Hayathtv
  • ಮುಖಪುಟ
  • ಸುದ್ದಿ
    • All
    • ಕರಾವಳಿ
    • ರಾಜ್ಯ
    • ರಾಷ್ಟ್ರೀಯ
    • ವಿದೇಶ

    ಯುವತಿ ದೇಹದ ಮೇಲಿನ ಕಪ್ಪು ಚುಕ್ಕೆ ಗುರುತಿಸಿದ AI.. ಫೋಟೋ ಅಪ್​ಲೋಡ್​ ಮಾಡುವಾಗ ಹುಷಾರ್​!

    ವಿಜಯಪುರ| SBI ಬ್ಯಾಂಕ್‌ ದರೋಡೆ – ಪಿಸ್ತೂಲ್‌ ತೋರಿಸಿ 8 ಕೋಟಿ ನಗದು, 50 ಕೆಜಿ ಚಿನ್ನದೊಂದಿಗೆ ಪರಾರಿ

    ಕೆಂಪು ಕಲ್ಲು ಬಗ್ಗೆ ನಿಯಮ ಸಡಿಲಿಕೆ, 25 ಗುತ್ತಿಗೆದಾರರಿಗೆ ಪರವಾನಗಿ, ಕಲ್ಲಿನ ದರ ಇಳಿಯಲಿದೆ ; ಯುಟಿ ಖಾದರ್

    ಕೆಂಪು ಕಲ್ಲು ಬಗ್ಗೆ ನಿಯಮ ಸಡಿಲಿಕೆ, 25 ಗುತ್ತಿಗೆದಾರರಿಗೆ ಪರವಾನಗಿ, ಕಲ್ಲಿನ ದರ ಇಳಿಯಲಿದೆ ; ಯುಟಿ ಖಾದರ್

    ಮಾಲೂರು ಶಾಸಕ ನಂಜೇಗೌಡ ಆಯ್ಕೆ ಅಸಿಂಧು – ಮರು ಮತ ಎಣಿಕೆಗೆ ಹೈಕೋರ್ಟ್ ಆದೇಶ

    ಸ್ವಾತಂತ್ರ್ಯೋತ್ಸವ ಪ್ರಯುಕ್ತ SDPI ಯಿಂದ ಬಿಸಿ ರೋಡ್ ನಲ್ಲಿ ತಿರಂಗಾ ರ್‍ಯಾಲಿ ಹಾಗೂ ಸಾರ್ವಜನಿಕ ಸಭೆ

    ಬಿಜೆಪಿ ಮಾಡಿದ 40% ಕಮಿಷನ್ ಹಗರಣ ಮತ್ತು ಕೋವಿಡ್ ಹಗರಣದ ವಿರುದ್ಧ ಕ್ರಮಕ್ಕೆ ಮುಂದಾಗದ ಕಾಂಗ್ರೆಸ್‌ ಸರಕಾರ ಹೊಂದಾಣಿಕೆ ರಾಜಕಾರಣ ಮಾಡುತ್ತಿದೆ – ಎಸ್‌ಡಿಪಿಐ:

    15 ವರ್ಷಕ್ಕಿಂತ ಹಳೇ ಸರ್ಕಾರಿ ವಾಹನಗಳನ್ನ ಗುಜರಿಗೆ ಹಾಕಿ: ಸರ್ಕಾರ ಆದೇಶ

    ಕೇರಳದಲ್ಲಿ ಹೊಸ ರೋಗದ ಹಾವಳಿ; 67 ಮಂದಿಗೆ ಮೆದುಳು ತಿನ್ನುವ ಅಮೀಬಾ ಸೋಂಕು, 17 ಜನ ಸಾವು

    ಕೇರಳದಲ್ಲಿ ಹೊಸ ರೋಗದ ಹಾವಳಿ; 67 ಮಂದಿಗೆ ಮೆದುಳು ತಿನ್ನುವ ಅಮೀಬಾ ಸೋಂಕು, 17 ಜನ ಸಾವು

    ಬಂಟ್ವಾಳ : ತಲ್ವಾರ್ ದಾಳಿ  ಸುಳ್ಳೆಂದು ಆರೋಪಿಸಿ ಬಂಧಿತನಾಗಿದ್ದ ಉಮ್ಮರ್ ಫಾರೂಕ್ ಸಜಿಪರವರಿಗೆ ಜಾಮೀನು ಮಂಜೂರು

