Hayathtv
  • ಮುಖಪುಟ
  • ಸುದ್ದಿ
    • All
    • ಕರಾವಳಿ
    • ರಾಜ್ಯ
    • ರಾಷ್ಟ್ರೀಯ
    • ವಿದೇಶ

    ಧರ್ಮಸ್ಥಳ ಪ್ರಕರಣ: ತಿಮರೋಡಿ-ಚಿನ್ನಯ್ಯ ಸಂಭಾಷಣೆಯ 8ನೇ ವಿಡಿಯೋ ಬಿಡುಗಡೆ

    ಗಣೇಶನಿಗೆ ಚಪ್ಪಲಿ ಹಾರ: ಬೇಲೂರಿನಲ್ಲಿ ಕೋಲಾಹಲ ಎಬ್ಬಿಸಿದ್ದ ಮಹಿಳೆ ಲೀಲಮ್ಮ ಬಂಧನ

    ಗಣೇಶನಿಗೆ ಚಪ್ಪಲಿ ಹಾರ: ಬೇಲೂರಿನಲ್ಲಿ ಕೋಲಾಹಲ ಎಬ್ಬಿಸಿದ್ದ ಮಹಿಳೆ ಲೀಲಮ್ಮ ಬಂಧನ

    PM Modi on GST: ನಾಳೆಯಿಂದ ದೇಶದ ಜನರಿಗೆ ಉಳಿತಾಯ ಉತ್ಸವ: ಹೊಸ ಜಿಎಸ್​ಟಿ ಸುಧಾರಣೆ ಬಗ್ಗೆ ಮೋದಿ

    PM Modi on GST: ನಾಳೆಯಿಂದ ದೇಶದ ಜನರಿಗೆ ಉಳಿತಾಯ ಉತ್ಸವ: ಹೊಸ ಜಿಎಸ್​ಟಿ ಸುಧಾರಣೆ ಬಗ್ಗೆ ಮೋದಿ

    Breaking: ಸಂಜೆ 5 ಗಂಟೆಗೆ ಪ್ರಧಾನಿ ಮೋದಿ ಭಾಷಣ.. ಬಿಗ್​​ ಅನೌನ್ಸ್​ಮೆಂಟ್​ ನಿರೀಕ್ಷೆ

    ಹಿಂದೂ ಕ್ರೈಸ್ತಗೆ ಕೊಕ್ – ಮತಾಂತರ ಆದವರಿಗೆ ಮೂಲ ಜಾತಿ ಅನ್ವಯ ಆಗಲ್ಲ

    ನಾಳೆಯಿಂದಲೇ ಹಿಂದುಳಿದ ಆಯೋಗದಿಂದ ಸಮೀಕ್ಷೆ – 60 ಪ್ರಶ್ನೆಗಳಿಗೆ ಉತ್ತರ ಪಡೆಯಲಿರೋ ಸರ್ವೇಯರ್ಸ್

    ಧರ್ಮಸ್ಥಳ ಪ್ರಕರಣ: ಚಿನ್ನಯ್ಯ-ತಿಮರೋಡಿ ಮತ್ತೆರಡು ವಿಡಿಯೋ ವೈರಲ್‌

    ಧರ್ಮಸ್ಥಳ ಪ್ರಕರಣ: ಚಿನ್ನಯ್ಯ-ತಿಮರೋಡಿ ಮತ್ತೆರಡು ವಿಡಿಯೋ ವೈರಲ್‌

    ಮಾಹಿತಿ ಹಕ್ಕು ಕಾಯ್ದೆ | ತುಮಕೂರು ಜಿಲ್ಲೆಯಲ್ಲಿ 1,323 ಮೇಲ್ಮನವಿ ಬಾಕಿ: ಬದ್ರುದ್ದೀನ್ ಕೆ.ಮಾಣಿ

    ಜಮ್ಮು ಕಾಶ್ಮೀರದಲ್ಲಿ ಎನ್‌ಕೌಂಟರ್ – ಓರ್ವ ಯೋಧ ಹುತಾತ್ಮ, ನಾಲ್ವರು ಶಂಕಿತ ಉಗ್ರರು ವಶಕ್ಕೆ 

    • ರಾಜ್ಯ
    • ರಾಷ್ಟ್ರೀಯ
    • ವಿದೇಶ
    • ಚುನಾವಣೆ
  • ಕರಾವಳಿ
  • ಕ್ರೈಮ್
  • ವಿಶೇಷ ಸುದ್ದಿ
  • ಕ್ರೀಡೆ
  • ಮನೋರಂಜನೆ
  • ವೀಡಿಯೋ ಗ್ಯಾಲರೀ
No Result
View All Result

