜುನಾಥ್ ಗೌಡ ಗೆದ್ರೆ ರಾಜಕೀಯ ಬಿಡುವೆ: ಶಾಸಕ ಕೆವೈ ನಂಜೇಗೌಡ

    ಲಂಚ ತಗೊಂಡಾದ್ಮೇಲೆ ಡಾಕ್ಟ್ರು ನಿನ್ ಹೆಂಡ್ತಿ ಸತ್ತೋದ್ಲು ಅಂದ್ರು: ಪತಿ ಗೋಳಾಟ

    ಲಂಚ ತಗೊಂಡಾದ್ಮೇಲೆ ಡಾಕ್ಟ್ರು ನಿನ್ ಹೆಂಡ್ತಿ ಸತ್ತೋದ್ಲು ಅಂದ್ರು: ಪತಿ ಗೋಳಾಟ

    ಸೌಜನ್ಯ ಮಾವ ವಿಠಲ್‌ಗೌಡ ತೋರಿಸಿದ ಬಂಗ್ಲೆಗುಡ್ಡೆ ಕಾಡಿನಲ್ಲಿ 5 ಅಸ್ಥಿಪಂಜರ ಮೂಳೆ ಪತ್ತೆ!

    ಸೌಜನ್ಯ ಮಾವ ವಿಠಲ್‌ಗೌಡ ತೋರಿಸಿದ ಬಂಗ್ಲೆಗುಡ್ಡೆ ಕಾಡಿನಲ್ಲಿ 5 ಅಸ್ಥಿಪಂಜರ ಮೂಳೆ ಪತ್ತೆ!

    ಯುವತಿ ದೇಹದ ಮೇಲಿನ ಕಪ್ಪು ಚುಕ್ಕೆ ಗುರುತಿಸಿದ AI.. ಫೋಟೋ ಅಪ್​ಲೋಡ್​ ಮಾಡುವಾಗ ಹುಷಾರ್​!

    ವಿಜಯಪುರ| SBI ಬ್ಯಾಂಕ್‌ ದರೋಡೆ – ಪಿಸ್ತೂಲ್‌ ತೋರಿಸಿ 8 ಕೋಟಿ ನಗದು, 50 ಕೆಜಿ ಚಿನ್ನದೊಂದಿಗೆ ಪರಾರಿ

    ಕೆಂಪು ಕಲ್ಲು ಬಗ್ಗೆ ನಿಯಮ ಸಡಿಲಿಕೆ, 25 ಗುತ್ತಿಗೆದಾರರಿಗೆ ಪರವಾನಗಿ, ಕಲ್ಲಿನ ದರ ಇಳಿಯಲಿದೆ ; ಯುಟಿ ಖಾದರ್

    ಕೆಂಪು ಕಲ್ಲು ಬಗ್ಗೆ ನಿಯಮ ಸಡಿಲಿಕೆ, 25 ಗುತ್ತಿಗೆದಾರರಿಗೆ ಪರವಾನಗಿ, ಕಲ್ಲಿನ ದರ ಇಳಿಯಲಿದೆ ; ಯುಟಿ ಖಾದರ್

    ಮಾಲೂರು ಶಾಸಕ ನಂಜೇಗೌಡ ಆಯ್ಕೆ ಅಸಿಂಧು – ಮರು ಮತ ಎಣಿಕೆಗೆ ಹೈಕೋರ್ಟ್ ಆದೇಶ

    ಸ್ವಾತಂತ್ರ್ಯೋತ್ಸವ ಪ್ರಯುಕ್ತ SDPI ಯಿಂದ ಬಿಸಿ ರೋಡ್ ನಲ್ಲಿ ತಿರಂಗಾ ರ್‍ಯಾಲಿ ಹಾಗೂ ಸಾರ್ವಜನಿಕ ಸಭೆ

    ಬಿಜೆಪಿ ಮಾಡಿದ 40% ಕಮಿಷನ್ ಹಗರಣ ಮತ್ತು ಕೋವಿಡ್ ಹಗರಣದ ವಿರುದ್ಧ ಕ್ರಮಕ್ಕೆ ಮುಂದಾಗದ ಕಾಂಗ್ರೆಸ್‌ ಸರಕಾರ ಹೊಂದಾಣಿಕೆ ರಾಜಕಾರಣ ಮಾಡುತ್ತಿದೆ – ಎಸ್‌ಡಿಪಿಐ:

    15 ವರ್ಷಕ್ಕಿಂತ ಹಳೇ ಸರ್ಕಾರಿ ವಾಹನಗಳನ್ನ ಗುಜರಿಗೆ ಹಾಕಿ: ಸರ್ಕಾರ ಆದೇಶ

    • ರಾಜ್ಯ
    • ರಾಷ್ಟ್ರೀಯ
    • ವಿದೇಶ
    • ಚುನಾವಣೆ
  • ಕರಾವಳಿ
  • ಕ್ರೈಮ್
  • ವಿಶೇಷ ಸುದ್ದಿ
  • ಕ್ರೀಡೆ
  • ಮನೋರಂಜನೆ
  • ವೀಡಿಯೋ ಗ್ಯಾಲರೀ
No Result
View All Result