    ಪ್ರೀತಿಸಿದವ್ರ ಜೊತೆ ಮನೆಯವ್ರು ಮದುವೆ ಮಾಡಲ್ಲ – ವಿಷ ಕುಡಿದ ಒಂದೇ ಕುಟುಂಬದ ಮೂವರು ಯುವತಿಯರು, ಒಬ್ಬಳು ಸಾವು

    ಪ್ರೀತಿಸಿದವ್ರ ಜೊತೆ ಮನೆಯವ್ರು ಮದುವೆ ಮಾಡಲ್ಲ – ವಿಷ ಕುಡಿದ ಒಂದೇ ಕುಟುಂಬದ ಮೂವರು ಯುವತಿಯರು, ಒಬ್ಬಳು ಸಾವು

    • ರಾಜ್ಯ
    • ರಾಷ್ಟ್ರೀಯ
    • ವಿದೇಶ
    • ಚುನಾವಣೆ
  • ಕರಾವಳಿ
  • ಕ್ರೈಮ್
  • ವಿಶೇಷ ಸುದ್ದಿ
  • ಕ್ರೀಡೆ
  • ಮನೋರಂಜನೆ
  • ವೀಡಿಯೋ ಗ್ಯಾಲರೀ
No Result
View All Result

Home ಸುದ್ದಿ ರಾಷ್ಟ್ರೀಯ

ಗುಜರಾತ್‍ನಲ್ಲಿ ಇಂದು ಮೊದಲ ಹಂತದ ಮತದಾನ – ತವರು ರಾಜ್ಯದಲ್ಲಿ ಮೋದಿ, ಶಾ ಜೋಡಿಗೆ ಅಗ್ನಿ ಪರೀಕ್ಷೆ

editor tv by editor tv
December 1, 2022
in ರಾಷ್ಟ್ರೀಯ, ಸುದ್ದಿ
0
ಗುಜರಾತ್‍ನಲ್ಲಿ ಇಂದು ಮೊದಲ ಹಂತದ ಮತದಾನ – ತವರು ರಾಜ್ಯದಲ್ಲಿ ಮೋದಿ, ಶಾ ಜೋಡಿಗೆ ಅಗ್ನಿ ಪರೀಕ್ಷೆ
1.9k
VIEWS
Share on FacebookShare on TwitterShare on Whatsapp

ಗಾಂಧಿನಗರ: ತೀವ್ರ ಕುತೂಹಲ ಕೆರಳಿಸಿರುವ ಗುಜರಾತ್ ವಿಧಾನಸಭೆಗೆ (Gujarat Assembly Election) ಇಂದು ಮೊದಲ ಹಂತದ ಮತದಾನ ನಡೆಯಲಿದೆ. ಅಬ್ಬರದ ಪ್ರಚಾರದ ಬಳಿಕ ಇಂದು ಮೊದಲ ಹಂತದ ಮತದಾನ ನಡೆಯುತ್ತಿದ್ದು, 89 ಕ್ಷೇತ್ರಗಳಲ್ಲಿ 788 ಅಭ್ಯರ್ಥಿಗಳ ಭವಿಷ್ಯ ನಿರ್ಧಾರವಾಗಲಿದೆ. ಚುನಾವಣಾ ಆಯೋಗ ಸಕಲ ಸಿದ್ಧತೆ ಮಾಡಿಕೊಂಡಿದ್ದು ಮೋದಿ ತವರು ರಾಜ್ಯದಲ್ಲಿ ಈ ಬಾರಿ ಯಾರು ಅಧಿಕಾರದ ಗದ್ದುಗೆ ಏರಲಿದ್ದಾರೆ ಎನ್ನುವ ಕುತೂಹಲ ಮೂಡಿದೆ.