Home ಸುದ್ದಿ ರಾಜ್ಯ

ರಾಮ-ಕೃಷ್ಣ ಕೇವಲ ಕಾದಂಬರಿ ಪಾತ್ರಗಳು, ಅಶೋಕ ಇತಿಹಾಸ ಪುರುಷ: ನಿವೃತ್ತ ನ್ಯಾಯಾಧೀಶ

editor tv by editor tv
December 2, 2022
in ರಾಜ್ಯ, ಸುದ್ದಿ
0
ರಾಮ-ಕೃಷ್ಣ ಕೇವಲ ಕಾದಂಬರಿ ಪಾತ್ರಗಳು, ಅಶೋಕ ಇತಿಹಾಸ ಪುರುಷ: ನಿವೃತ್ತ ನ್ಯಾಯಾಧೀಶ
1.9k
VIEWS
Share on FacebookShare on TwitterShare on Whatsapp

ವಿಜಯಪುರ: ಶ್ರೀರಾಮ ಮತ್ತು ಶ್ರೀಕೃಷ್ಣ (Sri Rama and Sri Krishna) ಐತಿಹಾಸಿಕ ವ್ಯಕ್ತಿಗಳಲ್ಲ. ಅವು ಕೇವಲ ಕಾದಂಬರಿ ಪಾತ್ರಗಳು. ಅಶೋಕ ಚಕ್ರವರ್ತಿ (Emporer Ashoka) ನಿಜವಾದ ಇತಿಹಾಸ ಪುರುಷ ಎಂದು ನಿವೃತ್ತ ಜಿಲ್ಲಾ ನ್ಯಾಯಾಧೀಶ ವಸಂತ ಮುಳಸಾವಳಗಿ ಹೇಳಿದರು. ನಗರದ ಕಂದಗಲ್ ಹನುಮಂತರಾಯ ರಂಗಮಂದಿರದಲ್ಲಿ ನಿನ್ನೆ (ಡಿ 1) ರಾಷ್ಟ್ರೀಯ ಸೌಹಾರ್ದ ವೇದಿಕೆ ಹಾಗೂ ಇತರೆ ಸಂಘಟನೆಗಳು ಆಯೋಜಿಸಿದ್ದ ‘ಸಂವಿಧಾನದ ಆಶಯ ಈಡೇರಿದೆಯೇ’ ವಿಚಾರಗೋಷ್ಠಿಯಲ್ಲಿ ಮಾತನಾಡಿದ ಅವರು, ಅಕ್ಬರ್ ಹೆಂಡತಿ ಹಿಂದೂ ಇದ್ದರೂ. ಆಕೆ ಧರ್ಮಾಂತರ ಆಗಿರಲಿಲ್ಲ. ಅಕ್ಬರ್​ನ ಆಸ್ಥಾನದಲ್ಲಿ ಕೃಷ್ಣನ ಮಂದಿರ ಕಟ್ಟಿದ್ದಾನೆ, ಹೋಗಿ ನೋಡಬಹುದು. ಮುಸ್ಲಿಮರು ಹಾಗೆ ಮಾಡಿದ್ದಾರೆ, ಹೀಗೆ ಮಾಡಿದ್ದಾರೆ ಎನ್ನುವವರು ಭಾರತದಲ್ಲಿ ಮುಸ್ಲಿಮ್ ಆಳ್ವಿಕೆಯ 700 ವರ್ಷಗಳ ಇತಿಹಾಸ ಏನು ಹೇಳುತ್ತದೆ ಎನ್ನುವುದನ್ನು ಅರಿಯಬೇಕು ಎಂದರು.

ಮುಸ್ಲಿಮರು ಹಿಂದೂಗಳನ್ನು ವಿರೋಧಿಸಿದ್ದರೆ ಭಾರತದಲ್ಲಿ ಇಂದು ಒಬ್ಬೇ ಒಬ್ಬ ಹಿಂದೂ ಇರುತ್ತಿರಲಿಲ್ಲ. ಎಲ್ಲ ಹಿಂದೂಗಳನ್ನು ಕೊಲ್ಲಬಹುದಿತ್ತು. ಭಾರತದಲ್ಲಿ ನೂರಾರು ವರ್ಷ ಆಳ್ವಿಕೆ ಮಾಡಿದರೂ ಮುಸ್ಲಿಮರು ಅಲ್ಪಸಂಖ್ಯಾತರಾಗಿಯೇ ಏಕೆ ಉಳಿದರು ಎಂದು ಅವರು ಪ್ರಶ್ನಿಸಿದರು. ಸಂವಿಧಾನದ ಆಶಯಗಳು ಸ್ಪಷ್ಟವಾಗಿವೆ ಮತ್ತು ನಿಖರವಾಗಿವೆ. ಅವುಗಳನ್ನು ಜಾರಿಗೊಳಿಸುವ ನಮ್ಮ ವ್ಯವಸ್ಥೆ ಎಡವುತ್ತಿರುವುದರಿಂದ ಸಂವಿಧಾನದ ಆಶಯ ಈಡೇರಿದೆಯೇ ಎಂಬ ಅನುಮಾನಗಳು ಮೂಡುತ್ತವೆ. ಯುವಜನತೆ ಜಾಗೃತರಾಗಿ ಕಾರ್ಯತತ್ಪರರಾದರೆ ಮಾತ್ರ ಇಂಥ ಸಮಸ್ಯೆಗಳು ಪರಿಹಾರವಾಗುತ್ತವೆ ಎಂದು ಹೇಳಿದರು.

