

ಬಂಟ್ವಾಳ :.ಮುಹಿಯ್ಯುದ್ದೀನ್ ಜುಮಾ ಮಸೀದಿ ಮಿತ್ತಬೈಲ್ ಇದರ ವಾರ್ಷಿಕ ಮಹಾಸಭೆ ಅದ್ದೇಡಿ ಮುಹಮ್ಮದ್ ಇವರ ಅಧ್ಯಕ್ಷತೆಯಲ್ಲಿ ಇತ್ತೀಚಿಗೆ ಮಿತ್ತಬೈಲ್ ಕೇಂದ್ರ ಜುಮಾ ಮಸೀದಿ ಯಲ್ಲಿ ನಡೆಯಿತು. ಸಭೆಯನ್ನು ಮಸೀದಿ ಖತೀಬರಾದ ಅಶ್ರಫ್ ಫೈಝಿ ದುವಾ ನೆರೆವೇರಿಸಿ, ಪ್ರಸ್ತಾವಿಕ ಭಾಷಣ ಗೈದರು.ಮುದರ್ರಿಸ್ ಉಮರ್ ಫಾರೂಕ್ ಫೈಝಿ ಜಮಾತ್ ಅಧ್ಯಕ್ಷರಾದ ಸಾಗರ್ ಮುಹಮ್ಮದ್ ಉಪಸ್ಥಿತರಿದ್ದರು. ವಾರ್ಷಿಕ ವರದಿ ಹಾಗು ಲೆಕ್ಕ ಪತ್ರಗಳನ್ನು ಅಶ್ರಫ್ ಶಾಂತಿಅಂಗಡಿ ಹಾಗು ಅಕ್ಬರ್ ಅಲಿ ಮಂಡಿಸಿದರು. ನಂತರ ನೂತನ ಆಡಳಿತ ಸಮಿತಿ ಯನ್ನು ರಚಿಸಲಾಯಿತು.ಅಧ್ಯಕ್ಷರಾಗಿ ಸಯ್ಯದ್ ಫಲುಲ್ ತಂಗಳ್ ತಾಳಿಪಡ್ಪು, ಉಪಾಧ್ಯಕ್ಷರುಗಳಾಗಿ ಅಬ್ದುಲ್ ರಹಿಮಾನ್. ಎಸ್. ಹೆಚ್.ಹಾಗು ಜಮಾಲ್ ಎ1 ಶಾಂತಿ ಅಂಗಡಿ, ಪ್ರಧಾನ ಕಾರ್ಯದರ್ಶಿಯಾಗಿ ಅಕ್ಬರ್ ಅಲಿ ಪೊನ್ನೋಡಿ,
ಜೊತೆ ಕಾರ್ಯದರ್ಶಿಗಳಾಗಿ ಅಶ್ರಫ್ ಶಾಂತಿಅಂಗಡಿ,ಆದಂ ಪಲ್ಲ, ಇಕ್ಬಾಲ್ ನಂದರೆಬೆಟ್ಟು. ಕೋಶಾಧಿಕಾರಿಯಾಗಿ ಹಬೀಬುಲ್ಲ, ಲೆಕ್ಕ ಪರಿಶೋಧಕರಾಗಿ ಮುಹಮ್ಮದ್ ಅದ್ದೇಡಿಯವರನ್ನು ಆಯ್ಕೆ ಮಾಡಲಾಯಿತು.