ಪ್ರಧಾನಿ ನರೇಂದ್ರ ಮೋದಿ (Narendra Modi) ಮತ್ತು ಕೇಂದ್ರ ಗೃಹ ಸಚಿವ ಅಮಿತ್‌ ಶಾ (Amit Shah) ತವರು ರಾಜ್ಯ ಗುಜರಾತ್‍ನ 19 ಜಿಲ್ಲೆಗಳ 89 ಸ್ಥಾನಗಳಿಗೆ ಮತದಾನ ನಡೆಯಲಿದೆ. ಗುಜರಾತ್‍ನ ಸೌರಾಷ್ಟ್ರ ಮತ್ತು ದಕ್ಷಿಣ ಗುಜರಾತ್‍ನ ವಿಧಾನಸಭಾ ಕ್ಷೇತ್ರಗಳ 14,382 ಮತಗಟ್ಟೆಗಳಲ್ಲಿ ಬೆಳಗ್ಗೆ 8 ರಿಂದ ಸಂಜೆ 5 ಗಂಟೆಯವರೆಗೆ ಮತದಾನ ನಡೆಯಲಿದೆ.

ಕಚ್, ಸುರೇಂದ್ರನಗರ, ರಾಜ್‍ಕೋಟ್, ಮೊರ್ಬಿ, ಜಾಮ್‍ನಗರ್, ದ್ವಾರಕಾ, ಜುನಾಗಢ್, ಪೋರಬಂದರ್, ಅಮ್ರೇಲಿ, ಗಿರ್ ಸೋಮನಾಥ್, ಬೋಟಾಡ್, ಭಾವನಗರ, ಭರೂಚ್, ನರ್ಮದಾ, ಡ್ಯಾಂಗ್ಸ್, ತಾಪಿ, ಸೂರತ್, ನವಸಾರಿ ಮತ್ತು ವಲ್ಸಾದ್ ಜಿಲ್ಲೆಗಳಲ್ಲಿ ಮತದಾನ ನಡೆಯಲಿದೆ. ಸಾಂಪ್ರದಾಯಿಕವಾಗಿ ಎದುರಾಳಿಗಳಾದ ಬಿಜೆಪಿ (BJP) ಮತ್ತು ಕಾಂಗ್ರೆಸ್ (Congress) ಜೊತೆಗೆ ಈ ಬಾರಿ ಆಪ್ (AAP) ಕೂಡಾ ಸೇರ್ಪಡೆಯಾಗಿದ್ದು, ತ್ರಿಕೋನ ಸ್ಪರ್ಧೆ ಏರ್ಪಟ್ಟಿದೆ. ಆಪ್ ಸಿಎಂ ಅಭ್ಯರ್ಥಿ ಇಸುದಾನ್ ಗಡ್ವಿ, ಗುಜರಾತ್ ಮಾಜಿ ಸಿಎಂ ಪುರುಷೋತ್ತಮ ಸೋಲಂಕಿ, ಕ್ರಿಕೆಟಿಗ ರವೀಂದ್ರ ಜಡೇಜಾ ಪತ್ನಿ ರಿವಾಬಾ ಮೊದಲ ಹಂತದಲ್ಲಿ ಅದೃಷ್ಟ ಪರೀಕ್ಷೆ ಎದುರಿಸಲಿದ್ದಾರೆ.

ಮೊದಲ ಹಂತದಲ್ಲಿ ಬಿಜೆಪಿ 9 ಕಾಂಗ್ರೆಸ್ 6 ಮತ್ತು ಎಎಪಿ ಐದು ಮಹಿಳಾ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ. ಮೊದಲ ಹಂತದಲ್ಲಿ ಕಣದಲ್ಲಿರುವ ಒಟ್ಟು 788 ಅಭ್ಯರ್ಥಿಗಳಲ್ಲಿ 718 ಪುರುಷರು ಮತ್ತು 70 ಮಹಿಳೆಯರು ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ. ಮಾಯಾವತಿ ನೇತೃತ್ವದ ಬಹುಜನ ಸಮಾಜ ಪಕ್ಷ ಮೊದಲ ಹಂತದಲ್ಲಿ 57 ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ. ಭಾರತೀಯ ಬುಡಕಟ್ಟು ಪಕ್ಷದ 14 ಅಭ್ಯರ್ಥಿಗಳು, 339 ಸ್ವತಂತ್ರ ಅಭ್ಯರ್ಥಿಗಳು ಕಣಕ್ಕಿಳಿದಿದ್ದಾರೆ.