1999ರಲ್ಲಿ ಕಾನೂನು ಬಂದಿದೆ. ಸ್ವಾತಂತ್ರ್ಯ ಬಂದಾಗ ಇದ್ದ ರೀತಿಯಲ್ಲಿ ದೇಗುಲ, ಮಸೀದಿ, ಚರ್ಚ್​ಗಳನ್ನು ಯಥಾಸ್ಥಿತಿ ಉಳಿಸಿಕೊಳ್ಳಬೇಕು. ಹಿನ್ನೆಲೆ ಏನೇ ಇದ್ದರೂ ಬದಲಿಸುವಂತಿಲ್ಲ ಎಂದು ಕಾನೂನು ಹೇಳುತ್ತದೆ. ಆದರೂ ಜಿಲ್ಲಾ ನ್ಯಾಯಾಲಯ ಇದಕ್ಕೆ ವಿರುದ್ಧ ತೀರ್ಪು ಕೊಡುತ್ತದೆ. ಉತ್ತರಾಖಂಡದಲ್ಲಿರುವ ಶಿವಲಿಂಗದ ಮೇಲೆ ಬುದ್ಧನ ಶಿಲ್ಪಗಳಿವೆ. ಅದಕ್ಕೆ ಸಂಬಂಧಿಸಿದಂತೆಯೂ ಬೌದ್ಧರು ಒಂದು ಅರ್ಜಿ ಹಾಕಿಕೊಂಡಿದ್ದರು. ಮಂದಿರಗಳು ಮಸೀದಿ ಆಗಿವೆ ಎನ್ನುತ್ತೀರಲ್ಲಾ, ಮಂದಿರಕ್ಕಿಂತಲೂ ಮೊದಲು ಅಶೋಕ 84,000 ವಿಹಾರಗಳನ್ನು ಕಟ್ಟಿಸಿದ್ದ. ಅವೆಲ್ಲಿ ಹೋದವು? ಕಾಲಾನುಕ್ರಮದಲ್ಲಿ ಬದಲಾಗಿವೆ. ಅವನ್ನು ದೊಡ್ಡದು ಮಾಡಲು ಆಗುತ್ತದೆಯೇ ಎಂದು ಪ್ರಶ್ನಿಸಿದರು.

ಸಮಕಾಲೀನ ಸಮಸ್ಯೆಗಳನ್ನು ನಾವು ಯೋಚಿಸಬೇಕು. ಕಾಲದಲ್ಲಿ ಹಿಂದಕ್ಕೆ ಹೋಗುವುದಲ್ಲ. ನಿರುದ್ಯೋಗ ಸಮಸ್ಯೆ, ಪೆಟ್ರೋಲ್ ಬೆಲೆ ಏರಿಕೆ ದೇಶವನ್ನು ಬಾಧಿಸುತ್ತಿದೆ. ಉದ್ಯೋಗಿಗಳ ಸಂಬಳ ಏರಿಕೆಯಾಗುತ್ತಿಲ್ಲ. ಸರಿಯಾದ ರೀತಿಯಲ್ಲಿ ನಾವೆಲ್ಲರೂ ಮಾತನಾಡಬೇಕು. ಸಮಾನತೆ, ಹಕ್ಕುಗಳು ಉಳಿಸಿಕೊಳ್ಳಬೇಕು ಎಂದು ಕರೆ ನೀಡಿದರು.