Home ಸುದ್ದಿ ವಿದೇಶ

ಆಸ್ಪತ್ರೆಗಳು ಭರ್ತಿ, ಸ್ಮಶಾನದಲ್ಲಿ ಶವಗಳ ರಾಶಿ – ಚೀನಾದಲ್ಲಿ ಕೋವಿಡ್‌ ಸುನಾಮಿಗೆ ಕಾರಣ ಏನು?

editor tv by editor tv
December 21, 2022
in ವಿದೇಶ, ಸುದ್ದಿ
0
ಆಸ್ಪತ್ರೆಗಳು ಭರ್ತಿ, ಸ್ಮಶಾನದಲ್ಲಿ ಶವಗಳ ರಾಶಿ – ಚೀನಾದಲ್ಲಿ ಕೋವಿಡ್‌ ಸುನಾಮಿಗೆ ಕಾರಣ ಏನು?
1.9k
VIEWS
Share on FacebookShare on TwitterShare on Whatsapp

ಬೀಜಿಂಗ್: ವಿಶ್ವಕ್ಕೆ ಕೊರೊನಾ ಹಬ್ಬಿಸಿದ ಚೀನಾದಲ್ಲಿ(China) ಈಗ ಸೋಂಕು ಮತ್ತೆ ಅಬ್ಬರಿಸುತ್ತಿದೆ. ಚೀನಾ ದೇಶ ಮತ್ತೊಮ್ಮೆ ಕೊರೊನಾ(Corona) ಮಾರಿಗೆ ತತ್ತರಿಸಿದ್ದು, ಪ್ರತಿನಿತ್ಯ ಸಾವಿರಾರು ಸಂಖ್ಯೆಯಲ್ಲಿ ಕೋವಿಡ್ ಕೇಸ್ ದಾಖಲಾಗುತ್ತಿದೆ.

ಆಸ್ಪತ್ರೆಗಳೆಲ್ಲಾ(Hospital) ತುಂಬಿ ತುಳುಕುತ್ತಿದೆ. ಲಕ್ಷಾಂತರ ಮಂದಿ ನಲುಗಿ ಹೋಗಿದ್ದಾರೆ. ಬೀಜಿಂಗ್‍ನ ಸ್ಮಶಾನಗಳೆಲ್ಲ ಕೋವಿಡ್ ಶವಗಳಿಂದ ತುಂಬಿಹೋಗಿವೆ. ಪ್ರತಿದಿನ ಏನಿಲ್ಲ ಅಂದರೂ ಒಂದೊಂದು ಸ್ಮಶಾನಕ್ಕೆ ಕನಿಷ್ಠ 200 ಶವ ಬರುತ್ತಿವೆ ಎಂದು ವರದಿಯಾಗಿದೆ.

https://twitter.com/jenniferzeng97/status/1604485770537992193?s=20&t=4P7JWaASWw79rGc4PyDfeA

ಜನ ರಸ್ತೆ ರಸ್ತೆಯಲ್ಲಿ ಪ್ರಾಣಕಳೆದುಕೊಳ್ಳುವಂತಾಗಿದೆ. ಅಷ್ಟೇ ಅಲ್ಲದೇ ಮುಂದಿನ ಮೂರು ತಿಂಗಳಲ್ಲಿ ಚೀನಾದ ಶೇ.60ರಷ್ಟು ಜನರನ್ನು ಕೋವಿಡ್ ಹೆಮ್ಮಾರಿ ಆವರಿಸಲಿದೆ ಎಂದು ಪರಿಣಿತರು ಅಂದಾಜಿಸಿದ್ದಾರೆ.

ದೇಶದಲ್ಲಿ ಸದ್ಯ ಕೋವಿಡ್‌ನಿಂದ(Covid) ಸಂಭವಿಸುತ್ತಿರುವ ಸಾವುಗಳನ್ನು ನಿಯಂತ್ರಿಸಲು ಸಾಧ್ಯವಾಗದೇ ಚೀನಾ ನಲುಗಿ ಹೋಗಿದೆ. ಸ್ಮಶಾನಗಳಲ್ಲಿ ಶವಗಳ ಅಂತ್ಯಸಂಸ್ಕಾರಕ್ಕೆ ಹಲವು ದಿನ ಕ್ಯೂ ನಿಲ್ಲಬೇಕಾದ ಪರಿಸ್ಥಿತಿಯಿದೆ.

