

ಉಚ್ಚಿಲದಲ್ಲಿರುವ ಬ್ಲೂವೇವ್ಸ್ ವಸತಿ ಸಂಕರ್ಣದಲ್ಲಿ ಅವ್ಯವಸ್ಥೆ: ನಿವಾಸಿಗಳ ಅಕ್ರೋಶ.
ಉಚ್ಚಿಲದ ಹೃದಯ ಭಾಗದಲ್ಲಿರುವ ಬಹು ಮಹಡಿ ವಸತಿ ಸಂಕೀರ್ಣ ಬ್ಲ್ಯೂ ವೇವ್ಸ್ ನಲ್ಲಿ ಅವ್ಯವಸ್ಥೆ ತಾಂಡವಾಡುತ್ತಿದ್ದು ಅಲ್ಲಿಯ ನಿವಾಸಿಗಳು ಮಾಧ್ಯಮದವರ ಜೊತೆ ತಮ್ಮ ಸಮಸ್ಯೆ ಹೇಳಿಕೊಂಡಿದ್ದಾರೆ..
ಕಟ್ಟಡದಲ್ಲಿ ೫ ಮಂದಿ ಮಾಲೀಕರಿದ್ದು, ಅವರು ಇಲ್ಲಿಯ ನಿವಾಸಿಗಳ ಮಾತಿಗೆ ಸ್ಪಂದಿಸುತ್ತಿಲ್ಲ. ಈ ಕಟ್ಟಡದಲ್ಲಿ ಕುಡಿಯುವ ನೀರಿನ ಸಮಸ್ಯೆ ಇದ್ದು, ಅದನ್ನು ಕೂಡ ಪರಿಹರಿಸುತ್ತಿಲ್ಲ. ಕಟ್ಟಡದ ಸುತ್ತಲೂ ತ್ಯಾಜ್ಯ ರಾಶಿ ಬಿದ್ದಿದ್ದು, ಅದನ್ನು ಕೂಡ ತೆರವುಗೊಳಿಸುತ್ತಿಲ್ಲ.
ನೀರಿನ ಟ್ಯಾಂಕ್ ಪಕ್ಕದಲ್ಲಿಯೇ ತ್ಯಾಜ್ಯದ ರಾಶಿ ಇದ್ದು, ಇಲ್ಲಿಯ ನೀರು ಕುಡಿಯಲು ಯೋಗ್ಯವಾಗಿಲ್ಲ. ಕಟ್ಟಡದ ನೆಲ ಅಂತಸ್ತಿನ ನೀರಿನ ಪೈಪ್ ಒಡೆದಿದ್ದು, ಅದನ್ನೂ ರಿಪೇರಿ ಮಾಡುತ್ತಿಲ್ಲ.
ಕಟ್ಟಡದ ಮಾಲೀಕರಲ್ಲಿ ಸೊಸೈಟಿ ಮಾಡಲು ಹೇಳಿದ್ದರೂ, ಅವರು ಸ್ಪಂದಿಸುತ್ತಿಲ್ಲ. ಈ ವಸತಿ ಸಂಕರ‍್ಣದಲ್ಲಿ ಮನೆ ಮಾಡಿರುವುದೇ ನಮ್ಮ ಕರ್ಮ ಎಂದು ಇಲ್ಲಿ ನಿವಾಸಿಗಳು ಅಲವಲತ್ತುಕೊಂಡಿದ್ದಾರೆ.