ಗುಜರಾತ್‍ನಲ್ಲಿ ಆಡಳಿತಾರೂಢ ಬಿಜೆಪಿಗೆ ಸುಮಾರು ಮೂರು ದಶಕಗಳ ಆಡಳಿತ ವಿರೋಧಿ ಅಲೆಯಿದೆ. ಈ ಮಧ್ಯೆ ಗುಜರಾತ್ ರಾಜಕೀಯದಲ್ಲಿ ಆಮ್ ಆದ್ಮಿ ಪಕ್ಷದ ತ್ವರಿತ ಬೆಳವಣಿಗೆ ಬಿಜೆಪಿಗೆ ದಿಗಿಲು ಹುಟ್ಟಿಸಿದೆ. ಪಂಜಾಬ್‍ನಲ್ಲಿ ಕಾಂಗ್ರೆಸ್, ಬಿಜೆಪಿ ಮತ್ತು ಅಕಾಲಿಯಂತಹ ಹಳೆಯ ಪಕ್ಷಗಳು ಆಮ್ ಆದ್ಮಿಪಕ್ಷದ ಮುಂದೆ ಮಂಡಿಯೂರಿವೆ. ದೆಹಲಿ ಮತ್ತು ಪಂಜಾಬ್ ಮಾದರಿಯಲ್ಲಿ ಗುಜರಾತ್‍ನ ಜನರಿಗೆ ಅಗ್ಗದ ವಿದ್ಯುತ್ ಮತ್ತು ನೀರನ್ನು ನೀಡುವ ಭರವಸೆಯನ್ನು ನೀಡಿದೆ. ಕಳೆದ ಒಂದು ವರ್ಷದಿಂದ ಆಮ್ ಆದ್ಮಿ ಪಕ್ಷದ ಇಬ್ಬರು ನಾಯಕರಾದ ಕೇಜ್ರಿವಾಲ್ ಹಾಗೂ ಮನಿಶ್ ಸಿಸೋಡಿಯಾ ಗುಜರಾತ್‌ನಲ್ಲಿ ನಿರಂತರ ಪ್ರವಾಸ ಮಾಡಿದ್ದು, ಮೂರು ದಶಕದಿಂದ ಬಿಜೆಪಿ ಮಣಿಸಲು ಸಾಧ್ಯವಾಗದ ಕಾಂಗ್ರೆಸ್‍ಗೆ ಸೆಡ್ಡು ಹೊಡೆದಿದ್ದಾರೆ. ಬಿಜೆಪಿ ಸೋಲಿಸಲು ನಾವೇ ಸಮರ್ಥ ಎನ್ನುವ ಸಂದೇಶ ರವಾನಿಸಿದ್ದಾರೆ. ವಿರೋಧ ಪಕ್ಷವಾಗಿರುವ ಕಾಂಗ್ರೆಸ್‍ಗೂ ಇರುವ ವಿರೋಧಿ ಅಲೆಯನ್ನೇ ಎಎಪಿ ನಾಯಕರು ಹೊಸ ಅವಕಾಶ ಎನ್ನುವಂತೆ ಬಳಸಿಕೊಳ್ಳುತ್ತಿದ್ದಾರೆ.

ಆಮ್ ಆದ್ಮಿ ಪಕ್ಷವು ಇಲ್ಲಿಯವರೆಗೆ ಎರಡು ರಾಜ್ಯಗಳಲ್ಲಿ ಅಧಿಕಾರ ಹಿಡಿದಿದೆ. ಆಮ್ ಆದ್ಮಿ ಪಕ್ಷ ಸಾಧಿಸಿರುವ ಎರಡು ಪ್ರಮುಖ ಯಶಸ್ಸುಗಳು ಕಾಂಗ್ರೆಸ್ ವಿರುದ್ಧವೇ ಆಗಿದೆ. ದೆಹಲಿ ಹಾಗೂ ಪಂಜಾಬ್‌ನಲ್ಲಿ ಆಡಳಿತದಲ್ಲಿದ್ದ ಕಾಂಗ್ರೆಸ್ ಸೋಲಿಸಿ ಅಧಿಕಾರ ಹಿಡಿದಿದೆ. ಈ ಎರಡು ರಾಜ್ಯಗಳಲ್ಲಿ ಬಿಜೆಪಿ ಬಹಳಷ್ಟು ದುರ್ಬಲವಾಗಿತ್ತು. ಆದರೆ ಗುಜರಾತ್‍ನಲ್ಲಿ ಎಎಪಿಗೆ ಸುಲಭವಾಗಿ ಬಿಜೆಪಿಯನ್ನು ಸೋಲಿಸಲು ಸಾಧ್ಯವಿಲ್ಲ. ಅಷ್ಟಕ್ಕೂ ಬಿಜೆಪಿಯನ್ನು ಆಡಳಿತದಿಂದ ಕೆಳಗಿಳಿಸಿದ ಇತಿಹಾಸ ಆಮ್ ಆದ್ಮಿ ಪಕ್ಷಕ್ಕೆ ಇಲ್ಲ. ಅದಾಗ್ಯೂ ಆಪ್ ಈ ಪ್ರಯತ್ನದಲ್ಲಿದ್ದು, ಇಂದು ಗೆಲುವು ಯಾರತ್ತ ಎನ್ನುವುದಕ್ಕೆ ಸಣ್ಣ ಸುಳಿವು ಸಿಗಲಿದೆ.