People rushed to the pharmaceutical factory to buy ibuprofen, not to get a better price. They just can't get it anywhere else.
Dec 18, in #Zhuhai City, #CCPChina.
This is one of the consequences of the #CCP's doing nothing policy after it abandoned its #ZeroCovidPolicy. pic.twitter.com/S603xVekAN

— Inconvenient Truths by Jennifer Zeng (@jenniferzeng97) December 19, 2022

ವಿಶ್ವಕ್ಕೆ ಬುದ್ಧಿ ಹೇಳುವ ಚೀನಾ ಇಲ್ಲಿಯವರೆಗೂ ಕೊರೊನಾ ಸಾವು ನೋವಿನ ಅಧಿಕೃತ ಲೆಕ್ಕ ನೀಡಿಲ್ಲ, ಈಗಲೂ ನೀಡುತ್ತಿಲ್ಲ. ಆದರೆ ಆದರೆ ಕೆಲವು ಸ್ಮಶಾನಗಳ ನಿರ್ವಾಹಕರು, ನಾವು ಕೆಲ ದಿನಗಳಿಂದ 24 ಗಂಟೆ ಶವಸಂಸ್ಕಾರ ಮಾಡುತ್ತಿದ್ದೇವೆ. ಆದರೂ ಶವಗಳ ಸಾಲು ಕರಗುತ್ತಿಲ್ಲ. ನಮ್ಮಿಂದ ಪರಿಸ್ಥಿತಿ ನಿಭಾಯಿಸಲು ಸಾಧ್ಯವಾಗುತ್ತಿಲ್ಲ. ಈ ಮೊದಲು ಪ್ರತಿ ದಿನ 30-40 ಶವ ಬರುತ್ತಿದ್ದರೆ ಈಗ ಸರಾಸರಿ 200ಕ್ಕೂ ಹೆಚ್ಚು ಶವಗಳು ಬರುತ್ತಿದೆ ಎಂದು ಅಮೆರಿಕದ ‘ವಾಲ್‌ಸ್ಟ್ರೀಟ್ ಜರ್ನಲ್’ ವರದಿ ಮಾಡಿದೆ.

ಚೀನಾದಲ್ಲಿಈಗ ಕೊರೊನಾ ಅಬ್ಬರ ಯಾಕೆ?
ಇಲ್ಲಿಯವರೆಗೂ ಶೂನ್ಯ ಕೋವಿಡ್‌ ನೀತಿಯನ್ನು ಚೀನಾ ಅಳವಡಿಸಿತ್ತು. ಅಂದರೆ ಒಂದು ಕೊರೊನಾ ಪ್ರಕರಣ ಪತ್ತೆಯಾದರೂ ಆ ಮನೆಯನ್ನು ಸೀಲ್‌ಡೌನ್‌ ಮಾಡಲಾಗುತ್ತಿತ್ತು. ಕೊರೊನಾ ಪ್ರಕರಣಗಳು ಜಾಸ್ತಿಯಾದ ಪ್ರದೇಶವನ್ನೇ ಲಾಕ್‌ಡೌನ್‌(Lockdown) ಮಾಡಲಾಗುತ್ತಿತ್ತು.

ಲಾಕ್‍ಡೌನ್ ವೇಳೆ ಜನರಿಗೆ ಮೂಲಭೂತ ಸೌಕರ್ಯದ ಕೊರತೆಯಾಗಿತ್ತು. ಕನಿಷ್ಠ ಪಕ್ಷ ಊಟದ ವ್ಯವಸ್ಥೆ ಮಾಡದೇ ಕೆಟ್ಟದಾಗಿ ನಿರ್ವಹಣೆ ಮಾಡಿತ್ತು. ಈ ಅವ್ಯವಸ್ಥೆ ವಿರುದ್ಧ ದೊಡ್ಡ ಮಟ್ಟದದಲ್ಲಿ ಚೀನಾದ ಜನ ಪ್ರತಿಭಟನೆ(Protest) ನಡೆಸಿದ್ದರು. ಜನರ ಪ್ರತಿಭಟನೆಯನ್ನು ನಿಯಂತ್ರಿಸಲು ಸಾಧ್ಯವಾಗದೇ ಚೀನಾ ಸರ್ಕಾರ ನಿರ್ಬಂಧವನ್ನು ಸಡಿಲಗೊಳಿಸಿತ್ತು. ನಿರ್ಬಂಧ ಸಡಿಲವಾದ ಬೆನ್ನಲ್ಲೇ ಸೋಂಕು ಹೆಚ್ಚಳವಾಗಿದೆ.

