

ಮಂಗಳೂರು,ಡಿ.11: ನಗರದ ಚಿನ್ನಾಭರಣದ ಮಳಿಗೆಯೊಂದಕ್ಕೆ ನುಗ್ಗಿ ಅನೈತಿಕ ಪೊಲೀಸ್‌ಗಿರಿ ನಡೆಸಿದ್ದ ಸಂಘಪರಿವಾರದ ಕಾರ್ಯಕರ್ತರು ಎನ್ನಲಾದ ನಾಲ್ಕು ಮಂದಿಯನ್ನು ಕದ್ರಿ ಪೊಲೀಸರು ರವಿವಾರ ಬಂಧಿಸಿದ್ದಾರೆ ಎಂದು ತಿಳಿದು ಬಂದಿದೆ.
ಚೇತನ್, ಪ್ರಕಾಶ್, ಗಣೇಶ್ ಮತ್ತು ಸಿಬಿಲ್ ಎಂಬವರು ಬಂಧಿತರು. ವಾರದ ಹಿಂದೆ ಕಂಕನಾಡಿಯ ಸುಲ್ತಾನ್ ಗೋಲ್ಡ್ ಜುವೆಲ್ಲರಿಗೆ ದಾಳಿ ನಡೆಸಿದ್ದ ಬಜರಂಗದಳ ಕಾರ್ಯಕರ್ತರು ಅಲ್ಲಿದ್ದ ಯುವ ಜೋಡಿಗೆ ಹಲ್ಲೆ ನಡೆಸಿದ್ದರು. ಅಲ್ಲಿ ಕೆಲಸಕ್ಕಿದ್ದ ಹಿಂದು ಯುವತಿ, ಚಿನ್ನಾಭರಣ ಮಳಿಗೆಯ ಮಾರಾಟ ವಿಭಾಗದ ಯುವಕ ಮತ್ತು ಯುವತಿಯು ಅನ್ಯೋನ್ಯತೆಯಿಂದಿರುವ ಬಗ್ಗೆ ಮಾಹಿತಿ ಪಡೆದುಕೊಂಡ ಗುಂಪು ಡಿ.6ರ ಸಂಜೆ ಯುವತಿಯ ಪೋಷಕರೊಂದಿಗೆ ಚಿನ್ನಾಭರಣದ ಮಳಿಗೆಗೆ ನುಗ್ಗಿ ಪೊಲೀಸರ ಸಮ್ಮುಖವೇ ಹಲ್ಲೆ ನಡೆಸಿತ್ತು ಎಂದು ಆರೋಪಿಸಲಾಗಿತ್ತು.
ಯುವತಿ ತೀರ್ಥಹಳ್ಳಿ ಮೂಲದ ನಿವಾಸಿಯಾಗಿದ್ದು ಈ ಹಿಂದೆ ಬಟ್ಟೆ ಅಂಗಡಿಯಲ್ಲಿ ಕೆಲಸಕ್ಕಿದ್ದಳು. ಆನಂತರ ಜುವೆಲ್ಲರಿಗೆ ಕೆಲಸ ಬದಲಾಯಿಸಿದ್ದಳು. ಈ ವೇಳೆ, ಅಲ್ಲಿದ್ದ ಸಹೋದ್ಯೋಗಿ ಯುವಕನಜೊತೆ ಮಾತನಾಡಿದಲೆಂದು ಭಜರಂಗಿ ಗಳು ಸಂಸ್ಥೆ ಗೆ ನುಗ್ಗಿ ದಾಂದಲೇ ಗೈಯಲು ಪ್ರಯತ್ನಿಸಿದ್ದರು.