Previous Post

ಜನಸಾಮಾನ್ಯರ ಸಮಸ್ಯೆಗಳಿಗೆ ಸ್ಪಂದಿಸುವ ಮೂಲಕ SDPI ಪಕ್ಷವನ್ನು ಬಲಪಡಿಸಿ:SDPI ದಕ್ಷಿಣ ಕನ್ನಡ ಜಿಲ್ಲಾ ಕಾರ್ಯಕಾರಿಣಿ ಸಭೆಯಲ್ಲಿ ಅಬ್ದುಲ್ ಮಜೀದ್ ಮೈಸೂರು ಕರೆ

Next Post

11 ಅತ್ಯಾಚಾರ ಅಪರಾಧಿಗಳ ಬಿಡುಗಡೆ ಪ್ರಶ್ನಿಸಿ ಸುಪ್ರೀಂ ಮೆಟ್ಟಿಲೇರಿದ ಬಿಲ್ಕಿಸ್ ಬಾನೋ

Next Post
11 ಅತ್ಯಾಚಾರ ಅಪರಾಧಿಗಳ ಬಿಡುಗಡೆ ಪ್ರಶ್ನಿಸಿ ಸುಪ್ರೀಂ ಮೆಟ್ಟಿಲೇರಿದ ಬಿಲ್ಕಿಸ್ ಬಾನೋ

11 ಅತ್ಯಾಚಾರ ಅಪರಾಧಿಗಳ ಬಿಡುಗಡೆ ಪ್ರಶ್ನಿಸಿ ಸುಪ್ರೀಂ ಮೆಟ್ಟಿಲೇರಿದ ಬಿಲ್ಕಿಸ್ ಬಾನೋ

ನಮ್ಮ ಬಗ್ಗೆ

ಹಯಾತ್ TV ರಾಜ್ಯದ ಹೆಸರಾಂತ ವಾರ್ತಾ ವೇದಿಕೆಗಳಲ್ಲಿ ಒಂದಾಗಿದೆ. ಇದರಲ್ಲಿ ರಾಜ್ಯ, ದೇಶ, ವಿದೇಶ, ಕ್ರೀಡೆ, ಸಿನಿಮಾ, ಮನರಂಜನೆ ಸೇರಿ ಹತ್ತಾರು ಸುದ್ದಿ ಗಳನ್ನು ಪ್ರತಿದಿನ ಹಾಕಲಾಗುತ್ತದೆ. ದೇಶ ಬದಲಾಗುತ್ತಿದೆ, ನ್ಯೂಸ್ ಅನ್ನು ಓದುವ ವಿಧಾನ ವೂ ಬದಲಾಗಲಿದೆ. ಈ ಬದಲಾವಣೆಯ ಬೆನ್ನಲ್ಲೇ ನಾವಿದ್ದೇವೆ.

ಜಾಹೀರಾತು ಮತ್ತು ಸುದ್ದಿಗಾಗಿ ಸಂಪರ್ಕಿಸಿ

Hayath Tv Media network
Mangalore
Chief Editor Ashraf Kammaje – 8861948115

Print Media

9483267000

  • Contact Us
  • HayathTV
  • Privacy Policy
  • Terms and Conditions

© 2025 HAYATH TV NEWS.

No Result
View All Result
  • Contact Us
  • HayathTV
  • Privacy Policy
  • Terms and Conditions

© 2025 HAYATH TV NEWS.