ಭಾರತ ಸೇರಿದಂತೆ ವಿಶ್ವದ ಹಲವು ದೇಶಗಳಲ್ಲಿ ಕೊರೊನಾ ಎರಡನೇ ಅಲೆ ಬಂದು ಹೋಗಿದೆ. . ಲಾಕ್‌ಡೌನ್‌ ತೆರವುಗೊಂಡಿದ್ದು ಮೊದಲಿನಂತೆ ಜನರು ಓಡಾಟ ನಡೆಸುತ್ತಿದ್ದಾರೆ. “ಕೊರೊನಾವನ್ನು ಸಂಪೂರ್ಣ ತೊಲಗಿಸಲು ಸಾಧ್ಯವಿಲ್ಲ. ವೈರಸ್‌ ಜೊತೆ ಜೀವನ ನಡೆಸಬೇಕು” ಎಂದು ಸಾಂಕ್ರಾಮಿಕ ತಜ್ಞರು, ಸರ್ಕಾರಗಳು ಹೇಳಿದ ಹಿನ್ನೆಲೆಯಲ್ಲಿ ಈಗ ಮೊದಲು ಇದ್ದ ಭಯ ಹೋಗಿದೆ. ಅದರೆ ಚೀನಾ ಕೊರೊನಾ ನಿಯಂತ್ರಿಸಲು ಬಿಗಿಯಾದ ನೀತಿಯನ್ನು ಅನುಸರಿಸಿತ್ತು. ಅಷ್ಟೇ ಅಲ್ಲದೇ ಲಸಿಕೆಯಿಂದ ಕೊರೊನಾ ವಿಫಲವಾಗಿದ್ದರಿಂದ ಈಗ ದಿಢೀರ್‌ ಸೋಂಕು ಹೆಚ್ಚಳವಾಗುತ್ತಿದೆ.

Previous Post

Covid Review Meet: ಚೀನಾದಲ್ಲಿ ಮತ್ತೆ ಕೊವಿಡ್ ಸ್ಫೋಟ: ಕಣ್ಗಾವಲಿಗೆ ವಿಶೇಷ ಸಮಿತಿ ರಚಿಸಿದ ಭಾರತ ಸರ್ಕಾರ, ಜಿನೋಮ್ ಸೀಕ್ವೆನ್ಸ್ ಹೆಚ್ಚಿಸಲು ನಿರ್ಧಾರ

Next Post

Assembly election: ಕಾಂಗ್ರೆಸ್‌ ಟಿಕೆಟ್‌ ಹಂಚಿಕೆಗೆ ಅಂತಿಮ ಮಾರ್ಗಸೂಚಿ ಬಿಡುಗಡೆ ಮಾಡಿದ ಕೆಪಿಸಿಸಿ

Next Post
Assembly election: ಕಾಂಗ್ರೆಸ್‌ ಟಿಕೆಟ್‌ ಹಂಚಿಕೆಗೆ ಅಂತಿಮ ಮಾರ್ಗಸೂಚಿ ಬಿಡುಗಡೆ ಮಾಡಿದ ಕೆಪಿಸಿಸಿ

Assembly election: ಕಾಂಗ್ರೆಸ್‌ ಟಿಕೆಟ್‌ ಹಂಚಿಕೆಗೆ ಅಂತಿಮ ಮಾರ್ಗಸೂಚಿ ಬಿಡುಗಡೆ ಮಾಡಿದ ಕೆಪಿಸಿಸಿ

ನಮ್ಮ ಬಗ್ಗೆ

ಹಯಾತ್ TV ರಾಜ್ಯದ ಹೆಸರಾಂತ ವಾರ್ತಾ ವೇದಿಕೆಗಳಲ್ಲಿ ಒಂದಾಗಿದೆ. ಇದರಲ್ಲಿ ರಾಜ್ಯ, ದೇಶ, ವಿದೇಶ, ಕ್ರೀಡೆ, ಸಿನಿಮಾ, ಮನರಂಜನೆ ಸೇರಿ ಹತ್ತಾರು ಸುದ್ದಿ ಗಳನ್ನು ಪ್ರತಿದಿನ ಹಾಕಲಾಗುತ್ತದೆ. ದೇಶ ಬದಲಾಗುತ್ತಿದೆ, ನ್ಯೂಸ್ ಅನ್ನು ಓದುವ ವಿಧಾನ ವೂ ಬದಲಾಗಲಿದೆ. ಈ ಬದಲಾವಣೆಯ ಬೆನ್ನಲ್ಲೇ ನಾವಿದ್ದೇವೆ.

ಜಾಹೀರಾತು ಮತ್ತು ಸುದ್ದಿಗಾಗಿ ಸಂಪರ್ಕಿಸಿ

Hayath Tv Media network
Mangalore
Chief Editor Ashraf Kammaje – 8861948115

Print Media

9483267000

  • Contact Us
  • HayathTV
  • Privacy Policy
  • Terms and Conditions

© 2025 HAYATH TV NEWS.

No Result
View All Result
  • Contact Us
  • HayathTV
  • Privacy Policy
  • Terms and Conditions

© 2025 HAYATH TV NEWS.