

ಬೆಳಗಾವಿ: ಪಂಚಮಸಾಲಿ ಸಮುದಾಯಕ್ಕೆ 2A ಮೀಸಲಾತಿ (2A Reservation) ವಿಚಾರ ಕುರಿತು ಇಂದು (ನವೆಂಬರ್ 13) ಗೋಕಾಕ್ ಪಟ್ಟಣದಲ್ಲಿ ಲಿಂಗಾಯತ ಪಂಚಮಸಾಲಿ ಸಮಾವೇಶ ನಡೆಯುತ್ತಿದ್ದು, ಸಮಾವೇಶಕ್ಕೆ ಆಗಮಿಸುತ್ತಿರುವ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್‌ಗೆ (Basangouda Patil Yatnal) ಸತೀಶ್ ಜಾರಕಿಹೊಳಿ (Satish Jarkiholi) ಬೆಂಬಲಿಗರು ಎಚ್ಚರಿಕೆ ನೀಡಿದ್ದಾರೆ.
ಬೆಳಗಾವಿ (Belagavi) ಜಿಲ್ಲೆಯ ಗೋಕಾಕ ಪಟ್ಟಣದಲ್ಲಿ ನಡೆಯುತ್ತಿರುವ ಬೃಹತ್ ಪಂಚಮಸಾಲಿ ಸಮಾಜದ ಸಮಾವೇಶದಲ್ಲಿ ಹೋರಾಟದ ವಿಚಾರ ಹೊರತುಪಡಿಸಿ ಸತೀಶ್ ಜಾರಕಿಹೊಳಿ (Satish Jarkiholi) ಬಗ್ಗೆ ಮಾತನಾಡಿದ್ರೆ ವೇದಿಕೆಯಲ್ಲೇ ನುಗ್ಗಿ ಹೊಡೆಯುವುದಾಗಿ ಎಚ್ಚರಿಸಿದ್ದಾರೆ.

ಈ ವೇಳೆ ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳಗೆ ಮಾನಸಿಕ ಅಸ್ವಸ್ಥ ಎಂದಿರುವ ಸತೀಶ್ ಬೆಂಬಲಿಗರು, ಯಡಿಯೂರಪ್ಪ, ವಿಜಯೇಂದ್ರ ಬಗ್ಗೆ ಮಾತನಾಡಿದ ಹಾಗೇ ಗೋಕಾಕ್‌ನಲ್ಲಿ ಏನಾದ್ರೂ ನಾಟಕ ಹಚ್ಚಿದ್ರೆ, ಇಲ್ಲಿಂದ ಹೋಗೋದು ಕಠಿಣವಾಗುತ್ತದೆ ಎಂದು ಖಡಕ್ ವಾರ್ನಿಂಗ್ ನೀಡಿದ್ದಾರೆ.
2A ಮೀಸಲಾತಿ ಹೋರಾಟಕ್ಕೆ ನಮ್ಮ ಪರಿಪೂರ್ಣ ಬೆಂಬಲ ಇದೆ. ನೀನು ಬಂದೀಯಾ ಪುಟ್ಟ ಹೋದಿಯಾ ಪುಟ್ಟ ಅಷ್ಟೇ ಇರಬೇಕು. ಅದನ್ನ ಬಿಟ್ಟು ಮಾತನಾಡಿದ್ರೆ ವೇದಿಕೆಗೆ ನುಗ್ಗಿ ಹೊಡೆಯುತ್ತೇವೆ. ನಮ್ಮ ಸಾಹುಕಾರ್ ಹೆಸರು ವೇದಿಕೆ ಮೇಲೆ ತೆಗೆದ್ರೆ ಇದು ನಿನಗೆ ಓಪನ್ ಚಾಲೆಂಜ್ ಮಾಡುತ್ತೇವೆ. ಧಮ್ ಇದ್ರೆ, ತಾಕತ್ ಇದ್ರೆ ನಮ್ಮ ಸಾಹುಕಾರ್ ಹೆಸರು ವೇದಿಕೆಯಲ್ಲಿ ತೆಗಿ ಆಮೇಲೆ ಇದೆ ನಿನಗೆ ಎಂದು ಯತ್ನಾಳ್‌ಗೆ ನೇರವಾಗಿ ಸವಾಲ್ ಹಾಕಿದ್ದಾರೆ.