ಮತ್ತೊಬ್ಬ ನಿವೃತ್ತ ನ್ಯಾಯಮೂರ್ತಿ ಅರಳಿ ನಾಗರಾಜ್ ಮಾತನಾಡಿ, ಚುನಾವಣೆಯಲ್ಲಿ ಸ್ಪರ್ಧಿಸುವ ಎಲ್ಲ ಅಭ್ಯರ್ಥಿಗಳೂ ‘ನಾನು ಗೆದ್ದ ಮೇಲೆ ಪಕ್ಷ ಬದಲಿವುದಿಲ್ಲ’ ಎಂಬ ಅಫಿಡವಿಟ್ ನೀಡಬೇಕು. ಅಂಥದ್ದೊಂದು ಕಾನೂನು ರೂಪಿಸಬೇಕಾದ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟರು. ಸ್ವಾತಂತ್ರ್ಯಕ್ಕೆ ಮೊದಲು ಭಾರತೀಯರಲ್ಲಿ ದೇಶಪ್ರೇಮ ಉಜ್ವಲವಾಗಿತ್ತು. ಆದರೆ ಇತ್ತೀಚೆಗೆ ದೇಶಪ್ರೇಮದ ಬದಲು ಸ್ವಾರ್ಥ ಹೆಚ್ಚಾಗಿದೆ. ಒಂದು ಪಕ್ಷ ಸೇರಿ ಗೆದ್ದು ಬಂದವರು, ನಂತರದ ದಿನಗಳಲ್ಲಿ ತಮ್ಮ ಮನಸ್ಸಿಗೆ ಬಂದಂತೆ ಪಕ್ಷಗಳನ್ನು ಬದಲಿಸುತ್ತಿದ್ದಾರೆ ಎಂದರು.

ಕಾರ್ಯಕ್ರಮದಲ್ಲಿ ಮಣಿಕಂಠ ಮಠಪತಿಯವರು ಸಂವಿಧಾನದ ಪ್ರಸ್ತಾವನೆಯನ್ನು ಬೋಧಿಸಿದರು. ಸಾಹಿತಿ ವಿದ್ಯಾವತಿ ಅಂಕಲಗಿ, ರಾಜೇಶ್ವರಿ ಹಿಪ್ಪರಗಿ, ಜೆ.ಎಸ್. ಪಾಟೀಲ್, ಚಂದ್ರಶೇಖರ ಘಂಟಪ್ಪಗೋಳ ಮತ್ತಿತರರು ಪಾಲ್ಗೊಂಡಿದ್ದರು.

Previous Post

ಗಂಡನ ಅಕ್ರಮ ಸಂಬಂಧಕ್ಕೆ ಬೇಸತ್ತು ಮೂರು ಮಕ್ಕಳಿಗೆ ವಿಷ ಹಾಕಿ ಮಹಿಳೆ ನೇಣಿಗೆ ಶರಣು

Next Post

FIFA World Cup: ವಿಶ್ವ ನಂ.2 ಬಲಿಷ್ಠ ಬೆಲ್ಜಿಯಂ ಔಟ್, ಮೊರಾಕ್ಕೊ ಇನ್..!

Next Post
FIFA World Cup: ವಿಶ್ವ ನಂ.2 ಬಲಿಷ್ಠ ಬೆಲ್ಜಿಯಂ ಔಟ್, ಮೊರಾಕ್ಕೊ ಇನ್..!

FIFA World Cup: ವಿಶ್ವ ನಂ.2 ಬಲಿಷ್ಠ ಬೆಲ್ಜಿಯಂ ಔಟ್, ಮೊರಾಕ್ಕೊ ಇನ್..!

ನಮ್ಮ ಬಗ್ಗೆ

ಹಯಾತ್ TV ರಾಜ್ಯದ ಹೆಸರಾಂತ ವಾರ್ತಾ ವೇದಿಕೆಗಳಲ್ಲಿ ಒಂದಾಗಿದೆ. ಇದರಲ್ಲಿ ರಾಜ್ಯ, ದೇಶ, ವಿದೇಶ, ಕ್ರೀಡೆ, ಸಿನಿಮಾ, ಮನರಂಜನೆ ಸೇರಿ ಹತ್ತಾರು ಸುದ್ದಿ ಗಳನ್ನು ಪ್ರತಿದಿನ ಹಾಕಲಾಗುತ್ತದೆ. ದೇಶ ಬದಲಾಗುತ್ತಿದೆ, ನ್ಯೂಸ್ ಅನ್ನು ಓದುವ ವಿಧಾನ ವೂ ಬದಲಾಗಲಿದೆ. ಈ ಬದಲಾವಣೆಯ ಬೆನ್ನಲ್ಲೇ ನಾವಿದ್ದೇವೆ.

ಜಾಹೀರಾತು ಮತ್ತು ಸುದ್ದಿಗಾಗಿ ಸಂಪರ್ಕಿಸಿ

Hayath Tv Media network
Mangalore
Chief Editor Ashraf Kammaje – 8861948115

Print Media

9483267000

  • Contact Us
  • HayathTV
  • Privacy Policy
  • Terms and Conditions

© 2025 HAYATH TV NEWS.

No Result
View All Result
  • Contact Us
  • HayathTV
  • Privacy Policy
  • Terms and Conditions

© 2025 HAYATH TV NEWS.