

ಕಲಬುರಗಿ: ಪಿಎಸ್‌ಐ (PSI) ನೇಮಕಾತಿ ಪರೀಕ್ಷೆ ಅಕ್ರಮ ಪ್ರಕರಣದಲ್ಲಿ ಭಾಗಿಯಾಗಿದ್ದ ಮತ್ತೋರ್ವ ಆರೋಪಿಯನ್ನು (Accused) ಸಿಐಡಿ (CID) ತಂಡ ಬಂಧಿಸಿದೆ.
ಸುಪ್ರಿಯಾ ಹುಂಡೆಕರ್ (26) (Supriya Hundekar) ಬಂಧಿತ ಆರೋಪಿಯಾಗಿದ್ದು, ಕಲ್ಯಾಣ ಕರ್ನಾಟಕ ಮಹಿಳಾ ಖೋಟಾದಲ್ಲಿ ಸುಪ್ರೀಯಾ ಮೊದಲ ಸ್ಥಾನ ಪಡೆದಿದ್ದಳು.
ಕಿಂಗ್ ಪಿನ್ ಆರ್.ಡಿ.ಪಾಟೀಲ್ ಮೂಲಕ ಪರೀಕ್ಷೆಯಲ್ಲಿ ಸುಪ್ರಿಯಾ ಅಕ್ರಮ ನಡೆಸಿದ್ದಳು. ಕಲಬುರಗಿಯ ಸರ್ಕಾರಿ ಪದವಿ ಕಾಲೇಜಿನಲ್ಲಿ ಬ್ಲೂಟೂತ್ ಬಳಸಿ, ಪರೀಕ್ಷೆಯಲ್ಲಿ (Exams) ಅಕ್ರಮ ನಡೆಸಿದ್ದಳು ಎಂದು ಸಿಐಡಿ ಮೂಲಗಳು ತಿಳಿಸಿವೆ.
ಈ ಕುರಿತು ಗುಲ್ಬರ್ಗ ಪೋಲಿಸ್ ಠಾಣೆಯಲ್ಲಿ (Gulbarga Police Station) ಸಿಐಡಿ ಪ್ರಕರಣ ದಾಖಲಿಸಿದೆ. ಈ ಮೂಲಕ ಕಲಬುರಗಿಯಲ್ಲಿ ಪಿಎಸ್‌ಐ (PSI) ಪ್ರಕರಕ್ಕೆ ಸಂಬಂಧಿಸಿದಂತೆ ಬಂಧಿತ ಆರೋಪಿಗಳ ಸಂಖ್ಯೆ 52ಕ್ಕೆ ಏರಿಕೆಯಾಗಿದೆ.